Breaking News

ಸಂಪುಟದ 6 ಸಚಿವರು ಕೋರ್ಟ್ ಮೊರೆ ಹೋಗಿದ್ದೇಕೆ?: ಬಿ ಸಿ ಪಾಟೀಲ್ ಸ್ಪಷ್ಟನೆ

Spread the love

ಹಾವೇರಿ, ಮಾರ್ಚ್.06: ತಮ್ಮ ವಿರುದ್ಧ ಯಾವುದೇ ರೀತಿ ಅವಹೇಳನಕಾರಿ ಮತ್ತು ಮಾನಹಾನಿಗೆ ಸಂಬಂಧಿಸಿದಂತೆ ಯಾವುದೇ ವರದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿರುವ ಬಗ್ಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

“ಒಬ್ಬ ರೈತನ ಮಗನಾಗಿ ಯಾವುದೇ ಗಾಡ್ ಫಾದರ್ ಇಲ್ಲದೇ ಇಷ್ಟರ ಮಟ್ಟಕ್ಕೆ ಬೆಳೆದು ಬಂದಿದ್ದು ಬಹಳಷ್ಟು ಜನರಿಗೆ ಸಹಿಸಲು ಆಗುವುದಿಲ್ಲ. ಆದರೆ ಯಾವುದೋ ಕುತಂತ್ರಿಗಳ ರಾಜಕೀಯ ಷಡ್ಯಂತ್ರಕ್ಕೆ ನಮ್ಮ ಹೆಸರನ್ನು ವಿನಾಕಾರಣ ಸತ್ಯಾಸತ್ಯತೆ ಅರಿಯದೆ ನಮ್ಮ ತೇಜೋವಧೆ ಆಗಬಾರದು ಎಂಬ ದೃಷ್ಟಿಯಲ್ಲಿ, ಮುನ್ನೆಚ್ಚರಿಕೆಯ ಕ್ರಮವಾಗಿ ಕಾನೂನಿನ ಮೊರೆ ಹೋಗಿದ್ದೇವೆ” ಎಂದು ಸಚಿವ ಬಿ ಸಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.

 

“ಆದ್ದರಿಂದಲೇ ನಾವೆಲ್ಲರೂ ನಮ್ಮ ವಿರುದ್ಧ ಸತ್ಯಾಸತ್ಯತೆ ಅರಿಯದೆ ನಮ್ಮ ವಿರುದ್ಧ ಪ್ರಸಾರ ವಾಗಬಾರದು ಎಂದು ಕೋರ್ಟಿಗೆ ತಡೆಯಾಜ್ಞೆ ಅರ್ಜಿ ಸಲ್ಲಿಸಿದ್ದೇವೆ. ಸತ್ಯಮೇವ ಜಯತೆ” ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಸಚಿವ ಬಿ ಸಿ ಪಾಟೀಲ್ ಬರೆದುಕೊಂಡಿದ್ದಾರೆ.


Spread the love

About Laxminews 24x7

Check Also

ಹಾವೇರಿ ಜಿಲ್ಲೆಯ 73 ವರ್ಷದ ವೃದ್ಧರೊಬ್ಬರಲ್ಲಿ ಕೊರೊನಾ

Spread the loveಹಾವೇರಿ : ನಾಲ್ಕು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಕೊರೊನಾ ಜಿಲ್ಲೆಯಲ್ಲಿ ಹಲವು ಅವಾಂತರಗಳನ್ನ ಸೃಷ್ಟಿಸಿತ್ತು. ಕೊರೊನಾದಲ್ಲಿ ನೂರಾರು ಜನರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ