Breaking News

ರಾಜ್ಯಾದ್ಯಂತ ಇಂದಿನಿಂದ ಮಳೆ ಅಬ್ಬರ

Spread the love

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಮಳೆ ಅಬ್ಬರ ಕಡಿಮೆಯಾದರೂ, ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್​ 11 ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ಆಗಲಿರುವ ಜಿಲ್ಲೆಗಳು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಮಳೆ: ಆಗುಂಬೆ, ಉಪ್ಪಿನಂಗಡಿ, ಸುಳ್ಯ, ಕಮ್ಮರಡಿ, ಗೋಪಾಲನಗರ, ಭಾಗಮಂಡಲ, ಪುತ್ತೂರು, ಮಂಗಳೂರು, ಗೇರುಸೊಪ್ಪ, ಉಡುಪಿ, ಟಿಜಿ ಹಳ್ಳಿ, ಶೃಂಗೇರಿ, ಸಿದ್ದಾಪುರ, ಮಾಣಿ, ಮಾಗಡಿ, ಕುಣಿಗಲ್, ಕಳಸ, ಧರ್ಮಸ್ಥಳ, ಕ್ಯಾಸಲ್​ರಾಕ್, ಬೆಂಗಳೂರು ನಗರ, ಬೆಳ್ತಂಗಡಿ, ತ್ಯಾಗರ್ತಿ, ಸೋಮವಾರಪೇಟೆ, ಪೊನ್ನಂಪೇಟೆ, ನಾಪೋಕ್ಲು, ಮೂಡುಬಿದಿರೆ, ಕುಮಟಾ, ಕೊಟ್ಟಿಗೆಹಾರ, ಕೊಪ್ಪ, ಕಾರ್ಕಳ, ಜಯಪುರ, ಗೋಕರ್ಣ, ವಿಜಯಪುರ, ಮುಲ್ಕಿ, ಕಾರವಾರ, ಕದ್ರಾ, ಕೋಣನೂರು, ಹೊನ್ನಾವರ, ಹಳಿಯಾಳ, ಇಂಡಿ, ಅರಕಲಗೂಡು, ಚಿಕ್ಕಬಳ್ಳಾಪುರ ಹಾಗೂ ಬಾಳೆಹೊನ್ನೂರಿನಲ್ಲಿ ಗುರುವಾರ ಮಳೆಯಾಗಿದೆ.

ರಾಜಧಾನಿಯ ವಾತಾವರಣ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ. ನಗರದಲ್ಲಿ 27.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್​​ ಕನಿಷ್ಠ ಉಷ್ಣಾಂಶ, ಹೆಚ್​​ಎಎಲ್​​​ನಲ್ಲಿ 27.0 ಡಿಗ್ರಿ ಸೆಲ್ಸಿಯಸ್​​ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 27.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ ದಾಖಲಾಗಿದೆ.


Spread the love

About Laxminews 24x7

Check Also

40 ವರ್ಷದಲ್ಲಿ 4ನೇ ಬಾರಿ ಭರ್ತಿಯ ಹಂತಕ್ಕೆ ತಲುಪಿದ ಸೂಪಾ ಜಲಾಶಯ!

Spread the loveಕಾರವಾರ: ರಾಜ್ಯದ ಎರಡನೇ ಅತಿ ದೊಡ್ಡ ಜಲಾಶಯವಾಗಿರುವ ಜೋಯಿಡಾ ತಾಲೂಕಿನ ಸೂಪಾ ಜಲಾಶಯ ಭರ್ತಿಯ ಹಂತಕ್ಕೆ ತಲುಪಿದೆ. 564 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ