Breaking News

ಶಾಲೆ ಮೇಲೆ ಅದೇನ ಪ್ರೀತಿ..ಅದೇನ ಅಭಿಮಾನ.

Spread the love

ದಿನ ಬೆಳಗಾದರೆ ಶತಮಾನೋತ್ಸವ ಆಚರಿಸಿಕೊಳ್ಳಲು ಸನ್ನದ್ಧವಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳವಿ… ಊರಿನ ಹಿರಿಯರು..ಹಳೆಯ ವಿದ್ಯಾರ್ಥಿಗಳು.. ಯುವಕರು ಸೇರಿಕೊಂಡು.. ನಾಡಿಗೆ ಮಾದರಿ ಆಗುವ ನಿಟ್ಟಿನಲ್ಲಿ… ಅತ್ಯಂತ ಹುರುಪು ಮತ್ತು ಉತ್ಸಾಹದಿಂದ..ಮೂರು ದಿನಗಳ ಅದ್ಧೂರಿ ಕಾರ್ಯಕ್ರಮ…
ಊರ ಜನರು ಶಾಲೆ ಮೇಲೆ ಅದೇನ ಪ್ರೀತಿ..ಅದೇನ ಅಭಿಮಾನ.. ಅಂತೀರಾ…ನಿಮ್ಮ ಕಡೆ ಹಳ್ಯಾಗ ಊರು ದೇವರ ಜಾತ್ರೆಗೆ ಈಡಿ ಊರಿಗೆ ಊರೇ… ಪಟ್ಟಿ ಕೂಡಿಸಿ ಊರ ಸಿಂಗಾರ ಮಾಡಿ…. ಖುಷಿ ಅನುಭವಿಸುವ ಹಾಗೆ.. ಮೂರು ದಿನಗಳ ಶತಮಾನೋತ್ಸವದ ಅಂಗವಾಗಿ ಕಾರ್ಯಕ್ರಮ ಗಳು… ಇಂದು ಗ್ರಾಮದ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ… ಶಾಸ್ತ್ರೋಕ್ತ ಪೂಜಾ ಕಾರ್ಯಕ್ರಮದೊಂದಿಗೆ ಪ್ರಾರಂಭ… ಅದ್ದೂರಿ ಚಾಲನೆ… ಊರ
ಜನರು….ಪಾಲಕರು …ಹಳೆಯ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ… ಶಾಲೆಯ ಚಿತ್ರಾನೆ ಬದಲು ಮಾಡಬಹುದು ಅನ್ನುವುದಕ್ಕೆ ಕೊಳವಿ ಗ್ರಾಮಸ್ಥರೇ ಸಾಕ್ಷಿ… ಸುಮಾರು ನಲವತ್ತು ಲಕ್ಷ ರೂಪಾಯಿಗಳಿಂದ ಐವತ್ತು ಲಕ್ಷಕ್ಕೆ ಸಮೀಪ ಇರುವ ಬಜೆಟ್.. ದಾನಿಗಳಿಂದ..ಹಳೆಯ ವಿದ್ಯಾರ್ಥಿಗಳು..
ಪಾಲಕರಿಂದ ದೇಣಿಗೆ ಸಂಗ್ರಹ… ಅದೇ ಇಲಾಖೆ ಬಹುದೊಡ್ಡ ಕಾರ್ಯಕ್ರಮ.. ನನ್ನ ಶಾಲೆ ನನ್ನ ಜವಾಬ್ದಾರಿ ಅನ್ನುವಂತೆ.. ಶಾಲೆಯ ಪುನರುಜ್ಜೀವನ… ಅಂದು ಮತ್ತು ಇಂದು.. ಶಾಲೆಯ ಚಿತ್ರಣವೇ ಬದಲಾಗಿ.. ನವನವೀನವಾಗಿ ಕಂಗೊಳಿಸುತ್ತಿದೆ.. ಶತಮಾನೋತ್ಸವ
ನೆಪವಾಗಿಟ್ಟುಕೊಂಡು.. ಅತ್ಯಾಕರ್ಷಕ ಶಾಲಾ ಕೊಠಡಿಗಳ ನವೀಕರಣಕ್ಕೆ ಸಾಕ್ಷಿ ಆಗಿ.. ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡು… ಇದ್ದರೆ ಸರಕಾರಿ ಶಾಲೆಗಳು ಹಿಂಗೆ ಇರಬೇಕು ಅನ್ನುವ ಹಾಗೆ… ಸರಿಸುಮಾರು ಮೂರ್ನಾಲ್ಕು ತಿಂಗಳು..ಊರಿನ ಯುವಕರ ತಂಡ.. ಶಾಲೆಯಲ್ಲಿ ಬೀಡುಬಿಟ್ಟಿರುವ ಇವರು..
ಹಗಲು ರಾತ್ರಿ ಎನ್ನದೆ.. ದುಡಿಯುವ ಮನಸ್ಸುಗಳು… ಅವರಿಗೆ ಒಂದು ಥ್ಯಾಂಕ್ಸ್ ಹೇಳದೆ ಹೋದರೆ.. ತಪ್ಪಾದೀತು… ಈ ಮೂಲಕ ಊರಿನ ಸಮಸ್ತ ಗುರು ಹಿರಿಯರಿಗೆ… ಪಾಲಕರಿಗೆ… ಹಳೆಯ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಅಭಿನಂದನೆಗಳು… ಅದೇನು ಪ್ಲಾನ್ ಅಂತೀರಾ.. ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ…ಸುಂದರ ಗಾರ್ಡನ್… ಧ್ವಜ ಸ್ತಂಭ… ಮಕ್ಕಳಿಗೆ ಹೈಟೆಕ್ ಶೌಚಾಲಯ.. ಸ್ಮಾರ್ಟ್ ಕ್ಲಾಸ್… ಒಂದಾ ಎರಡಾ.. ಅದನ್ನು ಹೇಳಿದರೆ ಸಾಲದು… ಒಂದು ಸಲ ಬಂದು
ನೋಡಬೇಕು… ಗೋಕಾಕದಿಂದ ಕೇವಲ ಹನ್ನೆರಡು ಕಿಲೋಮೀಟರ್.. ಬೆಳಗಾವಿ ರಸ್ತೆಯಲ್ಲಿ…ಆ ಊರಿಗೆ ತನ್ನದೇ ಆದ ಇತಿಹಾಸವಿದೆ… ಬ್ರೀಟಿಷರ ಎದೆ ನಡುಗಿಸಿದ ಸ್ವಾತಂತ್ರ್ಯ ಹೋರಾಟಗಾರರ ಪಾವನ ಜನ್ಮ ಭೂಮಿ.. ಅಂದು ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಜಾಗೃತ ಜನರು.. ಇಂದು ಕೂಡ ಅಷ್ಟೇ ಜಾಗೃತ ಜನರು… ಸ್ವಾಭಿಮಾನಿ ಜನರು… ಹತ್ತೊಂಭತ್ತ ನೂರು ಇಪ್ಪತೈದು ಶಾಲೆ ಪ್ರಾರಂಭ.. ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ನೀಡಿದ ಶಾಲೆ… ಮಾನ್ಯ ಶಾಸಕರಾದ ರಮೇಶ್ ಅಣ್ಣಾ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ…
ಶಾಲಾ ಶತಮಾನೋತ್ಸವದ ಕಾರ್ಯಕ್ರಮ.. ಇಂದು… ನಾಳೆ.. ಮತ್ತು ನಾಡಿದ್ದು… ಇದೇ ಅಕ್ಟೋಬರ್ ಹನ್ನೊಂದು ಮತ್ತು ಹನ್ನೆರಡು.. ಪ್ರಮುಖ ವೇದಿಕೆ ಕಾರ್ಯಕ್ರಮ… ಗಣ್ಯಾತಿಗಣ್ಯರ ಆಗಮನದಿಂದ ಊರಿನ ಅದ್ದೂರಿ… ಶೈಕ್ಷಣಿಕ ಜಾತ್ರೆ.. ಮೂರು ದಿನಗಳ ಕಾಲ ಇಡಿ ಊರಿಗೆ ಊರಿಗೆ ಹಬ್ಬದ ಊಟ… ಅಬ್ಬಾ ನನಗಂತೂ ತುಂಬಾ ಖುಷಿಯಾಯಿತು… ಇಂದು ಮುಂಚೂಣಿಯಲ್ಲಿ ಇರುವವರಲ್ಲಿ ನನ್ನ ಹಳೆಯ ವಿದ್ಯಾರ್ಥಿಗಳು ಉಂಟು..
ಇದೊಂದು ಮಾದರಿ ಅಷ್ಟೇ… ಸರಕಾರಿ ಶಾಲೆಗಳ ಮೇಲೆ ಸಾರ್ವಜನಿಕರ ಅಭಿಮಾನ.. ಪ್ರೀತಿ ಮೂಡಿ ಬಂದರೆ ಏನೆಲ್ಲಾ ಆಗಬಹುದು ಅನ್ನೋದಕ್ಕೆ ಸಾಕ್ಷಿ… ಮತ್ತೊಮ್ಮೆ ಶಾಲಾ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ತೊಡಗಿರುವ ಸಮಸ್ತರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು..
ತಮ್ಮ ಪ್ರೀತಿಯ
ಜಿ ಬಿ ಬಳಗಾರ
ಕ್ಷೇತ್ರ ಶಿಕ್ಷಣಾಧಿಕಾರಿಗಳು
ಗೋಕಾಕ

Spread the love

About Laxminews 24x7

Check Also

ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ಕಾಡಾ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಯುವರಾಜ್ ಕದಂ

Spread the loveಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ಕಾಡಾ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಯುವರಾಜ್ ಕದಂ ಅವರು ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ