ಕ್ರಾಂತಿ ಮಹಿಳಾ ಮಂಡಳ ಉಮಾ ಸಂಗೀತ ಪ್ರತಿಷ್ಠಾನದಿಂದ ಹಿರಿಯ ನಾಗರಿಕ ದಿನಾಚರಣೆ
ಗುರು, ಹಿರಿಯರನ್ನು ಗೌರವಿಸಿ: ಜಯ ಜೋಶಿ
ಬೆಳಗಾವಿ: ಇಂದಿನ ಯುವ ಪೀಳಿಗೆಗೆ ಹಿರಿಯರ ಅನುಭವದ ಮಾತುಗಳ ಅವಶ್ಯಕತೆ ಇದೆ. ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಯುವಕರು ರೂಡಿಸಿಕೊಳ್ಳಬೇಕು ಎಂದು ಜಯ ಜೋಶಿ ಅವರು ಹೇಳಿದರು.
ನಗರದ ಹಿಂದವಾಡಿಯ ಲಕ್ಷ್ಮಿ ಮಂದಿರದಲ್ಲಿ ಕ್ರಾಂತಿ ಮಹಿಳಾ ಮಂಡಳ ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ಹಿರಿಯ ನಾಗರಿಕ ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವರಲ್ಲಿರುವ ಅನುಭವ ಮತ್ತು ಜ್ಞಾನ ಅಪಾರವಾದದ್ದು ಅದನ್ನು ನಾವು ಕಲಿಬೇಕು. ಅವರ ಸಲಹೆಗಳನ್ನು ಕೇಳಿ ಮತ್ತು ಅವರ ಬುದ್ಧಿವಂತಿಕೆಯಿಂದ ಮಾರ್ಗದರ್ಶನ ಪಡೆಯಬೇಕು. ನಾವು ಸಮಾಜದಲ್ಲಿ ಸುಸಂಸ್ಕೃತ ಹೇಗೆ ಬಾಳಿ- ಬದುಕಬೇಕು ಎಂಬುವುದು ಹಿರಿಯರಿಂದ ನೋಡಿ ಕಲಿಸಯಬೇಕು ಎಂದು ಹೇಳಿದರು.
ಶರೀರಕ್ಕೆ ವಯಸ್ಸಾಗುತ್ತದೆ ವಿನಹಃ ಮನಸ್ಸಿಗೆ ಅಲ್ಲ, ನಾವು ನಮ್ಮ ಜೀವನದಲ್ಲಿ ಖುಷಿಯಾಗಿ ಇದ್ದು ದಿನನಿತ್ಯ ಲಘು ವ್ಯಾಯಾಮ ಸರಳ ಪದ್ಧತಿ ಪ್ರಾಣಾಯಾಮಗಳನ್ನು ಮಾಡುವುದರಿಂದ ನೂರು ವರ್ಷ ಕಾಲ ನಿರೋಗಿಗಳಾಗಿ ಬಾಳುತ್ತೇವೆ ಎಂದು ಎಲ್ಲರಿಗೂ ಸಲಹೆ ನೀಡಿದರು.
ನಿವೃತ್ತ ಯೋಧರಾದ ಶಿವಶಂಕರ್ ಚಿನ್ನಾಪುರ್ ಇವರ ಧರ್ಮಪತ್ನಿ ಪ್ರೇಮಾ ಎಸ್ ಚಿನ್ನಾಪುರ ಅವರು ಮಾತನಾಡಿ, ಸಮಾಜ ಮುಖಿ ಕಾರ್ಯಗಳ ಮೂಲಕವೇ ಈ ಮಂಡಲವು ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ಇಂತಹ ಹೆಚ್ಚು ಸಂಘಟನೆಗಳನ್ನು ಸ್ಥಾಪಿಸಿ ಸಮಾಜ ಸೇವೆಗೆ ಮುಂದಾಗಬೇಕು. ಕಾಲವೂ ಎಷ್ಟು ಬದಲಾದರೂ ನಮ್ಮ ಸಂಸ್ಕಾರ ಆಚಾರ- ವಿಚಾರಗಳು ಹಿರಿಯ ದಾರಿಯಲ್ಲಿ ಸಾಗಬೇಕು ಅಂದಾಗ ಬದುಕಿನ ಬಾಳಿಗೆ ಶ್ರೇಯಸ್ಸು ಎಂದು ಹೇಳಿದರು.
ಪಾರ್ವತಿ ಭಾತ್ ಕಂಡೆ , ಪ್ರೇಮ ಕಳ್ಳಿಮನಿ, ಚಿತ್ರ ಜವಳಗಿ ಇವರು ಕೂಡ ನಮ್ಮ ಮಂಡಳ ಮಾಡುತ್ತಿರುವ ಸಾಮಾಜಿಕ ಕಾರ್ಯಗಳನ್ನು ನೋಡಿ ನಾವು ಕೂಡ ಸಹಾಯ- ಸಹಕಾರ ನೀಡುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರೇಮ ಚಿನ್ನಾಪುರ , ಜಯ ಜೋಶಿ ಪಾರ್ವತಿ ಭಾತ್ ಕಂಡೆ, ಪ್ರೇಮಾ ಕಳ್ಳಿಮನಿ, ಚಿತ್ರ ಜವಳ್ಗಿ ಹಾಗೂ ಹಲವಾರು ಹಿರಿಯ ನಾಗರೀಕರಿಗೆ ಸನ್ಮಾನಿಸಲಾಯಿತು.
ಅಧ್ಯಕ್ಷರಾದ ಮಂಗಲಾ ಮಠದ ಸ್ವಾಗತಿಸಿದರು ಕಾರ್ಯದರ್ಶಿ ಭಾರತಿ ರತ್ನಪ್ಗೊಳ್ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾಯೋಜಕರಾದ ಗೀತಾ ಅನಿತಾ ಇವರಿಂದ ಪ್ರಾರ್ಥಿಸಿದರು. ಮಮತಾ ಆಂಟಿ ಮತ್ತು ಅನಿತಾ ಜಕ್ಕಣ್ಣವರ್ ಇವರು ಅತಿಥಿಗಳ ಪರಿಚಯಿಸಿದರು. ಗೀತಾ ಎಮ್ಮಿ ನಿರೂಪಿಸಿದರು. ಮೈನಾ ಕುಲಕರ್ಣಿ ವಂದಿಸಿದರು.
Laxmi News 24×7