ಬೆಳಗಾವಿ : ಬೆಳಗಾವಿ ನಗರದಲ್ಲಿ ಬಿ.ವಿ.ಬೆಲ್ಲದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್ ಅವರ ನೇತೃತ್ವದಲ್ಲಿ ಸಂಚಾರ ನಿಯಮಗಳ ಹಾಗೂ ರಸ್ತೆ ಸುರಕ್ಷಾ ಜಾಗೃತಿ ಜಾತಾವನ್ನು ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಹಮಿಕೊಳ್ಳಲಾಗಿತ್ತು.
ಹೌದು ಬೆಳಗಾವಿಯಲ್ಲಿ ಇತ್ತೀಚಿಗೆ ಪೊಲೀಸ್ ಸಿಬ್ಬಂದಿಗಳಿಂದ ಜಾಥಾ ಕಾರ್ಯಕ್ರಮ ನಡೆಸಲಾಗಿತ್ತು ಈಗ ಬಿ.ವಿ.ಬೆಲ್ಲದ ಲಾ ಕಾಲೇಜಿನ ವಿದ್ಯಾರ್ಥಿಗಳು ರಸ್ತೆ ಸಂಚಾರ ನಿಯಮಗಳು ಹಾಗು ಸುರಕ್ಷಾ ಜಾಗೃತಿ ಜಾತಾ ನಡೆಸಿದರು. ಹಾಗೆಯೇ ಪ್ರತಿ ವರ್ಷದಂತೆ ಈ ವರ್ಷವೂ ಸಹ ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಬೆಳಗಾವಿ ನಗರದ ಪ್ರಮುಖ ವೃತ್ತಗಳಾಗಿರುವ ಚೆನ್ನಮ್ಮ ವೃತ್ತ, ಬೋಗಾರವೇಸ್ ನಂತರ ಧರ್ಮವೀರ ಸಂಬಾಜಿ ವೃತ್ತಕ್ಕೆ ಹೋಗಿ ಜಾಥಾ ಮುಕ್ತಾಯಗೊಂಡಿತ್ತು.
ತದನಂತರ ಇತ್ತೀಚಿಗೆ ರಸ್ತೆಗಳ ಮಧ್ಯೆ ಆಗುತ್ತಿರುವ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರು ತಮ್ಮ ಸ್ವ ಕಾಳಜಿ ಮೂಲಕ ರಸ್ತೆ ಸಂಚಾರದ ನಿಯಮಗಳನ್ನು ಪಾಲಿಸಬೇಕು ಎನ್ನುವ ಉದ್ದೇಶದಿಂದ ಬೆಳಗಾವಿಯ ನಗರದಲ್ಲಿ ಬಿ.ವಿ.ಬೆಲ್ಲದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್ ಅವರ ನೇತೃತ್ವದಲ್ಲಿ ಜಾಥಾ ನಡೆಸಲಾಯಿತು.
Laxmi News 24×7