ಬೆಂಗಳೂರು, ಸೆಪ್ಟೆಂಬರ್ 03: ಶಾರ್ಟ್ಸರ್ಕ್ಯೂಟ್ನಿಂದ ಮನೆಗೆ ಬೆಂಕಿ (fire) ಹೊತ್ತಿಕೊಂಡು ಮಗು ಸಾವನ್ನಪ್ಪಿರುವಂತಹ (death) ಘಟನೆ ನಗರದ ಸ್ಯಾಂಕಿ ರಸ್ತೆಯ ಸಮ್ಮಿಟ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ನೇಪಾಳ ಮೂಲದ ಪುಷ್ಕರ್ ಕುಮಾರ್, ಜ್ಯೋತಿಕುಮಾರಿ ದಂಪತಿಯ 18 ತಿಂಗಳ ಪುತ್ರಿ ಅನು ಮೃತ ಮಗು. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪುತ್ರಿ ಅನು ಸೇರಿದಂತೆ ಪುಷ್ಕರ್ ಕುಮಾರ್, ಜ್ಯೋತಿಕುಮಾರಿ ದಂಪತಿ ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಅಪಾರ್ಟ್ಮೆಂಟ್ನ 10X10 ಅಳತೆ ರೂಮ್ನಲ್ಲಿ ವಾಸವಿದ್ದರು. ಮಗುವನ್ನು ಮನೆಯಲ್ಲೇ ಬಿಟ್ಟು ಪೋಷಕರು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಶಾರ್ಟ್ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ.
ಹೈಡ್ರಾಲಿಕ್ ಎಲಿವೇಟರ್ಗೆ ಸಿಲುಕಿ ಯುವಕ ಸಾವು
ಹೈಡ್ರಾಲಿಕ್ ಎಲಿವೇಟರ್ಗೆ ಸಿಲುಕಿ ಯುವಕ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಜಾಲ ಎಂವಿಐಟಿ ಕಾಲೇಜು ರಸ್ತೆಯಲ್ಲಿರುವ ಜಸ್ಟ್ ಬೇಕ್ನಲ್ಲಿ ನಡೆದಿದೆ. ಬಿಹಾರ ಮೂಲದ 20 ವರ್ಷದ ಭೂಪೇಂದ್ರ ಚೌಧರಿ ಮೃತ ಯುವಕ.