ಚೆನ್ನೈ: ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟು ಜಯಕ್ಕಾಗಿ ಪರಿತಪಿಸುತ್ತಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್-14ರಲ್ಲಿ ಕಡೆಗೂ ಗೆಲುವಿನ ಹಳಿಗೇರಲು ಯಶಸ್ವಿಯಾಯಿತು. ಚೆಪಾಕ್ ಅಂಗಳದ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡ 9 ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿತು. ಮತ್ತೊಂದೆಡೆ, ಕನ್ನಡಿಗ ಕೆಎಲ್ ರಾಹುಲ್ ಬಳಗ ಹ್ಯಾಟ್ರಿಕ್ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕಡೇ ಸ್ಥಾನಕ್ಕೆ ಕುಸಿಯಿತು.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಖಲೀಲ್ ಅಹಮದ್ (21ಕ್ಕೆ 3) ಮಾರಕ ದಾಳಿಗೆ ನಲುಗಿ 19.4 ಓವರ್‌ಗಳಲ್ಲಿ 120 ರನ್‌ಗಳಿಗೆ ಸರ್ವಪತನ ಕಂಡಿತು. ಈ ಸುಲಭ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್, ಜಾನಿ ಬೇರ್‌ಸ್ಟೋ (63*ರನ್, 56 ಎಸೆತ, 3 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 18.4 ಓವರ್‌ಗಳಲ್ಲಿ 1 ವಿಕೆಟ್‌ಗೆ 121 ರನ್‌ಗಳಿಸಿ ಜಯದ ನಗೆ ಬೀರಿತು. ಇದರೊಂದಿಗೆ ಲೀಗ್‌ನಲ್ಲಿ ಮೊದಲ ಗೆಲುವಿನ ನಗೆ ಬೀರಿತು.
ಪಂಜಾಬ್ ಕಿಂಗ್ಸ್: 19.4 ಓವರ್‌ಗಳಲ್ಲಿ 120 (ರಾಹುಲ್ 4, ಮಯಾಂಕ್ ಅಗರ್ವಾಲ್ 22, ಕ್ರಿಸ್ ಗೇಲ್ 15, ದೀಪಕ್ ಹೂಡಾ 13, ಮೊಯ್ಸಿಸ್ ಹೆನ್ರಿಕ್ಸ್ 14, ಶಾರುಖ್ ಖಾನ್ 22, ಅಭಿಷೇಕ್ ಶರ್ಮ 24ಕ್ಕೆ 2, ಖಲೀಲ್ ಅಹಮದ್ 21ಕ್ಕೆ 3, ಭುವನೇಶ್ವರ್ ಕುಮಾರ್ 16ಕ್ಕೆ 1, ಸಿದ್ದಾರ್ಥ್ ಕೌಲ್ 27ಕ್ಕೆ 1, ರಶೀದ್ ಖಾನ್ 17ಕ್ಕೆ 1), ಸನ್‌ರೈಸರ್ಸ್ ಹೈದರಾಬಾದ್: 18.4 ಓವರ್‌ಗಳಲ್ಲಿ 1 ವಿಕೆಟ್‌ಗೆ 121 (ಡೇವಿಡ್ ವಾರ್ನರ್ 37, ಜಾನಿ ಬೇರ್‌ಸ್ಟೋ 63*, ಕೇನ್ ವಿಲಿಯಮ್ಸನ್ 16*, ಫ್ಯಾಬಿಯನ್ ಅಲೆನ್ 22ಕ್ಕೆ 1).
Aapesi odipoyinavadu unnadu kani, prayatnisthu odipoyinavadu ledu 💪#PBKSvSRH #OrangeOrNothing #OrangeArmy #IPL2021 pic.twitter.com/9L4Cu8kogw
— SunRisers Hyderabad (@SunRisers) April 21, 2021