Breaking News

ಅನ್ಯಾಯ ಆಗಿದೆ ಅಂತ ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ; ಲಕ್ಷ್ಮಣ ಸವದಿ

Spread the love

ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಒಂದೊಂದೇ ಯೋಜನೆಗಳು ಬೇರೆ ಭಾಗದ ಪಾಲಾಗಲಾರಂಭಿಸಿವೆ. ನಿಮ್ಜ್ ಸ್ಥಾಪನೆ ಉದ್ದೇಶ ಕೈ ಬಿಡಲಾಗಿದೆ. ವಿಶೇಷ ಆರ್ಥಿಕ ವಲಯ ಸ್ಥಾಪನೆಯೂ ನೆನೆಗುದಿಗೆ ಬಿದ್ದಿದೆ. ಕಲಬುರ್ಗಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಗೂ ಗ್ರಹಣ ಕವಿಯುವಂತಾಗಿದೆ. ಕಲಬುರ್ಗಿಯ ಇ.ಎಸ್.ಐ. ಆಸ್ಪತ್ರೆಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಏಮ್ಸ್ ಸಹ ಹುಬ್ಬಳ್ಳಿ ಪಾಲಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಲ್ಯಾಣ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪ್ರತ್ಯೇಕ ರಾಜ್ಯದ ಕೂಗೂ ಏಳಲಾರಂಭಿಸಿದೆ. ಈ ಭಾಗಕ್ಕೆ ಅನ್ಯಾಯ ಆಗಿದೆ ಅಂದ ಕೂಡಲೇ ಪ್ರತ್ಯೇಕ ರಾಜ್ಯ ಬೇಕೆಂದು ಕೂಗೆತ್ತುವುದು ಸರಿಯಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟಿದ್ದಾರೆ.

ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಏಮ್ಸ್ ಸೇರಿದಂತೆ ವಿವಿಧ ಯೋಜನೆಗಳ ಕಲಬುರ್ಗಿ ಕೈ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಕೆಲವೊಂದು ಯೋಜನೆಗಳು ಕೈ ತಪ್ಪಿದಾಗ ಅಸಮಾಧಾನ ಆಗೋದು ಸಹಜ. ಹಾಗೆಂದು ಪ್ರತ್ಯೇಕ ರಾಜ್ಯದ ಕೂಗೆತ್ತುವುದು ಸರಿಯಲ್ಲ ಎಂದಿದ್ದಾರೆ. ಐಐಟಿ ಬಂದಾಗ ಮುಂಬೈ ಕರ್ನಾಟಕದ ಧಾರವಾಡಕ್ಕೆ ಕೊಟ್ಟಿದ್ದೇವೆ. ಐಐಐಟಿ ಬಂದಾಗ ಕಲ್ಯಾಣ ಕರ್ನಾಟಕದ ರಾಯಚೂರಿಗೆ ಕೊಟ್ಟಿದ್ದೇವೆ. ಹೀಗೆ ಹೊಸ ಯೋಜನೆಗಳು ಬಂದಾಗ ಆ ಭಾಗಕ್ಕೆ ಒಂದು, ಈ ಭಾಗಕ್ಕೆ ಒಂದು ಕೊಡ್ತಿದ್ದೇವೆ. ಏಮ್ಸ್ ಗೆ ಎಲ್ಲರ ಬೇಡಿಕೆ ಇರುತ್ತೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಏನು ನಿರ್ಣಯ ತೆಗೆದುಕೊಳ್ಳುತ್ತೆ ಎಂದರು.


Spread the love

About Laxminews 24x7

Check Also

ಗಣೇಶ ಮೂರ್ತಿಗಳ ವಿಸರ್ಜನೆಗೆ ಸಚಿವ ಸತೀಶ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಸೂಕ್ತ ವ್ಯವಸ್ಥೆ ಮಲಗೌಡಾ ಪಾಟೀಲ ಸೂಚನೆ …

Spread the love ಗಣೇಶ ಮೂರ್ತಿಗಳ ವಿಸರ್ಜನೆಗೆ ಅಳತಗಾ ಸೇತುವೆ ಸಿದ್ಧತೆಗೆ ಅಗತ್ಯ ಕ್ರಮಕ್ಕೆ ಕೆಪಿಸಿಸಿ ಸದಸ್ಯ ಮಲಗೌಡಾ ಪಾಟೀಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ