ಬೀದರ್ : ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ಇಂದು 9 ನೇ ದಿನಕ್ಕೆ ಕಾಲಿಟ್ಟಿದ್ದು, ಸಾರಿಗೆ ನೌಕರರ ಮುಷ್ಕರದಿಂದ 170 ಕೋಟಿ ರೂ. ನಷ್ಟವಾಗಿದೆ ಹೀಗಾಗಿ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಇಂದು 4,500 ಸಾರಿಗೆ ಬಸ್ ಸಂಚರಿಸಲಿವೆ. ನಾಳೆ 5 ಸಾವಿರ ಬಸ್ ಗಳು ಓಡಾಡುವ ವಿಶ್ವಾಸವಿದೆ. ಆದರೆ ಎಲ್ಲಾ ಕಡೆ ಖಾಸಗಿ ಬಸ್ ಗಳ ವ್ಯವಸ್ಥೆ ಮಾಡಿದ್ದೇವೆ. ರಾಜ್ಯದಲ್ಲಿ 24 ಸಾವಿರ ಖಾಸಗಿ ಬಸ್ ಗಳು ರಸ್ತೆಗಿಳಿದಿವೆ. ಇಲ್ಲಿಯವರೆಗೆ ಮುಷ್ಕರದಿಂದ 170 ಕೋಟಿ ರೂ. ಲಾಸ್ ಆಗಿದೆ ಎಂದು ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ಈವರೆಗೆ 59 ಕೆಎಸ್ ಆರ್ ಟಿಸಿ ಬಸ್ ಗಳ ಮೇಲೆ ಕಲ್ಲು ಎಸೆಯಲಾಗಿದೆ. ಈ ರೀತಿ ಕಲ್ಲು ತೂರುವುದು ಸರಿಯಲ್ಲ. ಕಲ್ಲು ತೂರುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
Laxmi News 24×7