ಬೆಳಗಾವಿಯಲ್ಲಿ ಪೋಷಣ್ ಅಭಿಯಾನ…ಮಹಿಳೆಯರ ಏಳ್ಗೆಯೇ ನಮ್ಮ ಧ್ಯೇಯ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿಯಲ್ಲಿ ಪೋಷಣ್ ಅಭಿಯಾನ…ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ
ಈ ಇಲಾಖೆಯ ಜವಾಬ್ದಾರಿ ತಮಗೆ ದೊರೆತಿರುವುದು ತಮ್ಮ ಸೌಭಾಗ್ಯ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ
ಇಡೀ ರಾಜ್ಯದಲ್ಲಿ 1 ತಿಂಗಳು ಗರ್ಭಿಣಿಯರಿಗೆ ಎಲ್ಲ ಗ್ರಾ ಪಂ ಮಟ್ಟದಲ್ಲಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ರಾಜ್ಯದ ಮಹಿಳೆಯರ ಏಳ್ಗೆಗಾಗಿ ಈ ಇಲಾಖೆಯ ಜವಾಬ್ದಾರಿ ತಮಗೆ ದೊರೆತಿರುವುದು ತಮ್ಮ ಸೌಭಾಗ್ಯವೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿಯ ಗಾಂಧಿ ಭವನದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ
2025 ಮತ್ತು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವಿಕಲಚೇತನ ಫಲಾನುಭವಿಗಳಿಗೆ ಸಾಧನ – ಸಲಕರಣೆಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಈ ವೇಳೆ ಉಪಸ್ಥಿತ ಗಣ್ಯರಿಂದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಡೀ ರಾಜ್ಯದಲ್ಲಿ 1 ತಿಂಗಳು ಗರ್ಭಿಣಿಯರಿಗೆ ಗ್ರಾ ಪಂ ಮಟ್ಟದಲ್ಲಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗರ್ಭೀಣಿಯರಿಗೆ ಒಳ್ಳೆಯ ಆರೋಗ್ಯಯುತ ಮಗು ಹುಟ್ಟಲಿ ಎಂದು ಹಾರೈಸಿದರು. ಈ ಇಲಾಖೆಯ ಜವಾಬ್ದಾರಿಯನ್ನು ತೆಗೆದುಕೊಂಡ ಬಳಿಕ ಹಲವಾರು ಸವಾಲುಗಳು ಎದುರಾಗಿದ್ದು, ಅವುಗಳನ್ನು ಬಗೆಹರಿಸಿ ಒಳ್ಳೆಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಇಲಾಖೆಯಲ್ಲಿ ಸೇವೆ ಸಲ್ಲಿಸುವ ವಿಧವೆಯರ ಏಳ್ಗೆಗೆ ಇಲಾಖೆಯೂ ಶ್ರಮಿಸಿದೆ. ಈ ಇಲಾಖೆಯ ಜವಾಬ್ದಾರಿ ತಮಗೆ ದೊರೆತಿರುವುದು ತಮ್ಮ ಸೌಭಾಗ್ಯ ಎಂದರು.
ಈ ಸಂದರ್ಭದಲ್ಲಿ ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ, ಪ್ರೋಬೆಷನರಿ ಐಎಎಸ್ ಅಧಿಕಾರಿ ಅಭಿನವ್ ಜೈನ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ಧರು.