ಶಾಸಕ ಅಭಯ್ ಪಾಟೀಲರ ವಿಶೇಷ ಪ್ರಯತ್ನ…ಖಾಸಬಾಗ ಪಾಟೀಲ್ ಗಲ್ಲಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆಶಾಸಕ ಅಭಯ್ ಪಾಟೀಲರ ವಿಶೇಷ ಪ್ರಯತ್ನ…
ಖಾಸಬಾಗ ಪಾಟೀಲ್ ಗಲ್ಲಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆಸ್ಥಳೀಯರಿಂದ ವ್ಯಕ್ತವಾದ ಮೆಚ್ಚುಗೆ
ಯುಜಿಡಿ ಲೈನ್ ಬಳಿಕ ರಸ್ತೆ ಸುಧಾರಣೆಗೆ ಆದ್ಯತೆ
ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ. 21ರ ಖಾಸಬಾಗ ಪಾಟೀಲ್ ಗಲ್ಲಿಯಲ್ಲಿ ರಸ್ತೆ ಕಾಮಗಾರಿಗೆ ಇಂದು ಚಾಲನೆಯನ್ನು ನೀಡಲಾಯಿತು.
ಬೆಳಗಾವಿಯ ದಕ್ಷಿಣಭಾಗದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದೆ. ವಾರ್ಡ್ ನಂ. 21 ರ ಖಾಸಬಾಗ ಪಾಟೀಲ್ ಗಲ್ಲಿಯಲ್ಲಿ ರಸ್ತೆ ಕಾಮಗಾರಿಯನ್ನು ಆರಂಭಿಸಲಾಗಿದೆ.
ಪಾಟೀಲ್ ಗಲ್ಲಿಯಲ್ಲಿ ಯುಜಿಡಿ ಸಮಸ್ಯೆ ಅತಿಯಾಗಿತ್ತು. ಸೈಕಲ್ ಫೇರಿಗೆ ಬಂದಾಗ ಇಲ್ಲಿನ ಜನರು ಶಾಸಕರ ಗಮನಕ್ಕೆ ತಂದಿದ್ದರು.
ಇದನ್ನರಿತ ಶಾಸಕ ಅಭಯ್ ಪಾಟೀಲ್ ಅವರು ತಕ್ಷಣವೇ ಸ್ಪಂದಿಸಿ, ಯುಜಿಡಿ ಲೈನ್ ನಿರ್ಮಿಸಿದ್ದಾರೆ. ಈಗ ರಸ್ತೆಯನ್ನು ಕೂಡ ಅಭಿವೃದ್ಧಿಗೊಳಿಸಲಾಗುತ್ತಿದೆ. ದಕ್ಷಿಣಭಾಗದ ಜನರ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ಪರಿಹರಿಸಲು ಶಾಸಕರು ಸದಾ ಸಿದ್ಧರಾಗಿರುತ್ತಾರೆ ಎಂದು ಶಾಸಕ ಅಭಯ್ ಪಾಟೀಲ್ ಸಹೋದರ ಭರತ್ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ನಗರಸೇವಕ ವಿನಾಯಕ ಕಾಮಕರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
Laxmi News 24×7