ಹುಬ್ಬಳ್ಳಿ: ಕಳೆದ ಗುರುವಾರ ರಾತ್ರಿ ನಗರದ ಮಂಟೂರ ರಸ್ತೆಯಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಶನಿವಾರ ಬೆಂಡಿಗೇರಿ ಠಾಣೆಗೆ ಹಾಜರಾಗಿ ಶರಣಾಗಿದ್ದಾನೆ.
ಬಂಗಾರ ಬಾಲ್ಯ ಎಂಬಾತನೇ ಪೊಲೀಸರೆದುರು ಶರಣಾಗತನಾಗಿರುವ ಆರೋಪಿ. ಮಲ್ಲಿಕ್ ಜಾನ್ ಅಹ್ಮದ್ (25) ಎಂಬಾತನಿಗೆ ಜನರ ಗುಂಪೊಂದು ಏಕಾಏಕಿ ದಾಳಿ ಮಾಡಿ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ನಂತರ ಗಾಯಗೊಂಡಿದ್ದ ಮಲ್ಲಿಕ್ ಜಾನ್ ಅಲಿಯಾಸ್ ಮೆಂಡಾ ಮಲ್ಲಿಕ್ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಪ್ರತಿಭಟನೆ ನಡೆಸಿದ್ದ ಕುಟುಂಬಸ್ಥರು: ಘಟನೆ ಹಿನ್ನೆಲೆಯಲ್ಲಿ, ಕೊಲೆಯಾದ ಮಲ್ಲಿಕ್ ಕುಟುಂಬಸ್ಥರು, ಯುವಕನ ಸ್ನೇಹಿತರು ಹುಬ್ಬಳ್ಳಿ ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ನಡು ರಸ್ತೆಯಲ್ಲಿ ಮೃತದೇಹ ಇರಿಸಿ ಪ್ರತಿಭಟನೆ ನಡೆಸಿದ್ದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪ್ರತಿಭಟನೆ ಆಗ್ರಹಿಸಿದ್ದರು. ಅಲ್ಲದೆ, ಈ ಕೊಲೆಗೆ ಬೆಂಡಿಗೇರಿ ಪೊಲೀಸರ ನಿರ್ಲಕ್ಷ್ಯತನವೇ ಕಾರಣ ಎಂದು ಆರೋಪಿಸಿ, ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.
Laxmi News 24×7