ಹಿರಿಯ ಸಾಧಕರನ್ನು ಗೌರವಿಸುವ ಸಂಘದ ಕಾರ್ಯ ನಿಜಕ್ಕೂ ಶ್ಲ್ಯಾಘನೀಯ. ನಿವ್ರತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ
ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪಂಚ ಸಹಸ್ರ ದೀಪೋತ್ಸವ
ಸಾರ್ವಜನಿಕ ಸೇವೆಗಾಗಿ ಜೀವಮಾನವನ್ನೇ ಮುಡುಪಾಗಿಟ್ಟು, ಜೀವವನ್ನು ತೇಯ್ದ ಹಿರಿಯ ಸಾಧಕ ಜೀವಿಗಳನ್ನು ಗುರುತಿಸಿ ಗೌರವಿಸುವ ಸಂಘದ ಕಾರ್ಯ ನಿಜಕ್ಕೂ ಶ್ಲ್ಯಾಘನೀಯ ಎಂದು ಬೆಳಗಾವಿ ನಿವ್ರತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಹೇಳಿದರು.
ಅವರು ಶನಿವಾರ ಬೆಳಗಾವಿ ರಾಮತೀರ್ಥನಗರದ ಶ್ರೀ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ನಿಮಿತ್ತ ಸಂಜೆ ಜರುಗಿದ ಪಂಚ ಸಹಸ್ರ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಗದ್ದುಗೆಗೆ ಪೂಜೆ ಸಲ್ಲಿಸಿ ರಾಷ್ಟ್ರಪ್ರಶಸ್ತಿ ಪುರಸ್ಕ್ರತ ನಿವ್ರತ್ತ ಘಟಕಾಧಿಕಾರಿ ಬಸಪ್ಪಾ ಉರಬಿನಹಟ್ಟಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಬದುಕಿನಲ್ಲಿ ನಮ್ಮಿಂದ ಜಾರುತ್ತಲೇ ಇರುವ ಪ್ರತಿ ಕ್ಷಣಗಳ ಅವಧಿಯಲ್ಲಿ ಸಮಾಜಕ್ಕೂ, ಪರಿಸರಕ್ಕೂ ಒಳಿತನ್ನು ಮಾಡಿ ಬದುಕು ಶ್ರೀಮಂತವಾಗಿಸಿದಾಗ ನಮ್ಮ ಜನ್ಮ ಸಾರ್ಥಕಗೊಳ್ಳುವದು .
ಮಕ್ಕಳಿಗೆ ಧರ್ಮ, ಸಂಸ್ಕಾರ ಕಲಿಸಿ, ಮಂದಿರಗಳಿಗೆ ಹೆಜ್ಜೆ ಹಾಕಿಸಿದಾಗ ಅವರು ಬೌದ್ಧಿಕವಾಗಿ ಗಟ್ಟಿಯಾಗಬಲ್ಲರು . ಕಲಿತವರಿಂದಲೇ ಕೆಟ್ಟದ್ದನ್ನು ಕಾಣುವಂತಾಗಿದ್ದು, ದುರದ್ರಷ್ಟಕರ ಸಂಗತಿಯಾಗಿದ್ದು, ಅವರಲ್ಲಿ ಈ ಗುಣಕ್ಕೆ ಧರ್ಮ ಸಂಸ್ಕಾರದ ಕೊರತೆಯೇ ಮುಖ್ಯ ಕಾರಣ ಎಂದರಲ್ಲದೆ, ದೀಪೋತ್ಸವ ಸರ್ವರಿಗೂ ಸುಖ ಶಾಂತಿ ನೀಡಲಿ ಎಂದು ಶುಭ ಹಾರೈಸಿದರು.
ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅದ್ಯಕ್ಷ ವಿನಯ ನಾವಲಗಟ್ಟಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ , ಈ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿ ಅತ್ಯಾವಶ್ಯಕ ಮೂಲ ಭೂತ ಸೌಕರ್ಯಗಳ ಅಭಿವ್ರದ್ಧಿಗೆ ಸದಾ ಕೈ ಜೋಡಿಸುವದಾಗಿ ಹೇಳಿದರಲ್ಲದೆ, ಸನ್ಮಾನಿಸಿದ್ದಕ್ಕೆ ಧನ್ಯವಾದ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ ಮಾತನಾಡಿ, ಈ ದೇವಸ್ಥಾನದ ಕಮಿಟಿ ನೇತೃತ್ವ ಗಟ್ಟಿಯಾಗಿದ್ದು, ಯಾವುದೇ ಕೆಲಸ ಕಾರ್ಯಗಳಿದ್ದರೂ ಜನರ ಮತ್ತು ಪ್ರದೇಶದ ಅಭಿವ್ರದ್ಧಿಗೆ ನಾವು ಸದಾ ಬದ್ಧ ಎಂದರು. ವೇದಿಕೆಯ ಗಣ್ಯರು
ಟ್ರಸ್ಟ್ ನಿಂದ ಅಕ್ಕತಂಗೇರಹಾಳ ೯೨ ರ ವಯಸ್ಸಿನ ಹಿರಿಯ ಕಾಯಕ ಜೀವಿ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಬಸಪ್ಪಾ ಉರಬಿನಹಟ್ಟಿ ಅವರಿಗೆ ಕೊಡಮಾಡಿದ ಜೀವಮಾನ ಸಾಧನಾ ಗೌರವ ಪ್ರಶಸ್ತಿ , ನೀಡಿ ಅಭಿನಂದಿಸಿದರು.
ಟ್ರಸ್ಟ ಅಧ್ಯಕ್ಷ ಸುರೇಶ ಉರಬಿನಹಟ್ಟಿ ಸ್ವಾಗತಿಸಿ , ದೇವಸ್ಥಾನ ಮತ್ತು ಟ್ರಸ್ಟ ನ ಕುರಿತು ವಿವರಿಸಿ, ನಮ್ಮ ದೇವಸ್ಥಾನಕ್ಕೆ ಹೊರ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಅಂದ್ರ ದ ಅಸಂಖ್ಯಾತ ಭಕ್ತರನ್ನೊಂಳಗೊಂಡಿದ್ದು, ಪ್ರವಾಸಿಗರಿಗೆ ಅವಶ್ಯವಿರುವ ಸೌಕರ್ಯಗಳನ್ನು ಪೂರೈಸುವಂತೆ ಹೇಳಿದರಲ್ಲದೆ, ಗಣ್ಯರಿಗೆ ಈ ಕುರಿತ ಮನವಿ ಅರ್ಪಿಸಿದರು.
ವೇದಿಕೆಯಲ್ಲಿ ಯಾದವ್ ಫೌಂಡೇಶನ್ ಅದ್ಯಕ್ಷ ಸುರೇಶ ಯಾದವ, ಮಾಜಿ ಮೇಯರ್ ಎನ್ ಬಿ ನಿರ್ವಾಣಿ, ಸೂಪರ್ ವಾಕಿಂಗ್ ಟೀಮ್ ಅಧ್ಯಕ್ಷ ಎಮ್ ಬಿ ಹಿತ್ತಲಮನಿ, ಟ್ರಸ್ಟ ಖಜಾಂಚಿ ಮನೋಹರ ಕಾಜಗಾರ, ಧುರೀಣ ಮದನಕುಮಾರ ಭೈರಪ್ಪನವರ ಉಪಸ್ಥಿತರಿದ್ದರು.
ದೇವಸ್ಥಾನದ ಮಹಿಳಾ ಸಂಘದ ಲತಾ ಕಾಜಗಾರ, ನಿರ್ಮಲಾ ಉರಬಿನಹಟ್ಟಿ, ಸುಜಾತಾ ಜುಟ್ಟನ್ನವರ , ಕಾವ್ಯಾ ಚಿಟಗಿ, ವಿದ್ಯಾ ಮೆಳವಂಕಿ, ಉಮಾ ಖಾನವಾಡೆ
ನಾಗಶ್ರೀ ಕುರಬೇಟ ಮುಂತಾದವರು ಇದ್ದರು.. ಕಮಿಟಿ ಕಾರ್ಯದರ್ಶಿ ಮಂಜುನಾಥ ಪಾಟೀಲ, ಸದಸ್ಯರಾದ ಶಿವಾನಂದ ಮಠಪತಿ ಮಹಾದೇವ ಟೊಣ್ಣೆ, ಮಲ್ಹಾರ ದಿಕ್ಷಿತ್, ಜಿ ಜಿ ಹುನ್ನೂರ, ಸಿ ಎಸ್ ಖನಗನ್ನಿ, ಬಸವರಾಜ ಹಿರೇಮಠ, ಆನಂದ ಪಾಟೀಲ, ಎನ್ ಬಿ ಹನ್ನಿಕೇರಿ, ವೀರನಗೌಡಾ ಈಶ್ವರಪ್ಪಗೋಳ, ಎಮ್ ಬಿ ಕೋಮಾರಶೆಟ್ಟಿ , ಪ್ರಕಾಶ ದೀಕ್ಷಿತ್ , ಅರ್ಜುನ ಉರಬಿನಹಟ್ಟಿ ಸೇರಿದಂತೆ ಅಸಂಖ್ಯಾತ ಭಕ್ತರು, ಮಹಿಳೆಯರು, ಹಿರಿಯರು ಉಪಸ್ಥಿತರಿದ್ದರು.
ಪ್ರಕಾಶ ದೀಕ್ಷಿತ್ ಪೂಜೆ ಸಲ್ಲಿಸಿದರು.
ಬಿ ಬಿ ನಿರ್ವಾಣಿ ನಿರೂಪಿಸಿದರು. ಎ. ಕೆ ಪಾಟೀಲ ವಂದಿಸಿದರು.
ವರದಿ, ಸುರೇಶ ಉರಬಿನಹಟ್ಟಿ
Laxmi News 24×7