ಇಂದು ವಸುಬಾರಸ(ಗೋ ಪೂಜೆ ದಿನ) ದೀಪಾವಳಿಯ ಮೊದಲ ದಿನ
ಬೆಳಗಾವಿಯಲ್ಲಿ ದೇಶಿ ಗೋವುಗಳ ದರ್ಶನ ಯಾತ್ರೆ
ಇಂದು ವಸುಬಾರಸ(ಗೋ ಪೂಜೆ ದಿನ)ದೀಪಾವಳಿಯ ಮೊದಲ ದಿನದೇಶಿ ಗೋವುಗಳ ದರ್ಶನ ಯಾತ್ರೆ
ಶ್ರೀ ಶಿವಪ್ರತಿಷ್ಠಾನ ಮತ್ತು ಶ್ರೀ ಸಿದ್ಧೇಶ್ವರ ಗೋಶಾಲೆಯ ಸಹಯೋಗ
ಇಂದು ದೀಪಾವಳಿಯ ಮೊದಲ ದಿನ ವಸುಬಾರಸ್ ಅಂದರೇ, ಗೋವುಗಳ ಪೂಜಿಸುವ ದಿನ ಆದರೇ, ನಗರ ಪ್ರದೇಶದಲ್ಲಿ ದೇಶಿ ಗೋವುಗಳ ದರ್ಶನವಾಗದ ಹಿನ್ನೆಲೆ ಪ್ರತಿವರ್ಷದಂತೆ ಈ ಬಾರಿಯೂ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನನ ವತಿಯಿಂದ ಗೋವುಗಳ ದರ್ಶನ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ಇಂದು ಹಿಂದೂಗಳ ದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿ ಹಬ್ಬದ ಮೊದಲ ದಿನ. ಇಂದು ಗೋ ಪೂಜೆಯನ್ನು ಮಾಡಲಾಗುತ್ತದೆ. ನಗರ ಪ್ರದೇಶದಲ್ಲಿ ದೇಶಿ ಗೋವುಗಳ ದರ್ಶನವಾಗದ ಹಿನ್ನೆಲೆ ಪ್ರತಿವರ್ಷದಂತೆ ಈ ಬಾರಿಯೂ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನನ ವತಿಯಿಂದ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದ ದೇಸೂರ ರಸ್ತೆಯಲ್ಲಿರುವ ಶ್ರೀ ಸಿದ್ಧೇಶ್ವರ ಗೋಶಾಲೆಯ ಸಹಯೋಗದಲ್ಲಿ ಗೋವುಗಳ ದರ್ಶನ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ಶಹಾಪುರದ ಡಾ.ಶ್ಯಾಮಾ ಪ್ರಸಾದ ಮುಖರ್ಜಿ ರಸ್ತೆಯಲ್ಲಿರುವ ಛತ್ರಪತಿ ಶಿವಾಜೀ ಮಹಾರಾಜ್ ಉದ್ಯಾನದಿಂದ ಆರಂಭಗೊಂಡ ರ್ಯಾಲಿಯೂ ರೇಲ್ವೆ ಓವರ್ ಬ್ರಿಜ್ ಪಾಟೀಲ್.ಗಲ್ಲಿ, ಪಾಟೀಲ್ ಮಳಾ, ಮುಜಾವರ ಗಲ್ಲಿ, ಟಿಳಕ ಚೌಕ್, ರಾಮಲಿಂಗಖಿಂಡ ಗಲ್ಲಿ, ಕಿರ್ಲೋಸ್ಕರ್ ರಸ್ತೆಯ ಮಾರ್ಗವಾಗಿ ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ್ ವೃತ್ತದ ಶಂಭು ತೀರ್ಥಕ್ಕೆ ತಲುಪಿ ಗೋ ದರ್ಶನ ಯಾತ್ರೆಯೂ ಕೊನೆಗೊಂಡಿತು. ಈ ವೇಳೆ ಮಹಾರಾಜರಿಗೆ ಆರತಿಯನ್ನು ನೆರವೇರಿಸಿ, ವಸುಬಾರಸದ ಮಹತ್ವವನ್ನು ತಿಳಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೋಪಾಲಕರು ಮತ್ತು ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನನ ಕಾರ್ಯಕರ್ತರು ಭಾಗಿಯಾಗಿದ್ಧರು