Breaking News

ನಮ್ಮ ಕ್ಲಿನಿಕ್​ನಲ್ಲಿ ಇಲಿ, ಹೆಗ್ಗಣಗಳಿಗೂ ಸಿಗುತ್ತೆ ಔಷಧ! ಅರ್ದ ಮೂಟೆ ಐವಿ ಫ್ಲೂಯಿಡ್ ಖಾಲಿ ಮಾಡಿದ ಹೆಗ್ಗಣಗಳು

Spread the love

ಬೆಂಗಳೂರು, ಸೆಪ್ಟೆಂಬರ್ 26: ಬೆಂಗಳೂರಿನಲ್ಲಿ (Bengaluru) ನಮ್ಮ ಕ್ಲಿನಿಕ್​ಗಳಲ್ಲಿ (Namma Clinic) ಸಮಸ್ಯೆಗಳ ಆಗರವೇ ಇದೆ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದಂತೆಈ ವೇಳೆ ಹಲವು ಕಡೆಗಳಲ್ಲಿ ನಮ್ಮ ಕ್ಲಿನಿಕ್​​ಗಳಲ್ಲಿ ಔಷಧಗಳ ಕೊರತೆ, ಸಿಬ್ಬಂದಿಗೆ ವೇತನ ಪಾವತಿ ಆಗದೇ ಇರುವುದು ಸೇರಿ ನಾನಾ ಸಮಸ್ಯೆಗಳು ಗಮನಕ್ಕೆ ಬಂದಿವೆ. ಮತ್ತಿಕೆರೆ ನಮ್ಮ ಕ್ಲಿನಿಕ್​ನಲ್ಲಿ ಇಲಿ ಹಾಗೂ ಹೆಗ್ಗಣಗಳ ಹಾವಳಿ ಕಂಡು ಬಂದಿದ್ದು ಅವ್ಯವಸ್ಥೆಗಳ ಆಗಾರವಾಗಿತ್ತು. ಅರ್ಧ ಮೂಟೆಯಷ್ಟು ಐವಿ ಫ್ಲೂಯಿಡ್, ಆರ್​​​​ಎಲ್​​ಗಳನ್ನು ಇಲಿಗಳು ಹಾಳು ಮಾಡಿರುವುದು ಕಂಡುಬಂದಿದೆ.

ಗಾಂಧಿನಗರ ಕ್ಷೇತ್ರದ ಓಕಳಿಪುರಂನಲ್ಲಿ ಎರಡು ದಿನಗಳ ಹಿಂದಷ್ಟೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಮ್ಮ ಕ್ಲಿನಿಕ್​ಗೆ ಚಾಲನೆ ನೀಡಿದ್ದರು. ಅದಾದ ಎರಡು ದಿನಗಳ ಬಳಿಕ ಕ್ಲಿನಿಕ್ ಹೋಗಿ ಪರಿಶೀಲಿಸಿದಾಗ, ಸಮಯಕ್ಕೆ ಸರಿಯಾಗಿ ವೈದ್ಯರೇ ಬರದಿರುವುದು ಗೊತ್ತಾಗಿದೆ. ಕ್ಲಿನಿಕ್ 9 ಗಂಟೆಗೆ ಆರಂಭವಾದರೂ 9:30 ರವರೆಗೆ ವೈದ್ಯರು ಹಾಗೂ ಸಿಬ್ಬಂದಿಯೇ ಬಂದಿಲ್ಲ. ರೋಗಿಗಳು ಕ್ಲಿನಿಕ್​​ಗೆ ಬಂದು ಕಾಯುತ್ತಿದ್ದರೂ ವೈದ್ಯರೇ ಕಂಡು ಬರಲಿಲ್ಲ. ವೈದ್ಯರು, ಸ್ಟಾಫ್ ನರ್ಸ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ಇಲ್ಲ ಎನ್ನುವುದು ಒಂದೆಡೆಯಾದರೆ, ಔಷಧ ಕೂಡ ಅಷ್ಟಕಷ್ಟೇ ಲಭ್ಯ ಇರುವುದು ಕಂಡುಬಂತು.

ಮಲ್ಲೇಶ್ವರಂನಲ್ಲಿರುವ ಗಾಯತ್ರಿನಗರದ ನಮ್ಮ ಕ್ಲಿನಿಕ್ ರಿಯಾಲಿಟಿ ಚೆಕ್ ವೇಳೆ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್​​ಗಳೇ ಇರಲಿಲ್ಲ. ಶೇ 40 ರಷ್ಟು ಔಷಧ ಕೊರತೆಯೂ ಕಂಡುಬಂತು.

ಜೆಪಿ ಪಾರ್ಕ್ 35 ರ ನಮ್ಮ ಕ್ಲಿನಿಕ್​​ನಲ್ಲಿ ಔಷಧಿಗಳೇ ಇರಲಿಲ್ಲ. ಶೇ 40 ರಷ್ಟು ಔಷಧಗಳ ಕೊರತೆ ಇರುವುದನ್ನು ವೈದ್ಯರೇ ಒಪ್ಪಿಕೊಂಡಿದ್ದು, ಮಲೇರಿಯಾ , ಡೆಂಘಿ ಜ್ವರದ ಟೆಸ್ಟ್ ಕಿಟ್ ಇಲ್ಲ. ಬಿಪಿ, ಶುಗರ್​​ಗೆ ಬೇಕಾದ ಔಷಧ ಇಲ್ಲ. ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲು ಸಮಸ್ಯೆಯಾಗುತ್ತಿದೆ ಎಂದು ವೈದ್ಯರೇ ಸಮಸ್ಯೆಗಳ ಬಗ್ಗೆ ಅಲವತ್ತುಕೊಂಡಿದ್ದಾರೆ.

ಲ್ಯಾಬ್ ಟೆಕ್ನೀಷಿಯನ್​ಗಳಿಗೆ ಪಾವತಿಯಾಗ್ತಿಲ್ಲ ವೇತನ!

ನಮ್ಮ ಕ್ಲಿನಿಕ್​ಗಳ ಲ್ಯಾಬ್ ಟೆಕ್ನೀಷಿಯನ್​ಗಳಿಗೆ ಕಳೆದ ಮೂರು ತಿಂಗಳಿನಿಂದ ವೇತನವಾಗಿಲ್ಲ. ಕೆಲವೆಡೆ ಲ್ಯಾಬ್ ಟೆಕ್ನೀಷಿಯನ್​ ಎಂದು ನೇಮಕ ಮಾಡಿ ಲೋವರ್ ಡಿವಿಷನ್ ಕ್ಲರ್ಕ್ ಕೆಲಸ ಮಾಡಿಸುತ್ತಿರುವುದೂ ತಿಳಿದುಬಂದಿದೆ. ನೇಮಕವಾದ ಹುದ್ದೆಯ ಕೆಲಸವೂ ಇಲ್ಲ, ವೇತನವೂ ಕಡಿಮೆ, ಅದೂ ಸಮಯಕ್ಕೆ ಸರಿಯಾಗಿ ಪಾವತಿಯಾಗುತ್ತಿಲ್ಲ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಹಿರಿಯ ನಟ ಉಮೇಶ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Spread the loveಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರು ಮನೆಯ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ