ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಸಹೋದ್ಯೋಗಿ ಶಿವಾನಂದ ಮಾದರ ಅವರು ಮೊನ್ನೆ ದಿನ ರಾತ್ರಿ ಗಸ್ತು ಕರ್ತವ್ಯ ಮುಗಿಸಿಕೊಂಡು ತನ್ನೂರಿಗೆ ತೆರಳುತ್ತಿರುವಾಗ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿರುತ್ತಾರೆ.
ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿ ತಲೆ ಮತ್ತು ಎದೆಗೆ ಬಲವಾದ ಹೊಡೆತ ಬಿದ್ದದ್ದು ತಿಳಿದು ಬಂದಿರುತ್ತದೆ.
ಹೆಚ್ಚಿನ ಚಿಕಿತ್ಸೆಗಾಗಿ ಗೋಕುಲ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸಿದ್ದು ಜಂಗಲಗಿಯವರು ಶಿವಾನಂದರನ್ನು ಕೆ.ಎಲ್.ಇ ಸುಚಿರಾಯು ಆಸ್ಪತ್ರೆಗೆ ದಾಖಲು ಮಾಡಿದ್ದು ಸದ್ಯ ಶಿವಾನಂದ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದು ದಿನೇ ದಿನೇ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಾರೆ.
ಮೊನ್ನೆ ದಿನ ಮಾತೃ ಹೃದಯದ ನಮ್ಮ ಕಮೀಷನರ್ ಸರ್ ಶಿವಾನಂದರನ್ನ ಕಂಡು ಮಾತಾಡಿಸಿ ಅವರ ಕುಟುಂಬಕ್ಕೆ ಅಭಯ ಹಸ್ತ ಚಾಚಿ ಸಾಂತ್ವಾನ ಹೇಳಿದ್ದಾರೆ.
ಅಲ್ಲದೇ ಅನುದಿನವೂ ಆರೋಗ್ಯ ಸ್ಥಿತಿಯ ಬಗ್ಗೆ ಅಪ್ಡೇಟ್ ಪಡೆಯುತ್ತಿದ್ದಾರೆ. ಈ ವಿಷಯದಲ್ಲಿ ಕಮೀಷನರ್ ಸರ್ ಗೆ ಸಿಬ್ಬಂದಿಗಳಾದ ನಾವು ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ.
ವೈಯಕ್ತಿಕವಾಗಿ ಹಾಗೂ ಒಟ್ಟಾರೆ ಹುಬ್ಬಳ್ಳಿ-ಧಾರವಾಡ ಕಮೀಷನರ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ಪರವಾಗಿ ಗೆಳೆಯ ಶಿವಾನಂದ ಆದಷ್ಟು ಬೇಗ ಚೇತರಿಕೆ ಕಾಣಲಿ, ಮತ್ತೇ ಕರ್ತವ್ಯಕ್ಕೆ ಮರಳಲಿ ಎಂದು ಹಾರೈಸುವೆ.
Laxmi News 24×7