ಧಾರವಾಡದಲ್ಲಿ ಮೊದಲ ಬಾರಿಗೆ ದಂಡದಲ್ಲಿ ರಿಯಾಯ್ತಿ ನೀಡಿದ ಸಾರಿಗೆ ಇಲಾಖೆ….1991 ರಿಂದ 2020 ಮಾರ್ಚ್ 31 ರವರೆಗಿನ ಕೇಸ್‌ಗಳಿಗೆ ಅವಕಾಶ.
ಇಷ್ಟು ದಿನ ರಾಜ್ಯದ ಸಂಚಾರಿ ಠಾಣೆಯಲ್ಲಿ ನೀಡಲಾಗುತ್ತಿದ್ದ ದಂಡಾಸ್ತ್ರದಲ್ಲಿನ 50% ಫೈನ್ ಡಿಸ್ಕೌಂಟ್ ಈಗ ಸಾರಿಗೆ ಇಲಾಖೆಯಲ್ಲೂ ನೀಡಲಾಗುತ್ತಿದೆ.
ಮೊದಲ ಬಾರಿಗೆ ಧಾರವಾಡ ಸಾರಿಗೆ ಇಲಾಖೆಯಿಂದ ವಿವಿಧ ಪ್ರಕರಣಗಳಡಿ ದೂರು ದಾಖಲಾಗಿ ದಂಡ ಪಾವತಿ ಮಾಡದೇ ಇರುವ ವಾಹನ ಸವಾರರಿಗೆ ಸಾರಿಗೆ ಇಲಾಖೆ ರಿಯಾಯ್ತಿ ನೀಡಿ ದಂಡ ಪಾವತಿಸಲು ಸೂಚನೆ ನೀಡಿದೆ.
ಎಸ್ ಈ ಸಂಬಂಧ ಮಾದ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಹುಬ್ಬಳ್ಳಿ, ಧಾರವಾಡ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಕಾಂತ ಬಡಿಗೇರಹುಬ್ಬಳ್ಳಿ, ಧಾರವಾಡ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಕಾಂತ ಬಡಿಗೇರ, ಹುಬ್ಬಳ್ಳಿ, ಧಾರವಾಡ ಸಾರಿಗೆ ಇಲಾಖೆಯಲ್ಲಿ 2945 ಕೇಸ್‌ಗಳು ಬಾಕಿ ಇವೆ. 1991 ರಿಂದ 2020 ಮಾರ್ಚ್ 31 ರವರೆಗೆ ಇರುವ ಪ್ರಕರಣಗಳಿಗೆ 50% ರಿಯಾಯ್ತಿ ಕೊಟ್ಟು ಮುಕ್ತಗೊಳಿಸುತ್ತಿದ್ದೇವೆ ಎಂದರು. ಜತೆಗೆ ಕೇಸ್ ಇರುವ ಮಾಲೀಕರಿಗೆ ನೋಟಿಸ್ ಕೊಡಲಾಗಿದೆ.
ದಂಡ ಪಾವತಿಗೆ ಪ್ರತ್ಯೇಕ ಕೌಂಟರ್ ಕೂಡ ತೆರೆದಿದ್ದೇವೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಎಲ್ಲ ತರಹದ ವಾಹನದ ಮೇಲೆ ಈ ಪ್ರಕರಣ ಇವೆ.
ಅದರಲ್ಲಿ ಬಸ್, ಲಾರಿ ಆಟೊ, ಬೈಕ್ ಸೇರಿ ಎಲ್ಲವೂ ಇವೆ. ಸರ್ಕಾರದ ಆದೇಶದ ಪ್ರಕಾರ 2020ರ ವರೆಗಿನ ದಂಡ ಇರುವ ವಾಹನಗಳಿಗೆ ಮಾತ್ರ ರಿಯಾಯ್ತಿ ನೀಡಲಾಗಿದೆ.
ಆ ದಂಡ ಕಟ್ಟಿ ಪ್ರಕರಣ ಇತ್ಯರ್ಥ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾರಿಗೆ ಇಲಾಖೆಯಿಂದ ಇದೇ ಮೊದಲ ಬಾರಿಗೆ ಇಂತಹ ಕೆಲಸ ಮಾಡಲಾಗುತ್ತಿದೆ. ದಂಡ ಪಾವತಿ ಮಾಡಲು ಆನ್‌ಲೈನ್ ವ್ಯವಸ್ಥೆ ಇಲ್ಲ. ಕಚೇರಿಗೆ ಬಂದೇ ದಂಡ ಪಾವತಿ ಮಾಡಬೇಕು ಎಂದು ತಿಳಿಸಿದರು.
Laxmi News 24×7