ಬೆಂಗಳೂರಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಕನ್ನಡ ಜಾಗೃತಿ ಸಮಿತಿ ಸದಸ್ಯರ ರಾಜ್ಯಮಟ್ಟದ ಕಮ್ಮಟದಲ್ಲಿ ಪಾಲ್ಗೊಂಡ ಕ್ಷಣಗಳು.
ಜಿಲ್ಲಾಡಳಿತದ ಮಟ್ಟದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಸ್ಥಳೀಯ ಹಂತದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅತೀ ಮಹತ್ವದ ಒಂದು ದಿನದ ಕಾರ್ಯಾಗಾರದಲ್ಲಿ ಅನೇಕ ಸಾಹಿತಿಗಳು, ಕವಿಗಳು ಕನ್ನಡ ಪರ ಚಿಂತಕರೊಂದಿಗೆ ಬೆರೆಯುವ, ಸದಾವಕಾಶ ಒದಗಿ ಬಂದದ್ದು ನಮ್ಮ ಪುಣ್ಯ.
ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಬಿಳಿಮಲೆ,
ಹಿರಿಯ ಸಾಹಿತಿಗಳಾದ ಡಾ ಬರಗೂರು ರಾಮಚಂದ್ರಪ್ಪ, ಕವಿ, ಮಾಜಿ ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಎಲ್ ಹನುಮಂತಯ್ಯ, ಪ್ರಾಧಿಕಾರದ ಸದಸ್ಯರಾದ ಶ್ರೀಮತಿ ದಾಕ್ಷಾಯಿಣಿ ಹುಡೇದ ಮೆಡಮ್ ಸೇರಿದಂತೆ ಅನೇಕ ಮಹನೀಯರು ಕಾರ್ಯಾಗಾರದಲ್ಲಿ ಭಾಗಿಯಾಗಿ ಮಾರ್ಗದರ್ಶನ ನೀಡಿದರು.
ಬೆಳಗಾವಿಯಿಂದ ಶ್ರೀ ಸಾಗರ ಸಾತ್ಪುತೆ, ಶ್ರೀ ಮಹಾದೇವಣ್ಣ ತಳವಾರ ಸೇರಿದಂತೆ ಜಿಲ್ಲೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯ ಕನ್ನಡ ಜಾಗೃತಿ ಸಮಿತಿಯ ಸದಸ್ಯರು ಭಾಗಿಯಾಗಿದ್ದೇವು.
Laxmi News 24×7