Breaking News

ಸರಕಾರಿ ಜಾಗ ಅತಿಕ್ರಮಣ ಖಂಡಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ಮತ್ತೊಂದು ಪ್ರತಿಭಟನೆ

Spread the love

ಸರಕಾರಿ ಜಾಗ ಅತಿಕ್ರಮಣ ಖಂಡಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ಮತ್ತೊಂದು ಪ್ರತಿಭಟನೆ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ 2 ಗುಂಟೆ ಸರಕಾರಿ ಜಾಗವನ್ನು ಗ್ರಾಮ ಪಂಚಾಯಿತಿ ಪಿಡಿಒ ಬೇರೆಯವರಿಗೆ ಈ ಸ್ವತ್ತು ಮಾಡಿಕೊಟ್ಟಿದ್ದಾರೆಂದು ಚಿಕ್ಕಬಾಗೇವಾಡಿ ಗ್ರಾಮಸ್ಥರು ಹಾಗೂ ರೈತರು ಪ್ರತಿಭಟನೆ ನಡೆಸಿದ್ದರು
ಈ ಪ್ರತಿಭಟನೆ ಬೆನ್ನಲ್ಲೇ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸರಿಯಾದ ದಾಖಲೆ ಇಲ್ಲದಿರುವುದು ಕಂಡುಬಂದಿದ್ದು ಹೀಗಾಗಿಚಿಕ್ಕಬಾಗೇವಾಡಿ ಗ್ರಾಮ ಪಂಚಾಯತಿಯ ಪಿಡಿಒ ಅಧಿಕಾರಿಯನ್ನು ವರ್ಗಾವಣೆ ಮಾಡಲಾಯಿತು
ಹಾಗೂ2 ಗುಂಟೆ ಜಾಗದಲ್ಲಿ ನಿರ್ಮಾಣವಾಗುತ್ತಿರುವಂತ ಕಟ್ಟಡದ ಮೇಲೆ ನ್ಯಾಯಾಲಯದ ತಡೆಆಜ್ಞೆ
ನೀಡಲಾಗಿದೆ
ದಿಢೀರ್ ನಿರ್ಧಾರ ಕೈಗೊಂಡಿದ್ದಕ್ಕೆ ಅಧಿಕಾರಿಗಳು ವಿರುದ್ಧ ಮಾಡಿರುವಂತ ಈ ತೀರ್ಪನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಬೈಲಹೊಂಗಲ ತಾಲೂಕ ಪಂಚಾಯತಿಯ ಮುಂದೆ ಪ್ರತಿಭಟನೆ ನಡೆಸಿದರು
ಈ ಜಾಗದ ವಿಷಯವಾಗಿ ಬೈಲಹೊಂಗಲ ತಾಲೂಕು ಪಂಚಾಯತಿಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ
ಸಂಜೀವ ಜುನ್ನೂರ ಮಾತನಾಡಿಯಾವುದೇ ಒಂದು ಸರ್ಕಾರಿ ಜಾಗವನ್ನು ಬೇರೆಯವರಿಗೆ ಬಿಟ್ಟು ಕೊಡಬೇಕಾದರೆ ಗ್ರಾಮ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಜಿಲ್ಲಾ ಪಂಚಾಯತಿಯಲ್ಲಿ ಠರಾವು ಪಾಸಾಗಬೇಕು ಆದರೆಈವಿಷಯದಲ್ಲಿ ಹೀಗೆ ಯಾವುದೇ ತರನಾಗಿ ನಡೆದಿಲ್ಲ ಕೇವಲ ಗ್ರಾಮ ಪಂಚಾಯತಿಯಲ್ಲಿ ಮಾತ್ರ ಠರಾವು ಪಾಸಾಗಿದೆ ಎಂದುಸ್ಪಷ್ಟಪಡಿಸಿದರು
ಆರೋಪ ಪ್ರತ್ಯಾರೋಪದ ನಡುವೆ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ನೀಡಿ ಹೋರಾಟಕ್ಕೆ ತೆರೆ ನೀಡಿದರು
ಬಂದಂತ ಹೋರಾಟಗಾರರಿಗೆ ಮತ್ತೊಮ್ಮೆ ದಾಖಲೆಗಳನ್ನು ಪರಿಶೀಲನೆ ನಡೆಸಿ ನ್ಯಾಯದ ಪರವಾಗಿ ಇದ್ದವರಿಗೆ ಜಾಗವನ್ನು ಬಿಟ್ಟು ಕೊಡಲಾಗುವುದೆಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಮಾತನಾಡಿದಂತ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ದೀಪಕ್ ಗುಡುಗನಟ್ಟಿ
ಅಧಿಕಾರಿಗಳು ಸರಿಯಾಗಿ ದಾಖಲೆಗಳನ್ನು ಪರಿಶೀಲನೆ ನಡೆಸಿ ನ್ಯಾಯದ ಪರವಾಗಿ ಇದ್ದವರಿಗೆ ನ್ಯಾಯವನ್ನು ಕೊಡಿಸುವಂತಹ ಕೆಲಸವನ್ನು ಮಾಡಬೇಕೆಂದು ತಿಳಿಸಿದರು
ಹಾಗೂ ಮುಂಬರುವ ನವಂಬರ್ 1 ರಂದು ನಡೆಯುವ ಕರ್ನಾಟಕ ರಾಜ್ಯೋತ್ಸವವನ್ನು ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದು

Spread the love

About Laxminews 24x7

Check Also

ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಹಿರಿಯ ನಟ ಉಮೇಶ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Spread the loveಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರು ಮನೆಯ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ