ಹುಬ್ಬಳ್ಳಿ: ಚಿತ್ರದುರ್ಗದ ಹಿರಿಯೂರು-ಶಿರಾ ನಡುವಿನ ಜವನಗೊಂಡಹಳ್ಳಿ ಬಳಿ ಸಂಭವಿಸಿದ್ದ ಬಸ್ ದುರಂತದಲ್ಲಿ ಗಾಯಗೊಂಡಿದ್ದ ಖಾಸಗಿ ಬಸ್ ಚಾಲಕ ಶಿಗ್ಗಾವಿಯ ಮೊಹಮ್ಮದ್ ರಫೀಕ್ (35) ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಕೆಎಂಸಿಆರ್‌ಐನಲ್ಲಿ ಮೃತಪಟ್ಟಿದ್ದಾರೆ.
ಗುರುವಾರ ತಡರಾತ್ರಿ ಲಾರಿಯೊಂದು ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಈ ವೇಳೆ ಬಸ್ಸಿನ ಚಾಲಕ ಮೊಹಮ್ಮದ್ ರಫೀಕ್ ಗಾಯಗೊಂಡು, ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಕ್ಲೀನರ್ ಸಾಧಿಕ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಕರು ತಿಳಿಸಿದರು.ಚಾಲಕನ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಮೃತ ಮೊಹಮ್ಮದ್ ರಫೀಕ್ ಸಹೋದರಿ ಕಣ್ಣೀರು ಹಾಕಿದ್ದು,![]()
“ಮನೆಯ ಯಜಮಾನನನ್ನೇ ಕಳೆದುಕೊಂಡಿದ್ದೇವೆ. ನಮ್ಮ ಅಣ್ಣನೇ ನಮಗೆಲ್ಲ ಆಸರೆಯಾಗಿದ್ದ. ಕುಟುಂಬವನ್ನು ಮುನ್ನಡೆಸುತ್ತಿದ್ದ. ಅಪಘಾತದಲ್ಲಿ ಬದುಕುಳಿದಾಗ ಸ್ವಲ್ಪ ಸಮಾಧಾನ ಆಗಿತ್ತು.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ನಿನ್ನೆ ಕರೆದುಕೊಂಡು ಬಂದಿದ್ದೆವು. ಆದರೆ ರಾತ್ರಿ ಆಪರೇಷನ್ ಮಾಡುವವರೆಗೂ ಮಾತನಾಡುತ್ತಾ ಇದ್ದರು. ರಾತ್ರಿ 12:30ಕ್ಕೆ ಆಪರೇಷನ್ಗೆ ಕರೆದುಕೊಂಡು ಹೋಗಿದ್ದರು. ಆಪರೇಷನ್ ಮುಗಿದ ಮೇಲೆ ಕೇವಲ ಉಸಿರಾಟ ಇತ್ತು. ಆದರೆ ಇಂದು ಬೆಳಗ್ಗೆ 6 ಗಂಟೆಗೆ ನಮ್ಮ ಅಣ್ಣ ಸಾವನ್ನಪ್ಪಿದ್ದಾರೆ” ಎಂದು ಕಣ್ಣೀರು ಹಾಕಿದರು.
Laxmi News 24×7