ದಾವಣಗೆರೆ: ಧರ್ಮ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಸ್ವಾತಂತ್ರ್ಯ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲ. ದೇಶದಲ್ಲಿ ಅವರದ್ದೇ ಆದ ಧರ್ಮ ಪಾಲನೆ ಮಾಡಲು ಸಂವಿಧಾನ ಅವಕಾಶ ನೀಡಿದೆ ಎಂದು ರಂಭಾಪುರಿ ಜಗದ್ಗುರುಗಳು ತಿಳಿಸಿದ್ದಾರೆ.
ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ, ಸಂಸ್ಥೆಗಳು ಚಟುವಟಿಕೆಗಳನ್ನು ನಡೆಸಲು ಅನುಮತಿ ಪಡೆಯುವಂತೆ ರಾಜ್ಯ ಸರ್ಕಾರ ಆದೇಶಿಸಿರುವ ವಿಚಾರವಾಗಿ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಶೆಟ್ಟಿಹಳ್ಳಿಯಲ್ಲಿ ಇಂದು ಶ್ರೀಗಳು ಮಾತನಾಡಿದರು.
ಧರ್ಮಕ್ಕೆ ವ್ಯತಿರಿಕ್ತವಾದ ನಿರ್ಧಾರ ಕೈಗೊಂಡಾಗ ಜನರು ವಿರೋಧ ಮಾಡಿದ್ದಾರೆ. ಸರ್ಕಾರ ಈಗ ಅಂತಹ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ. ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದರು.
ಅದು ಪೂರ್ಣ ಆಗುವವರೆಗೆ ಧರ್ಮಪೀಠಗಳು ಅದರ ಬಗ್ಗೆ ಏನೂ ಹೇಳುವುದಿಲ್ಲ. ದೇಶದಲ್ಲಿ ಅವರದ್ದೇ ಆದ ಧರ್ಮ ಪಾಲನೆ ಮಾಡಲು ನಮ್ಮ ಸಂವಿಧಾನ ಅವಕಾಶ ಕೊಟ್ಟಿದೆ. ಧರ್ಮದ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಸ್ವಾತಂತ್ರ್ಯ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲ. ನಮ್ಮನ್ನು ಆಳುವ ರಾಜಕೀಯ ಪಕ್ಷಗಳು ಜಾತಿ-ಜಾತಿಗಳ ನಡುವೆ ಸಂಘರ್ಷ ತರುವ ಬದಲು ಸಹಬಾಳ್ವೆಯಿಂದ ಇರುವಂತೆ ಅವಕಾಶ ಮಾಡಬೇಕು ಎಂದು ಹೇಳಿದರು.
ಜಾತಿಗಿಂತ ಧರ್ಮ ಪರಂಪರೆ ಮುಖ್ಯ. ಅವುಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ. ಸಾಮರಸ್ಯದಿಂದ ಎಲ್ಲರೂ ಸೇರಿ ಬಾಳಿ ಬದುಕಬೇಕೆಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗಿದೆ. ಕೆಲವರು ಸರ್ಕಾರದ ಸವಲತ್ತಿಗಾಗಿ ಧರ್ಮದ ಒಡಕಿನ ಮಾತುಗಳನ್ನಾಡುತ್ತಿದ್ದಾರೆ. ಮುಂದುವರೆದ ಜಾತಿಗಳಲ್ಲೂ ಕೂಡ ಬಡವರಿದ್ದಾರೆ. ಅಂತಹ ಬಡವರ ಬಗ್ಗೆಯೂ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕಿತ್ತು. ಆದರೆ, ಅದು ಆಗಿಲ್ಲ. ಜಾತಿ ಅಧರಿಸಿ ಸೌಲಭ್ಯಗಳನ್ನು ಕೊಡುವುದಕ್ಕಿಂತ ಆರ್ಥಿಕವಾಗಿ ದುರ್ಬಲರಿಗೆ ಸೌಲಭ್ಯ ನೀಡಬೇಕೆಂದು ಶ್ರೀಗಳು ಸಲಹೆ ನೀಡಿದರು.
Laxmi News 24×7