ಹಾವೇರಿ: ಜಿಲ್ಲೆಯ ಸವಣೂರು ತಾಲೂಕು ಕಳಸೂರು ಸೇರಿದಂತೆ ಸುತ್ತಮುತ್ತಲ ರೈತರ ಹೋರಾಟಕ್ಕೆ ಜಯಸಿಕ್ಕಿದೆ. ಕಳಸೂರು ಬ್ರಿಡ್ಜ್ ಕಂ ಬಾಂದಾರಕ್ಕೆ ಕ್ರಸ್ಟ್ಗೇಟ್ಗೆ ಅಳವಡಿಸಲು ನೀರಾವರಿ ಇಲಾಖೆ ಗೇಟ್‌ಗಳನ್ನು ನೀಡಿದೆ. ಇಲಾಖೆ 132 ಗೇಟ್‌ಗಳನ್ನು ನೀಡಿದ್ದು ರೈತರು ಲೇಬರ್ಗಳ ಸಹಾಯದಿಂದ ಕ್ರಸ್ಟ್ಗೇಟ್ಗಳನ್ನು ಹಾಕುವ ಕಾರ್ಯ ಪೂರ್ಣಗೊಳಿಸಿದ್ದಾರೆ.
ಪ್ರತಿಯೊಂದು ಹಂತದಲ್ಲಿ 44 ಗೇಟ್ಗಳಂತೆ ಮೂರು ಹಂತದಲ್ಲಿ ಬಾಂದಾರಕ್ಕೆ ಸುಮಾರು 132 ಗೇಟ್ ಅಳವಡಿಸಲಾಗಿದೆ. ರೈತರೇ ನೂತನ ಗೇಟ್‌ಗಳಿಗೆ ಬಣ್ಣ ಬಳಿದು ವೈಸರ್ ರಬ್ಬರ್ ಹಾಕಿ ಗೋಣಿಚೀಲದ ತುಣುಕುಗಳಿಂದ ಕ್ರೈಸ್ಟಗೇಟ್ ಹಾಕಿದರು. ನೀರು ಸೋರುತ್ತಿರುವ ಗೇಟ್‌ಗಳಲ್ಲಿ ಬಟ್ಟೆ ಸೇರಿದಂತೆ ಮರಳು ಹಾಕುವ ಮೂಲಕ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿದರು. ಪ್ರಸ್ತುತ ಭಾನುವಾರ ಮಧ್ಯಾಹ್ನ ಗೇಟ್ ಹಾಕಿಲಾಗಿದೆ. ಈಗಾಗಲೇ ಎರಡನೇ ಹಂತದವರೆಗೆ ಗೇಟ್ ಹಾಕಲಾಗಿದ್ದು ನೀರು ನಿಂತಿದೆ. ಮೂರನೇಯ ಹಂತದಲ್ಲಿ ಗೇಟ್ ಹಾಕಲಾಗಿದ್ದು, ಇನ್ನು ಒಂದು ದಿನದಲ್ಲಿ ಬಾಂದಾರ ತುಂಬಿ ನೀರು ಮೇಲೆ ಹರಿಯುತ್ತದೆ ಎಂಬ ಸಂತಸವನ್ನು ರೈತರು ವ್ಯಕ್ತಪಡಿಸಿದರು.ಮೂರು ತಿಂಗಳ ಹಿಂದೆ ಕಳುವಾಗಿದ್ದ ಗೇಟ್: ಹಾವೇರಿ ಜಿಲ್ಲೆಯ ಜೀವನಾಡಿ ವರದಾ ನದಿಗೆ ಸುಮಾರು 14 ಕಡೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ಮಳೆಗಾಲದ ಮುಗಿಯುತ್ತಿದ್ದಂತೆ ಗೇಟ್ ಅಳವಡಿಸುವದರಿಂದ ಬ್ಯಾರೇಜ್ ಇರುವ ಸ್ಥಳ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ಜನ ಜಾನುವಾರುಗಳಿ ನೀರು ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಗೇಟ್ ಹಾಕುತ್ತದೆ. ಆದರೆ ಪ್ರಸ್ತುತ ವರ್ಷ ಕಳಸೂರು ಶೇಷಗಿರಿ ಸೇರಿದಂತೆ ಮೂರು ಬ್ಯಾರೇಜ್‌ಗಳ ಕ್ರೈಸ್ಟ್ ಗೇಟ್‌ಗಳನ್ನು ಕಳ್ಳರು ಕದ್ದೊಯ್ದಿದ್ದರು.
Laxmi News 24×7