ರಾಮದುರ್ಗ :ಕಲಬುರಗಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಪ್ರಾರ್ಥಿವ ಶರೀರ ಬುಧವಾರ ರಾಮದುರ್ಗ ಪಟ್ಟಣದ ನವಿಪೇಟೆಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿದ್ದ ಮಹಾಂತೇಶ ಬೀಳಗಿ ಪ್ರಯಾಣಿಸುತ್ತಿದ್ದ ಕಾರ್ ಮರಕ್ಕೆ ಡಿಕ್ಕಿ ಹೊಡೆದು ಕಾರ್ ನಲ್ಲಿದ್ದ ಮೂವರು ಮೃತಪಟ್ಟಿದ್ದರು. ಕಲ್ಬುರ್ಗಿಯಿಂದ ರಾಮದುರ್ಗ ತಲುಪಿದ ಮೃತ ಮಹಾಂತೇಶ ಮೃತದೇಹ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಾರ್ವಜನಿಕ ದರ್ಶನದ ಬಳಿಕ ಹಲಗತ್ತಿ ಬಳಿಯ ಪಾರ್ಮ್ ಹೌಸನಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
Laxmi News 24×7