ಅಥಣಿ : ಸೈಟ್ ಕೊಡಿಸುವ ವಿಚಾರವಾಗಿ ವ್ಯಕ್ತಿಗಳಿಬ್ಬರ ನಡುವಿನ ಹಣಕಾಸಿನ ವ್ಯವಹಾರ ಮುಗಿಸಲು ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಅಥಣಿ ಸಿಪಿಐ ಸಂತೋಷ ಹಳ್ಳೂರ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೋಕಾಯುಕ್ತ ಕಚೇರಿಗೆ ಅಥಣಿ ನಿವಾಸಿ ಮೀರಸಾಬ ಮುಜಾವರ ಸಿಪಿಐ ಸಂತೋಷ ಹಳ್ಳೂರ ಮೇಲೆ ದೂರು ದಾಖಲಿಸಿದ್ದರು. ಅಥಣಿ ನಿವಾಸಿ ಅನುಪಕುಮಾರ ನಾಯರ ಎಂಬವರಿಗೆ ಮೀರಸಾಬ ಮುಜಾವರ ಎರಡು ಸೈಟ್ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ 20 ಲಕ್ಷ ರೂ.ನೀಡಿದ್ದರು.
2 ಸೈಟ್ ಕೊಡಿಸುವುದಾಗಿ ಹೇಳಿ ಅನುಪಕುಮಾರ ಹಣ ಪಡೆದು, ಮಾತುಕತೆಯ ಅವಧಿಯ ಒಳಗಾಗಿ ಸೈಟ್ ನೀಡದಿದ್ದಾಗ ಹಣ ಮರಳಿ ಮೀರಾಸಾಬ ಮುಜಾವರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.
ಸಿಪಿಐ ಸಂತೋಷ್ ಹಳ್ಳೂರ ಮೀರಸಾಬ ಅವರೊಂದಿಗೆ ಲಂಚಕ್ಕೆ ಬೇಡಿಕೆಗೆಟ್ಟ ವಿಚಾರ ಫೋನ್ ನಲ್ಲಿ ಮಾತಾಡಿದ ಆಡಿಯೋ ಆಡಿಯೋ ಆಧರಿಸಿ ದೂರು ದಾಖಲಿಸಿದ್ದರು. ದೂರು ದಾಖಲು ಮಾಡಿಕೊಂಡಿದ್ದ ಲೋಕಾಯುಕ್ತ ಪೋಲಿಸರು, ತನಿಖೆ ಹಿನ್ನಲೆಯಲ್ಲಿ ಇಂದು ಅಥಣಿ ಪೊಲೀಸ್ ಠಾಣೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅಥಣಿ ಸಿಪಿಐ ಸಂತೋಷ ಹಳ್ಳೂರ. ನಾನು ಯಾವುದೇ ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಅವರೇ ಪದೇ, ಪದೇ ಕರೆ ಮಾಡಿ ಹಣದ ವಿಷಯವಾಗಿ ಮಾತನಾಡಿದ್ದು ಎಂಬ ಸ್ಪಷ್ಟನೆ ನೀಡಿದ್ದಾರೆ.
Laxmi News 24×7