ಬೆಳಗಾವಿಯ ರಾಜಾ…ಚವ್ಹಾಟಗಲ್ಲಿಯ ಗಣೇಶನ ದರ್ಶನ ಪಡೆದ ಹೆಸ್ಕಾಂ ಅಧಿಕಾರಿಗಳು
ಬೆಳಗಾವಿಯ ರಾಜಾ…ಚವ್ಹಾಟಗಲ್ಲಿಯ ಗಣೇಶದರ್ಶನ ಪಡೆದ ಹೆಸ್ಕಾಂ ಅಧಿಕಾರಿಗಳುಗಣೇಶೋತ್ಸವ ಯಶಸ್ವಿಗೆ ಸಹಕಾರಮಂಡಳಿದ ವತಿಯಿಂದ ಅಧಿಕಾರಿಗಳ ಸನ್ಮಾನ
ಹೆಸ್ಕಾಂ ಅಧಿಕಾರಿಗಳು ಇಂದು ಬೆಳಗಾವಿಯ ರಾಜಾ ಚವ್ಹಾಟ ಗಲ್ಲಿಯ ಶ್ರೀ ಗಣೇಶನ ದರ್ಶನ ಪಡೆದುಕೊಂಡರು.
ಬೆಳಗಾವಿಯ ರಾಜಾ ಚವ್ಹಾಟಗಲ್ಲಿ ಗಣಪತಿಯ ದರ್ಶನವನ್ನು ಇಂದು ಹೆಸ್ಕಾಂ ಎಇಇ ಅಶ್ವೀನ್ ಶಿಂಧೆ,
ಮನೋಹರ್ ಸುತಾರ್ ಮತ್ತು ಭಜಂತ್ರಿ ಅವರು ಭೇಟಿ ನೀಡಿ ಗಣೇಶನ ಆರತಿಯಲ್ಲಿ ಭಾಗಿಯಾದರು.
ಈ ವೇಳೆ ಮಾತನಾಡಿದ ಅಧಿಕಾರಿಗಳು ಹೆಸ್ಕಾಂನಿಂದ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಬಗೆಹರಿಸಿ, ನಿರ್ವಿಘ್ನವಾಗಿ ವಿಘ್ನೇಶ್ವರನ ಉತ್ಸವವನ್ನು ಪೂರ್ಣಗೊಳಿಸಲು ಸಹಕರಿಸಲಾಗಿದೆ ಎಂದರು.
ಚವ್ಹಾಟ ಗಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳದ ವತಿಯಿಂದ ಹೆಸ್ಕಾಂ ಅಧಿಕಾರಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಂಡಳದ ಕಾರ್ಯಕರ್ತರು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.