ಚಿತ್ರದುರ್ಗ: ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಮೊದಲ ಪೋಕ್ಸೋ(POCSO) ಪ್ರಕರಣದಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಸ್ವಾಮೀಜಿ ಸೇರಿದಂತೆ ಮೂವರನ್ನು ಕೇಸ್ನಿಂದ ಮುಕ್ತಗೊಳಿಸಿದೆ.
ನ್ಯಾಯಾಧೀಶರಾದ ಗಂಗಾಧರಪ್ಪ ಚನ್ನಬಸಪ್ಪ ಹಡಪದ್ ಅವರು ತೀರ್ಪು ಪ್ರಕಟಿಸಿದರು. ತೀರ್ಪಿನ ನಂತರ ನ್ಯಾಯಾಲಯದಿಂದ ಹೊರಬಂದ ಶಿವಮೂರ್ತಿ ಮುರುಘಾ ಶರಣರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಕೋರ್ಟ್ ಆವರಣದಲ್ಲಿ ಶ್ರೀಗಳನ್ನು ಭೇಟಿಯಾಗಲು ಭಕ್ತರು ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಯಿತು. ನ್ಯಾಯಾಲಯದ ಎದುರು ಮುರುಘಾ ಶ್ರೀಗಳ ಪರ ವಕೀಲರು ಸಂಭ್ರಮಿಸಿದರು.
ಶ್ರೀಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹುಲಿಕುಂಟೆ ಜಿತೇಂದ್ರ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, “ಮುರುಘೇಶನ ನಂಬಿದ್ದೆವು, ಅದರಂತೆ ಮುರುಘಾ ಶ್ರೀಗಳನ್ನು ಕೂಡ ನಂಬಿದ್ವಿ. ಯಾವುದೇ ಆರೋಪ ಬಂದಾಗ ತೀರ್ಪಿಗಾಗಿ ಕಾಯಬೇಕು. ಇದೀಗ ಮುರುಘೇಶನ ಮೇಲಿನ ನಂಬಿಕೆ ಹೆಚ್ಚಾಗಿದೆ. ಮುರುಘಾ ಶ್ರೀ ಗಂಗೆಯಷ್ಟೇ ಪವಿತ್ರರು” ಎಂದು ಹೇಳಿದರು.
ಮುರುಘಾ ಶ್ರೀ ವಿರುದ್ಧದ ಎರಡನೇ ಪೋಕ್ಸೋ ಪ್ರಕರಣದ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿದೆ.
Laxmi News 24×7