ಹೈದರಾಬಾದ್: ಊಬರ್ ಕ್ಯಾಬ್ ಚಾಲಕನೋರ್ವ ತಿರುಪತಿಗೆ ಹೋಗಿ ಮುಡಿಕೊಟ್ಟಿದ್ದೇ ಈಗ ದೊಡ್ಡ ತಪ್ಪಾಗಿದ್ದು, ಮುಡಿಕೊಟ್ಟ ಕೊಟ್ಟ ಕಾರಣಕ್ಕೆ ಈಗ ಕೆಲಸವನ್ನು ಕಳೆದುಕೊಂಡು ದಿಕ್ಕು ತೋಚದೇ ಸುಮ್ಮನೆ ಆಗಿದ್ದಾರೆ. ಹೈದರಾಬಾದ್‌ನ ಊಬರ್ ಚಾಲಕ ಶ್ರೀಕಾಂತ್ ಎನ್ನುವವರು, ರುಪತಿಗೆ ಹೋಗಿ ಮುಡಿ ಕೊಟ್ಟಿದ್ದಾರೆ. ಅಲ್ಲಿಂದ ಬಂದು ಕೆಲಸಕ್ಕೆ ಮರಳಿ ಬಂದ ವೇಳೆಯಲ್ಲಿ ಉಬರ್ ನಿಯಮದಂತೆ ಸೆಲ್ಫಿ ತೆಗೆದು ಲಾಗ್ ಇನ್ ಆಗಲು ಯತ್ನಿಸಿದ್ದಾರೆ, ಆದರೆ ನಾಲ್ಕು ವಿಫಲ ಯತ್ನಗಳಬಳಿಕ ಅವರ ಖಾತೆ ರದ್ದಾಗಿದೆ ಎನ್ನಲಾಗಿದೆ. ಇನ್ನೂ ಸುಮಾರು ಒಂದು ವರ್ಷದಿಂದ ಊಬರ್ನಲ್ಲಿ ಶ್ರೀಕಾಂತ್ ಕೆಲಸ ಮಾಡಿದ್ದಾರೆ.1428 ಟ್ರಿಪ್ಗಳೊಂದಿಗೆ 4.67 ರೇಟಿಂಗ್ ಪಡೆದಿದ್ದು, ಉಬರ್ ಚಾಲನ ಕೆಲಸದಲ್ಲಿ ಒಳ್ಳೆಯ ಹೆಸರನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ಈ ನಡುವೆ ಈಗ ನನ್ನ ಖಾತೆಯನ್ನು ನಿರ್ಬಂಧಿಸಲಾಗಿದ್ದು, ಆಗಿರುವ ಸಮಸ್ಯೆಯನ್ನು ಬಗೆ ಹರಿಸುವಂತೆ ಉಬರ್‌ನ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿರುವೆ ಆದ್ರೆ, ಅವರು ಈ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ ಹೇಳಿದ್ದಾರೆ, ಚಾಲನ ವೃತ್ತಿಯಿಂದಲೇ ನಮ್ಮ ಕುಟುಂಬ ನಡೆಯುತ್ತಿದ್ದು, ಈಗ ಆಗಿರುವ ತೊಂದ್ರೆಯಿಂದ ನನ್ನ ಸಂಸಾರ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದೆ ಅಂತ ಹೇಳಿದ್ದಾರೆ. ‘
ಅಪ್ಲಿಕೇಶನ್ ಆಧಾರಿತ ಕಾರ್ಮಿಕರು ಸಾಮಾನ್ಯವಾಗಿ ಇಂತಹ ಹಲವಾರು ತಾಂತ್ರಿಕ ವೈಫಲ್ಯಗಳ ಪರಿಣಾಮಗಳನ್ನು ತಮ್ಮ ದೈನಂದಿನ ಗಳಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಅಂಥ ತೆಲಂಗಾಣದ ಫೋರ್ ವೀಲರ್ ಚಾಲಕರ ಸಂಘದ ಪರವಾಗಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಸಲಾವುದ್ದೀನ್ ಹೇಳಿದ್ದಾರೆ.
Srikanth, who has been driving with @Uber_India for over 1.5 years now and holds a 4.67 star rating for the 1428 trips he completed, has been blocked by Uber. Srikanth shaved his head during a recent trip to Tirupati, and when he returned, 1/3 pic.twitter.com/QwNnBwscPy
— Shaik Salauddin (@ShaikTgfwda) March 31, 2021