Breaking News

ಯಡಿಯೂರಪ್ಪ ಅವರತ್ತ ಪರೋಕ್ಷವಾಗಿ ಗುರಿ ಇಟ್ಟ ಬಿಜೆಪಿ: ಕಾಂಗ್ರೆಸ್ ತಿರುಗೇಟು

Spread the love

ಬೆಂಗಳೂರು, ಮಾ.16: “ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿರುವ ಭ್ರಷ್ಟಾಚಾರ ಆರೋಪಿ ಮಹಾ ನಾಯಕ” ಎನ್ನುತ್ತ ಬಿ.ಎಸ್.ಯಡಿಯೂರಪ್ಪ ಅವರತ್ತ ಏಕೆ ಪರೋಕ್ಷವಾಗಿ ಗುರಿ ಇಡುತ್ತಿದ್ದೀರಿ? ಎಂದು ಬಿಜೆಪಿಗೆ ಕಾಂಗ್ರೆಸ್ ಟ್ವಿಟರ್ ನಲ್ಲಿ ತಿರುಗೇಟು ನೀಡಿದೆ.

ಬಸನಗೌಡ ಪಾಟೀಲ್ ಯತ್ನಾಳ್, ವಿಜಯೇಂದ್ರ ಸಿಡಿ ಫ್ಯಾಕ್ಟರಿ ಮೂಲಕ ಬ್ಲಾಕ್ಮೇಲ್ ಮಾಡಲಾಗುತ್ತದೆ ಎಂಬ ಮಾತನ್ನ ನೀವೂ ಪರೋಕ್ಷವಾಗಿ ಹೇಳುತ್ತಾ ಬಿಎಸ್ವೈ ಮುಕ್ತ ಬಿಜೆಪಿ ಅಭಿಯಾನ ಮುಂದುವರೆಸುತ್ತಿರುವಿರಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಿಮ್ಮ ಶ್ರೀನಿವಾಸ್ ಪ್ರಸಾದ್ ಹೇಳಿದಂತೆ ವಾಮಮಾರ್ಗದ ಸರಕಾರ. ನಿಮ್ಮವರೇ ಹೇಳಿದಂತೆ ಬ್ಲಾಕ್ಮೇಲ್‌ ಸಂಪುಟ. ಹನಿಟ್ರಾಪ್‌ ಮೂಲಕ ಆಪರೇಷನ್ ಕಮಲ. ಯತ್ನಾಳ್ ಹೇಳಿದಂತೆ ಯಡಿಯೂರಪ್ಪ ಫ್ಯಾಮಿಲಿ ಸರಕಾರ. ‘ದಂಡ’ದ ಸರಕಾರಕ್ಕೆ ‘ಮಾನ’ ಎಲ್ಲಿದೆ ರಾಜ್ಯ ಬಿಜೆಪಿ ? ತಾಕತ್ತಿದ್ದರೆ ಆಪರೇಷನ್ ಕಮಲದ ಸರಕಾರವನ್ನು ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.

ವಿಧಾನಸೌಧ ದಲ್ಲಾಳಿಗಳ ಶಾಪಿಂಗ್ ಮಾಲ್ ಹಾಗೂ ಸಿಎಂ ಗೃಹ ಕಚೇರಿ ವರ್ಗಾವಣೆ ದಂಧೆ, ಗುತ್ತಿಗೆ ಡೀಲಿಂಗ್, ಕಮಿಷನ್ ದಂಧೆಗಳ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ನ ಹೆಡ್ಡಾಫೀಸ್. ರಾಜ್ಯದಲ್ಲಿ ನಾನೊಬ್ಬನೇ, ನನಗಿಬ್ಬರು ಎಂಬ ಯಡಿಯೂರಪ್ಪ ಅವರ ಫ್ಯಾಮಿಲಿ ಸರಕಾರವಿರುವುದನ್ನ ಬಿಜೆಪಿಗರೇ ಒಪ್ಪಿದ್ದಾರೆ. ರಾಜ್ಯ ಬಿಜೆಪಿ ಭ್ರಷ್ಟಾಚಾರವನ್ನೇ ಹಾಸಿ ಮಲಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಕಾಮಿಡಿ ಕಿಂಗ್ ನಳಿನ್ ಕುಮಾರ್ ಕಟೀಲ್, ವಿಧಾನಸೌಧದ ಸನಿಹದಲ್ಲಿಯೇ ಒಬ್ಬ ಶಾಸಕರಿಗೇ ರಕ್ಷಣೆ ನೀಡಲಾಗದ್ದು ನಿಮ್ಮ ಸರಕಾರದ ವೈಫಲ್ಯವಲ್ಲವೇ? ಉದ್ಯೋಗ ಕೇಳಿದ ಯುವತಿಯನ್ನು ದುರುಪಯೋಗಪಡಿಸಿಕೊಂಡ ನಿಮ್ಮಿಂದ ಇಡೀ ರಾಜ್ಯಕ್ಕೆ ಕೆಟ್ಟ ಹೆಸರು. ರಕ್ಷಣೆ ಕೇಳಿದ ಆ ಯುವತಿಗಾದರೂ ರಕ್ಷಣೆ ಒದಗಿಸುವಿರಾ ಅಥವಾ ನಿಮ್ಮ ಮಹಿಳಾ ವಿರೋಧಿ ನಡೆ ಮುಂದುವರಿಸುವಿರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ