ವಿಜಯಪುರ: ಸಿಡಿ ಪ್ರಕರಣದ ಸಂತ್ರಸ್ತ ಯುವತಿಯ ತಾಯಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ವಿಜಯಪುರಕ್ಕೆ ಕರೆದುಕೊಂಡು ಬರಲಾಗಿದೆ.
ಸಿಡಿ ಯುವತಿ ತಾಯಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆರೋಗ್ಯದಲ್ಲಿ ಏರಿಪೇರಾಗಿದ್ದು, ಕುಟುಂಬದವರು ಚಿಕಿತ್ಸೆಗಾಗಿ ವಿಜಯಪುರಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಕೈ-ಕಾಲುಬಾವು ಬಂದಿದ್ದು ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದ ಕಾರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಕಿರಿಯ ಪುತ್ರ ಕಾರಿನಲ್ಲಿ ವಿಜಯಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಓರ್ವ ಮಹಿಳಾ ಪೊಲೀಸ್ ಪೇದೆ ಹಾಗೂ ಓರ್ವ ಕಾನ್ಸಸ್ಟೇಬಲ್ ನಿಂದ ಭದ್ರತೆ ನೀಡಲಾಗಿದೆ.

ವಿಜಯಪುರ ಜಿಲ್ಲೆ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮನೆಯಲ್ಲಿ ಯುವತಿ ಪೋಷಕರು ಇದ್ದಾರೆ. ಇದು ಸಿಡಿಯಲ್ಲಿರುವ ಯುವತಿಯ ಅಜ್ಜಿ ಮನೆಯಾಗಿದೆ. ಸದ್ಯ ಸಿಡಿ ಯುವತಿ ಬೆಂಗಳೂರಿನಲ್ಲಿ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿದ್ದಾರೆ.
Laxmi News 24×7