ಆನೇಕಲ್, ಸೆಪ್ಟೆಂಬರ್ 26: ಅಂದು ನೀನೇ ನನ್ನ ಚಿನ್ನ, ಮುದ್ದು ಎಂದಿದ್ದ ಗಂಡ ಮಂಜ (husband) ಇದೀಗ ಉಲ್ಟಾ ಹೊಡೆದಿದ್ದಾನೆ. ನಿನ್ನ ಕತೆ ಮುಗಿಸುತ್ತೇನೆ ಅಂತ ಸಂತು ಮನೆಗೆ ಎಂಟ್ರಿ ಕೊಟ್ಟಿದ್ದ ಮಂಜ, ಪತ್ನಿ ಲೀಲಾ ಮತ್ತು ಆಕೆಯ ಪ್ರಿಯಕರ ಸಂತು ಕಣ್ಣಿಗೆ ಕಾರದ ಪುಡಿ ಹಾಕಿ ಡೆಡ್ಲಿ ಅಟ್ಯಾಕ್ (Deadly Attack) ಮಾಡಿದ್ದಾನೆ. ಮಂಜನಿಂದ ಹಲ್ಲೆಗೊಳಾದ ಸಂತುಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆ ಸೇರಿದ್ದಾರೆ. ಅತ್ತ ಲೀಲಾ ಜಸ್ಟ್ ಮಿಸ್ ಆಗಿದ್ದಾರೆ.
ಸಂತು-ಲೀಲಾ ಮೇಲೆ ಡವ್ ಮಂಜ ಡೆಡ್ಲಿ ಅಟ್ಯಾಕ್
ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಪುರದ ನಿವಾಸಿ ಗಂಡ ಮಂಜುನಾಥ್ ಮತ್ತು ಇಬ್ಬರು ಮಕ್ಕಳನ್ನ ಬಿಟ್ಟು ಲವರ್ ಸಂತು ಜೊತೆ ಹೋಗಿದ್ದ ಲೀಲಾ ಪ್ರಕರಣ ಬಾರಿ ಸದ್ದು ಮಾಡಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನೀನೇ ನನ್ನ ಚಿನ್ನ, ಮುದ್ದು ಬಂದುಬಿಡು ಅಂತ ಕಣ್ಣೀರಿಟ್ಟು ಮಂಜು ಗೋಳಾಡಿದ್ದರು. ಇದನ್ನ ನೋಡಿದ ಜನರು ಕೂಡ ಲೀಲಾ ಮಂಜುಗೆ ಈ ರೀತಿ ಮೋಸ ಮಾಡಬಾರದಿತ್ತು ಅಂತ ಮಾತನಾಡಿಕೊಂಡಿದ್ದರು.ಆದರೆ ಇದೀಗ ಮಂಜನಾ ಇನ್ನೊಂದು ಮುಖ ಅನಾವರಣವಾಗಿದೆ. ಕಳೆದ ರಾತ್ರಿ 8.15 ಸುಮಾರಿಗೆ ಕಂಠ ಪೂರ್ತಿ ಕುಡಿದು ಕಾರದ ಪುಡಿ, ಬಿಯರ್ ಬಾಟಲ್ ನೊಂದಿಗೆ ಸಂತು ಮನೆಯ ಕಡೆ ಕಾರಿನಲ್ಲಿ ಹೊರಟಿದ್ದ. ರಸ್ತೆಯಲ್ಲಿ ಮಂಜ ಹೋಗುತ್ತಿರುವುದನ್ನು ನೋಡಿದ ಸಂತು ಸೇಹಿತ ಫೋನ್ ಮಾಡಿ ವಿಷಯ ತಿಳಿಸಿದ್ದ. ಕೂಡಲೇ ಲೀಲಾಳಿಗೆ ಫೋನ್ ಮಾಡಿದ ಸಂತು ಬಾಗಿಲು ತೆಗೆಯದಂತೆ ಹೇಳಿದ್ದ.