Breaking News

ಪಡೆದ ಸಾಲ ತೀರಿಸಲು ಆಗದ ಹಿನ್ನೆಲೆಯಲ್ಲಿ ಹೆತ್ತವರು ಹೆತ್ತ ಮಗುವನ್ನು ವೈದ್ಯ ದಂಪತಿಗೆ ಮಾರಾಟ

Spread the love

ಪಡೆದ ಸಾಲ ತೀರಿಸಲು ಆಗದ ಹಿನ್ನೆಲೆಯಲ್ಲಿ ಹೆತ್ತವರು ಹೆತ್ತ ಮಗುವನ್ನು ವೈದ್ಯ ದಂಪತಿಗೆ ಮಾರಾಟ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ರೂಪಾ ಮತ್ತು ಮೈನುದ್ದೀನ ದಂಪತಿ ತಮ್ಮ ಗಂಡು ಮಗುವನ್ನು ಸಾಲದ ಬದಲಾಗಿ ಭಾರತಿ ವಾಲ್ಮೀಕಿ ಅವರಿಗೆ ಮಾರಾಟ ಮಾಡಿದ್ದಾರೆ. ಆದರೆ ಇವರು ಉಡುಪಿ ಮೂಲದ ವೈದ್ಯ ದಂಪತಿಗೆ ಮಗು ಮಾರಾಟ ಮಾಡಿದ್ದು, ಈ ಘಟನೆಯ ಹಿಂದೆ ಮಗು ಮಾರಾಟ ಜಾಲದ ಕೈವಾಡ ಇರುವ ಶಂಕೆ ಇದೆ.

ಭಾರತಿ ವಾಲ್ಮೀಕಿ ಅವರ ಬಳಿ ರೂಪಾ 72 ಸಾವಿರ ರೂ. ಸಾಲ ಪಡೆದಿದ್ದು, ಬಡ್ಡಿ ಸೇರಿ 1,50 ಲಕ್ಷ ರೂ. ವಾಪಸ್ ನೀಡಬೇಕಿತ್ತು. ಈ ವೇಳೆ ಗಂಡು ಮಗುವಿಗೆ ರೂಪಾ ಜನ್ಮ ನೀಡಿದ್ದರು.

ಸಾಲ ಮರಳಿಸದೇ ಮಗು ಹಾಗೂ ಬಾಣಂತಿಯನ್ನು ಬಿಡುವುದಿಲ್ಲ ಎಂದು ಒತ್ತೆ ಇರಿಸಿಕೊಂಡಿದ್ದ ಭಾರತೀ 40 ದಿನಗಳ ಕಾಲ ಚಿತ್ರ ಹಿಂಸೆ ನೀಡಿದ್ದಾರೆ. ಕೊನೆಗೆ ಇದರಿಂದ ಹೊರಬರಲು ದಂಪತಿ ಮಗುವನ್ನು ಮಾರಾಟ ಮಾಡಲು ಒಪ್ಪಿದ್ದಾರೆ.

ಭಾರತಿ 2.50 ಲಕ್ಷ ರೂ.ಗೆ ಮಗುವನ್ನು ಮಾರಾಟ ಮಾಡಿದ್ದಾಗ ಬಾಂಡ್ ಪೇಪರ್ ಮೇಲೆ ಬರೆಸಿಕೊಂಡಿದ್ದು, 1.50 ಲಕ್ಷ ರೂ. ಸಾಲ ವಜಾ ಮಾಡಿಕೊಂಡು ಉಳಿದ 1 ಲಕ್ಷ ರೂ. ದಂಪತಿಗೆ ಕೊಟ್ಟಿದ್ದರು.

ಮಗು ಮಾರಾಟ ಮಾಡಿದ 5 ತಿಂಗಳ ನಂತರ ವಾಟ್ಸಪ್ ಮೂಲಕ ರೂಪಾ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಕೈಗೆತ್ತಿಕೊಂಡ ಪೊಲೀಸರು ಉಡುಪಿಯ ವೈದ್ಯ ದಂಪತಿಗೆ ಮಗು ಮಾರಿದ ಭಾರತಿ ಆಕೆಯ ಮಗ ರಮೇಶ, ಅಳಿಯ ವಿನಾಯಕ, ರವಿ ಹೆಗಡೆ ಅವರನ್ನು ಬಂಧಿಸಿದ್ದಾರೆ. ಇದೇ ವೇಳೆ ಮಗು ಪಡೆದಿದ್ದ ಉಡುಪಿಯ ವೈದ್ಯ ದಂಪತಿ ವಿಜಯ ನೆಗಳೂರ, ಚಿತ್ರಾ ದಂಪತಿ ಅವರನ್ನೂ ಸಹ ವಶಕ್ಕೆ ಪಡೆಯಲಾಗಿದೆ.

ಮಗುವನ್ನು ರಕ್ಷಿಸಿದ ಪೊಲೀಸರು ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ಸದ್ಯ ಮಗು ಇರಿಸಿದ್ದು, ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಬೆಂಗಳೂರಲ್ಲಿ ಮುಂಬೈ ಮಾದರಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಸಿಎಂ ಸೂಚನೆ

Spread the love ಬೆಂಗಳೂರು: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ