ಶ್ರೀ ಹನುಮಾನ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭ ; ಎಪಿಎಂಸಿ ಸದಸ್ಯ ಬಸವರಾಜ ಸಾಯನ್ನವರ ಅವರಿಂದ ಭೂಮಿ ಪೂಜೆ.
ಗೋಕಾಕ : ಮಾರ್ಕಂಡೇಯ ನಗರದ ಶ್ರೀ ಹನುಮಾನ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಸಭಾ ಭವನ ಕಟ್ಟಡದ ಭೂಮಿ ಪೂಜೆಯನ್ನು ಎಪಿಎಂಸಿ ಸದಸ್ಯ ಬಸವರಾಜ ಸಾಯನ್ನವರ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಶ್ರೀಮತಿ ವನಶ್ರೀ ಸಾಯನ್ನವರ, ಮಾಜಿ ನಗರ ಸಭೆ ಸದಸ್ಯರಾದ ಲಕ್ಷ್ಮಣ ಖಡಕಭಾಂವಿ, ನಗರದ ಪ್ರಮುಖರಾದ ರಾಯಪ್ಪ ಗುದಗನ್ನವರ , ಬಸವರಾಜ ಪೋಟಿ, ರಿಯಾಜ್ ಮುಲ್ಲಾ, ಲಕ್ಷ್ಮಣ
ಕಿಲಾರಿ, ಬನ್ನಿಶೇಟ್ಟಿ ಅಜ್ಜಾ, ಶಂಕರ ಜಾದವ್, ಜಗದೀಶ್ ಪಾಟೀಲ್,ರಾಮಸಿದ್ದ ಹೊರಟ್ಟಿ, ಸಚಿನ್ ಮಾನೆ, ಮಾನಿಂಗ ಬಿಳಗಿ,ಬಸವರಾಜ ಹಂಜಿ, ಲಕ್ಷ್ಮಣ ಚಿಕ್ಕೋಪ, ಹಾಗೂ ನಗರದ ಯುವಕರು, ಹಿರಿಯರು ಉಪಸ್ಥಿತರಿದ್ದರು..