Breaking News

ಇಂದು ರಾತ್ರಿಯಿಂದ ‘ಕರ್ನಾಟಕದಲ್ಲಿ 14 ದಿನ ಕೊವಿಡ್ ಕರ್ಫ್ಯೂ’: ಏನಿರುತ್ತೆ? ಏನಿರಲ್ಲ? ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ

Spread the love

ಬೆಂಗಳೂರು: ಕರೊನ ಮಟ್ಟ ಹಾಕುವ ನಿಟ್ಟಿನಲ್ಲಿ ಇಂದು ರಾತ್ರಿ 9 ಗಂಟೆಯಿಂದ 14 ದಿನಗಳವರೆಗೆ ರಾಜ್ಯಾಧ್ಯಂತ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. 14 ದಿನಗಳವರೆಗೆ ಕರ್ನಾಟಕದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತಿದೆ. ಅಂದ ಹಾಗೇ 14 ದಿನಗಳ ತನಕ ಪ್ರತಿ ದಿನ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರವೇ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ಘೋಷಣೆ ಮಾಡಿದ್ದಾರೆ.

ಇದೇ ವೇಳೆ ಅವರು ಮಾತನಾಡಿ ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 10 ಗಂಟೆಯ ನಂತ್ರ ಎಲ್ಲವೂ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ ಎಂದರು. ಗಾರ್ಮೆಂಟ್ಸ್ ನೌಕರರನ್ನು ಬಿಟ್ಟು, ಕಟ್ಟಡ ಕಾಮಗಾರಿ, ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಿಲ್ಲ. ವೈದ್ಯಕೀಯ, ಅಗತ್ಯ ಸೇವೆ ಎಂದಿನಂತೆ ಇರಲಿದೆ. ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6ರವೆರೆಗ ಕರ್ಪ್ಯೂ ಮುಂದುವರೆಯಲಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಬಂದೋಬಸ್ತ್ ಮಾಡಲಿದ್ದಾರೆ. ತಾಲೂಕು ಆಡಳಿತ ಕೂಡ ನಿಯಂತ್ರಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಏನಿರುತ್ತೆ?

– ದಿನಸಿ ಅಂಗಡಿ ಮತ್ತು ದಿನಬಳಕೆ ವಸ್ತುಗಳ ಖರೀದಿಗೆ ಜನತೆಗೆ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅವಕಾಶ
– ಉತ್ಪಾದನಾ ವಲಯ, ಕಟ್ಟಡ ನಿರ್ಮಾಣ ಮಾಡೋದಕ್ಕೆ ಅವಕಾಶ
– ಆಸ್ಪತ್ರೆ, ಮೆಡಿಕಲ್ ಸ್ಟೋರ್​, ಲ್ಯಾಬ್​ಗಳು, ರಕ್ತನಿಧಿಕೇಂದ್ರಗಳು, ಬ್ಯಾಂಕ್‌ಗಳು ಎಟಿಎಂಗಳು
– ಗೂಡ್ಸ್​ ವಾಹನಗಳ ಸಂಚಾರ ಅವಕಾಶ ಹೊರ ರಾಜ್ಯಕ್ಕೆ ಅವಕಾಶ ಇರೋದಿಲ್ಲ
– ಹೋಟೆಲ್‌ ಗಳಲ್ಲಿ, ದರ್ಶನಿಗಳಲ್ಲಿ ಬಾರ್​, ವೈನ್​ಶಾಪ್​ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ ನೀಡಲಾಗಿದೆ.
– ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲು ರೈತರಿಗೆ ಅವಕಾಶ

ಏನಿರಲ್ಲ
– ಇಂದು ರಾತ್ರಿ 9 ಗಂಟೆಯ ನಂತರ ರಾಜ್ಯದಲ್ಲಿ ಕಂಪ್ಲೀಟ್‌ ಕರ್ಫ್ಯೂ ಜಾರಿಗೆ ಬರಲಿದೆ
– ಈ ವೇಳೆ ಜನತೆ ಅನವಶ್ಯಕವಾಗಿ ಓಡಾಡುವಂತಿಲ್ಲ. ಎಲ್ಲಾ ರೀತಿಯ ಜನತೆಯ ವಾಹನ ಸಂಚಾರಕ್ಕೆ ಬ್ರೇಕ್‌
– ಸಾರಿಗೆ ಬಸ್, (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಬಸ್‌) ಮೆಟ್ರೊ ರೈಲು ಸಂಚಾರ ಇರುವುದಿಲ್ಲ

ಈ ನಡುವೆ ‘ಕೊವಿಡ್​ ಕರ್ಫ್ಯೂ’ ಗಾಗಿ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ರಿಲೀಸ್‌ ಮಾಡಿದ್ದು ಅದರ ಬಗೆಗಿನ ಮಾಹಿತಿ ಇಲ್ಲಿದೆ

  • ಈ ಅವಧಿಯಲ್ಲಿ ನಿಗದಿಯಾಗಿರುವ ವಿಮಾನಗಳು ಮತ್ತು ರೈಲುಗಳು ಪ್ರಯಾಣ ಮುಂದುವರಿಸಬಹುದು
  • ಟ್ಯಾಕ್ಸಿಗಳು, ಆಟೋ ರಿಕ್ಷಾಗಳು ಸಂಚಾರ ಮಾಡುವಂತಿಲ್ಲ
  • ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ / ಕೋಚಿಂಗ್‌ ಸಂಸ್ಥೆಗಳು ಇತ್ಯಾದಿಗಳು ಇರೋದಿಲ್ಲ
  • ವೈದ್ಯಕೀಯ ಶಿಕ್ಷಣ, ಪೋಲಿಸ್‌, ಹೋಮ್ ಗಾರ್ಡ್ಸ್, ಪ್ರಿಸ್ ಆನ್ಸ್, ಸಿವಿಲ್ ಡಿಫೆನ್ಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಕಂದಾಯ, ಜಿಲ್ಲೆ ರಿಕ್ಟ್ / ಸಬ್-ರೆಜಿಸ್ಟರ್‌ ಕಚೇರಿಗಳು ಮತ್ತು ಕಾರಾಗೃಹಗಳು ಸಿಬ್ಬಂದಿಗೆ ಕೆಲಸ ಮಾಡಲು ಅವಕಾಶ
  • ಸಾರ್ವಜನಿಕ ಸೌಲಭ್ಯಗಳಾದ ಪೆಟ್ರೋಲಿಯಂ, ಸಿಎನ್ ಜಿ, ಎಲ್ ಪಿಜಿ ಸೇರಿದಂತೆ. ಪಿಎನ್‌ಜಿ ಶಕ್ತಿ ಉತ್ಪಾದನೆ ಮತ್ತು ಪ್ರಸರಣ ಘಟಕಗಳು, ಪೋಸ್ಟ್ ಆಫಿಸ್‌ , ವಿಪತ್ತು ನಿರ್ವಹಣೆ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ವಿನಾಯ್ತಿ
  • ಮದುವೆ ಕಾರ್ಯಕ್ರಮದಲ್ಲಿ 50 ಜನರು ಮಾತ್ರ ಇರೋದಕ್ಕೆ ಅವಕಾಶ
  • ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು,
  • ಈ ವೇಳೆಯಲ್ಲಿ ವಿದ್ಯಾರ್ಥಿಗಳು ಹಾಲ್‌ಟಿಕೇಟ್‌ ನೀಡುವುದು ಕಡ್ಡಾಯವಾಗಿದೆ, ತಮ್ಮ
  • ಪರೀಕ್ಷ ಸ್ಥಳಕ್ಕೆ ತಲುಪುವುದಕ್ಕೆ ವಿದ್ಯಾರ್ಥಿಗಳು ಆಟೋ, ಟ್ಯಾಕ್ಸಿ ಪ್ರಯಾಣ ಮಾಡಬಹುದಾಗಿದೆ.
  • ರಾಜ್ಯದ ಎಲ್ಲ ಶಾಲಾ ಕಾಲೇಜುಗಳು ಬಂದ್‌ ಇರಲಿದೆ. ಇನ್ನೂ ಇದೇ ವೇಳೆ ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಯೋಗ ಕೇಂದ್ರಗಳು ಇರೋದಿಲ್ಲ ಅಂತ ತಿಳಿಸಲಾಗಿದೆ.
  • ಬಾರ್‌ಗಳು ಓಪನ್‌ ಇರಲಿದ್ದು ನಿಗದಿತ ಸಮಯದಲ್ಲಿ ಮಾತ್ರ ಪಾರ್ಸಲ್‌ ತೆಗೆದುಕೊಳ್ಳುವುದಕ್ಕೆ ಅವಕಾಶ
    ಇಲ್ಲದೇ ಹೋಟೆಲ್‌ ರೆಸ್ಟೋರೆಂಟ್‌ಗಳು ಓಪನ್‌ ಇರಲಿದ್ದು ಇಲ್ಲೂ ಕೂಡ ನೀವು ಆನ್‌ಲೈನ್‌ ಇಲ್ಲವೇ ಪಾರ್ಸಲ್‌ ಮೂಲಕ ಆಹಾರವನ್ನು ಪಡೆದುಕೊಳ್ಳಬಹುದಾಗಿದೆ.
  • ಮೆಟ್ರೋ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ಗಳ ಸಂಚಾರ ನಾಳೆ ರಾತ್ರಿ 9 ಗಂಟೆಯಿಂದ ಇರೋದಿಲ್ಲ
  • ಮಂದಿರ, ಮಸೀದಿ, ಚರ್ಚ್​ಗಳಿಲ್ಲಿ ಸಾರ್ವಜನಿಕರಿಗೆ ಅವಕಾಶ ಇರೋದಿಲ್ಲ, ಇಲ್ಲಿ ಪೂಜಾರಿಗಳಿಗೆ, ಫಾದರ್‌ಗಳಿಗೆ ಮೌಲ್ವಿಗಳಿಗೆ ಮಾತ್ರ ಅವಕಾಶ ಇರಲಿದೆ
  • ಇನ್ನೂ , ಡೇರಿ, ಹಾಲಿನ ಬೂತ್, ಮೆಡಿಕಲ್‌ ಶಾಪ್‌, ದಿನಸಿ ಅಂಗಡಿ, ತರಕಾರಿ ಮೀನು, ಮಾಂಸ ಮಾರಾಟಕ್ಕೆ ಅವಕಾಶವಿದ್ದು ಅದು ಕೂಡ ನಿಗದಿ ಪಡಿಸಿದ ಸಮಯದಲ್ಲಿ ವ್ಯಾಪಾರಕ್ಕೆ ಅವಕಾಶ
  • ಎಲ್ಲಾ ವೈದ್ಯಕೀಯ, ಅರೆವೈದ್ಯಕೀಯ ಎಸ್. ದಾದಿಯರು, ವಿಜ್ಞಾನಿಗಳು, ಲ್ಯಾಬ್ ತಂತ್ರಜ್ಞರ ಸಂಚಾರಕ್ಕೆ ಅವಕಾಶ

Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ