ರಾಯಬಾಗ : ನಮ್ಮ ಮಕ್ಕಳು ಸರ್ಕಾರಿ ಶಾಲೆಗೆ ಹೋಗಿ ಚನ್ನಾಗಿ ಓದಲಿ ಎಂಬುದು ತಂದೆ ತಾಯಿ ಕನಸು ಆಗಿರುತ್ತೆ.. ಆದರೆ ರಾಯಬಾಗ ತಾಲೂಕಿನ ಹಾರೂಗೇರಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಎರಡು ಜನ ಶಾಲಾ ಮಕ್ಕಳನ್ನು ಸತತವಾಗಿ ಎರಡು ಗಂಟೆಗಳ ಕಾಲ ಗುಂಡಿ ಆಗಿಯುವ ಕೆಲಸ ಮಾಡಿಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ…
ಸತತವಾಗಿ ಎರಡು ಗಂಟೆಗಳ ಕಾಲ ಶಾಲಾ ಮಕ್ಕಳ ಕೈಯಲ್ಲಿ ಆಯುಧಗಳನ್ನು ಕೊಟ್ಟು ಕಾರ್ಮಿಕರಂತೆ ಗುಂಡಿ ಆಗಿಯುವ ಕೆಲಸ ಮಾಡಿಸಿಕೊಂಡಿದ್ದಾರೆ ಮುಖ್ಯ ಶಿಕ್ಷಕಿ ಶಿ ಬಿ ಮುಂಡರಗಿ
ಈ ಹಿಂದೆ ಚಿಕ್ಕೋಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಶಾಲಾ ಮಕ್ಕಳನ್ನು ಮರದ ಮೇಲೆ ಏರಿಸಿ ಮರದ ಟೊಂಗೆಗಳನ್ನು ಕಡಿಯುವ ಕೆಲಸವನ್ನು ಮಾಡಿಸಿದ್ರು.. ಏನಾಗುತ್ತಿದೆ ಶಿಕ್ಷಕರು ಯಾಕೆ ಶಾಲಾ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ ಇದಕ್ಕೆ ಸಚಿವರು ಹಲವಾರು ಆದೇಶಗಳನ್ನು ಕೊಟ್ಟರು ಕೂಡಾ ಕ್ಯಾರೇ ಎನ್ನುತ್ತಿಲ್ಲ ಶಿಕ್ಷಕರು
ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಚಿಕ್ಕೋಡಿ ಡಿಡಿಪಿಐ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಕೂಡ ಇನ್ನು.. ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತೆ . ಬೇಕಾಬಿಟ್ಟಿಯಾಗಿ ಶಾಲಾ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ ಕಾರ್ಮಿಕರಂತೆ ಎರಡು ಗಂಟೆ ಕಾಲ ಆಯುಧಗಳನ್ನು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಶಿಕ್ಷಕರು
ರಾಯಬಾಗ ತಾಲೂಕಿನ ಹಾರೋಗೇರಿಯ ಮುಖ್ಯ ಶಿಕ್ಷಕಿ ಶಿ ಬಿ ಮುಂಡರಗಿ… ಅಧಿಕಾರಿಗಳೇ ಯಾವಾಗ ಇವರ ಮೇಲೆ ಕ್ರಮ ಆಗುತ್ತೆ ಕಾರ್ಮಿಕರಂತೆ ಕೆಲಸ ಮಾಡಿಸಿಕೊಳ್ಳಲು ಯಾವ ನೈತಿಕತೆ ಇದೆ…ಕಾರ್ಮಿಕ ಇಲಾಖೆಯಲ್ಲಿ ಆಯುಧಗಳನ್ನು ಕೊಟ್ಟು ಚಿಕ್ಕ ಮಕ್ಕಳ ಕೈಯಿಂದ ಕೆಲಸ ಮಾಡಿಸಿಕೊಳ್ಳಬಾರದು ಎಂದು ಕಾನೂನು ಇದೆ
ಎಲ್ಲಿಗೆ ಹೋಗುತ್ತಿದೆ ಶಿಕ್ಷಣ ಇಲಾಖೆ ನಿಯಮಗಳು… ಏನು ಕ್ರಮ ತೆಗೆದುಕೊಳ್ಳುತ್ತೀರಾ