Breaking News

ಇಂಧನ ದರ ಏರಿಕೆ ಶಾಕ್ ಬೆನ್ನಲ್ಲೇ ಸಗಟು ಹಣದುಬ್ಬರ ದರ ಏರಿಕೆ

Spread the love

ನವದೆಹಲಿ: ಜನವರಿಯಲ್ಲಿ ಸಗಟು ಹಣದುಬ್ಬರ ದರ ಶೇಕಡ2.03 ಕ್ಕೆ ಏರಿಕೆಯಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಈ ಕುರಿತಾಗಿ ಮಾಹಿತಿ ನೀಡಲಾಗಿದೆ.

ಇಂಧನ ದರ ಏರಿಕೆ ಪರಿಣಾಮವಾಗಿ ಹಣದುಬ್ಬರ ದರ ಏರಿಕೆಯಾಗಿದೆ. ಸಗಟು ಹಣದುಬ್ಬರ ದರ ಶೇಕಡ 2.03 ರಷ್ಟು ಹೆಚ್ಚಳವಾಗಿದೆ. ಕಚ್ಚಾ ಪೆಟ್ರೋಲ್, ನೈಸರ್ಗಿಕ ಅನಿಲ ದರ ಹೆಚ್ಚಳವಾಗಿದೆ. ಜನವರಿ ತಿಂಗಳಲ್ಲಿ ಶೇಕಡ 9.48 ರಷ್ಟು ಏರಿಕೆಯಾಗಿತ್ತು.

ಇಂಧನ ಮತ್ತು ಆಹಾರೇತರ ಉತ್ಪನ್ನಗಳು ಬೆಲೆ ಒತ್ತಡವನ್ನು ಎದುರಿಸಬೇಕಾಗಿದ್ದು, ಪ್ರಸಕ್ತ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯ ದರ ಕಡಿತಕ್ಕೆ ಹೆಚ್ಚಿನ ಅವಕಾಶವಿಲ್ಲ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಆಧಾರಿತ ಹಣದುಬ್ಬರ ದರವು ಈ ಅವಧಿಯಲ್ಲಿ 16 ತಿಂಗಳ ಕನಿಷ್ಠ 4.06 ಕ್ಕೆ ಇಳಿದಿದೆ. ಡಬ್ಲ್ಯುಪಿಐ ಹಣದುಬ್ಬರ ಏರಿಕೆಯಾಗಿದೆ. ಇದು ಮುಖ್ಯವಾಗಿ ತಯಾರಿಸಿದ ವಸ್ತುಗಳನ್ನು ಒಳಗೊಂಡಿರುತ್ತದೆ, ರಬ್ಬರ್ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳ ಬೆಲೆಯೂ ಏರಿಕೆಯಾಗಿವೆ ಎನ್ನಲಾಗಿದೆ.


Spread the love

About Laxminews 24x7

Check Also

ಕ್ರಾಂತಿ ಮಹಿಳಾ ಮಂಡಳ ಉಮಾ ಸಂಗೀತ ಪ್ರತಿಷ್ಠಾನದಿಂದ ಹಿರಿಯ ನಾಗರಿಕ ದಿನಾಚರಣೆ ಗುರು, ಹಿರಿಯರನ್ನು ಗೌರವಿಸಿ: ಜಯ ಜೋಶಿ

Spread the love ಕ್ರಾಂತಿ ಮಹಿಳಾ ಮಂಡಳ ಉಮಾ ಸಂಗೀತ ಪ್ರತಿಷ್ಠಾನದಿಂದ ಹಿರಿಯ ನಾಗರಿಕ ದಿನಾಚರಣೆ ಗುರು, ಹಿರಿಯರನ್ನು ಗೌರವಿಸಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ