ಬೆಳಗಾವಿ-ನೈಟ್ ಕರ್ಫ್ಯು ಮುಗಿಸಿ ಇವತ್ತು ಬೆಳಿಗ್ಗೆಯಿಂದ ವ್ಯಾಪಾರ ವಹಿವಾಟಿಗೆ ಮರಳಿದ ವ್ಯಾಪಾರಿಗಳಿಗೆ ಇಂದು ಮಧ್ಯಾಹ್ನ ಶಾಕೀಂಗ್ ಆದೇಶ ಎದುರಾಗಿದೆ,ಮದ್ಯಾಹ್ನ 1 ಗಂಟೆಯಿಂದಲೇ ಪೋಲೀಸರು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ತುರ್ತು ಆದೇಶ ಹೊರಡಿಸಿ ಅಗತ್ಯವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸುವಂತೆ ಸೂಚನೆ ನೀಡಿದ ಹಿನ್ನಲೆಯಲ್ಲಿ ಪೋಲೀಸ್ ವಾಹನಗಳ ಸೈರನ್ ಸದ್ದು ಬೆಳಗಾವಿ ಮಾರುಕಟ್ಟೆಯನ್ನು ಸ್ತಭ್ದಗೊಳಿಸಿದೆ.

ಬೆಳಗಾವಿಯ ಖಡೇಬಝಾರ್,ಮಾರುತಿಗಲ್ಲಿ,ಗಣಪತಿ ಬೀದಿ ಸೇರಿದಂತೆ ಬೆಳಗಾವಿ ಮಾರುಕಟ್ಟೆ ಪ್ರದೇಶದಲ್ಲಿ ಪೋಲೀಸರು ಧ್ವನಿವರ್ದಕಗಳ ಮೂಲಕ ಸೈರನ್ ಸದ್ದಿನ ಜೊತೆಗೆ ಅಂಗಡಿಗಳನ್ನು ಬಂದ್ ಮಾಡಿಸುವ ಕಾರ್ಯಾಚರಣೆ ಆರಂಭಿಸಿದ್ದು ಈಗಾಗಲೇ ಬೆಳಗಾವಿಯ ಮಾರುಕಟ್ಟೆ ಪ್ರದೇಶಗಳು ಬಹುತೇಕ ಬಂದ್ ಆಗಿವೆ.
ಬೀದಿ ವ್ಯಾಪಾರಿಗಳು ಗಂಟು ಮೂಟೆ ಕಟ್ಟಿಕೊಂಡು ಮರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
Laxmi News 24×7