Breaking News

ಮಹಾ ಪುರುಷರ ತತ್ವ ಆದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು; ಪಿ.ಐ ಮುಲ್ಲಾ

Spread the love

ಘಟಪ್ರಭಾ: ಮಹಾ ಪುರುಷರ ತತ್ವ ಆದರ್ಶಗಳನ್ನು ಯುವಕರು ತಮ್ಮ ಜೀವದಲ್ಲಿ ಅಳವಡಿಕೊಂಡರೆ ಮಾತ್ರ ಜೀವದಲ್ಲಿ ಯಶಸ್ಸು ಕಾಣಲು ಸಾಧ್ಯವೆಂದು ಘಟಪ್ರಭಾ ಪೊಲೀಸ ಠಾಣೆ ಪಿ.ಐ ಎಚ್.ಡಿ.ಮುಲ್ಲಾ ಹೇಳಿದರು.May be an image of 9 people
ಅವರು ಬುಧವಾರದಂದು ಈದೇ ಮೀಲಾದುನ್ನಬಿ (ಮಹ್ಮದ ಪೈಗಂಬರ ಜಯಂತಿ) ಅಂಗವಾಗಿ 1500 ವರ್ಷದ ಜಯಂತಿ ನಿಮಿತ್ತ ಸ್ಥಳೀಯ ಅಹಲೇ ಸುನ್ನತ್-ವಲ್-ಜಮಾತದ ಯುಂಗ ಕಮೀಟಿ ಸದಸ್ಯರಿಂದ ಇಲ್ಲಿಯ ಜೆ.ಜಿ ಸಹಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾದ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ, ಪೈಗಂಬರ ಜಯಂತಿ ಅಂಗವಾಗಿ ರೋಗಗಳಿಗೆ ಹಣ್ಣು ಹಂಫಲ ವಿತರಿಸುವ ಕಾರ್ಯ ಶ್ಲಾಘಣೀಯವಾಗಿದೆ. ಘಟಪ್ರಭಾದ ಜನರು ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಮಾರ್ಗದರ್ಶಣದಲ್ಲಿ ಸೌಹಾರ್ದ ದಿಂದ ಜೀವನ ನಡೆಸುತ್ತಿರುವುದನ್ನು ಕಂಡು ತುಂಬ ಖುಷಿಯಾಗಿದೆ ಎಂದು ಹೇಳಿದರು.May be an image of 11 people, wedding and temple
ಸಾನಿಧ್ಯ ವಹಿಸಿದ ಘಟಪ್ರಭಾ ಗುಬ್ಬಲಗುಡ್ಡ ಮಠದ ಪೀಠಾದೀಶರಾದ ಡಾ|| ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ನಮ್ಮ ದೇಶದಲ್ಲಿ ಎಲ್ಲ ಜಾತಿಯ ಜನರು ಇದ್ದರು ಸಹ ಎಲ್ಲರು ಸೌಹಾರ್ದತೆಯಿಂದ ಬಾಳುವೆ ಮಾಡುತ್ತಿದ್ದಾರೆ. ವಾಸಿಸುವ ಭೂಮಿ, ಕುಡಿಯುವದೊಂದೆ ನೀರು, ಸೇವಿಸುವದೊಂದೆ ಗಾಳಿ ಇರುವಾಗ ಜಾತಿ ಬೇದ ನಮಗೇಕೆ ಎಂದು ಹೇಳುತ್ತ ಘಟಪ್ರಭಾದಲ್ಲಿ ಕಳೆದ 20ವರ್ಷಗಳಿಂದ ಮುಸ್ಲಿಂ ಸಮಾಜದವರು ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲ ಹಂಚುತ್ತ ಬಂದಿದ್ದಾರೆ.May be an image of 14 people and dais
ರೋಗಿಗಳಿಗೆ ಆರೈಕೆ ಮಾಡುವ ಮೂಲಕ ಮಹ್ಮದ ಪೈಗಂಬರ ಜಯಂತಿ ಆಚರಿಸುತ್ತಿರುವ ಯುವಕರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.May be an image of 11 people and dais
ಪಟ್ಟಣ ಹಿರಿಯರಾದ ರಾಮಣ್ಣ ಹುಕ್ಕೇರಿ ಮಾತನಾಡಿ ಹಿಂದೆ ಇದ್ದ ಮುಸ್ಲಿಂ ಹಿರಿಯರು ಹಾಕಿಕೋಟ್ಟ ಸೌಹಾರ್ದತೆಯ ದಾರಿಯಲ್ಲಿ ನೀವೆಲ್ಲ ಸಾಗುತ್ತಿದ್ದಿರಿ. ಪರಸ್ಪರ ಹಬ್ಬಗಳಿಗೆ ಅಹ್ವಾನಿಸುವುದರ ಮೂಲಕ ಹಬ್ಬಗಳು ಆಚರಿಸುತ್ತ ಬಂದಿದ್ದೇವೆ ಎಂದರು.May be an image of 9 people and dais
ಸ್ಥಳೀಯ ಅಹಲೇ ಸುನ್ನತ್-ವಲ್-ಜಮಾತದ ಯಂಗ್ ಕಮೀಟಿ ಸದಸ್ಯರಿಂದ ಡಾ|| ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಘಟಪ್ರಭಾ ಪೊಲೀಸ ಠಾಣೆಯ ಪಿ.ಐ. ಎಚ್.ಡಿ. ಮುಲ್ಲಾ, ಘಟಪ್ರಭಾ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಎಮ್.ಎಸ್.ಪಾಟೀಲ, ಜೆಜಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಕೆ.ಎಚ್.ಪಾಟೀಲ ಅವರಿಗೆ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡರಾದ ಶೌಕತ ಕಬ್ಬೂರ, ಕುತಬುದ್ದಿನ ಕಡಲಗಿ, ಹುಸೇನ ಮುಲ್ಲಾಳ, ಹಜರತ ಕಬ್ಬೂರ, ಮೋದಿನಸಾಬ ಕಬ್ಬೂರ, ಸುರೇಶ ಪಾಟೀಲ, ಸುಲೇಮಾನ ಅವರಳ್ಳಿ, ಜಿ.ಎಸ್.ರಜಪೂತ, ಗಣೇಶ ಗಾಣೀಗ, ಶ್ರೀಕಾಂತ ಮಾಹಜನ, ಪ.ಪಂ ಮಾಜಿ ಸದಸ್ಯರಾದ ಪ್ರವೀಣ ಮಟಗಾರ, ಈರಣ್ಣಾ ಕಲಕುಟಗಿ, ಮಾರುತಿ ಹುಕ್ಕೇರಿ, ಮಲ್ಲು ಕೋಳಿ, ಸುರೇಶ ಪೂಜೇರಿ, ಕೆಂಪಣ್ಣ ಚೌಕಶಿ, ಲಕ್ಷ್ಮಣ ಮೇತ್ರಿ, ದಾದಾಫೀರ ಶಾಬಾಜಖಾನ, ದಿಲಾವರ ನದಾಫ, ಯಂಗ್ ಕಮೀಟಿ ಸದಸ್ಯರಾದ ಸಲೀಮ ಕಬ್ಬೂರ, ಮೆಹಬೂಬ ಸಯ್ಯದ, ಜಹಾಂಗೀರ ಬಾಗವಾನ, ಅಲ್ತಾಪ ಉಸ್ತಾದ, ಇಮ್ರಾನ ಬಟಕುರ್ಕಿ, ಪೈಜಲ್ ಬಾಗವಾನ, ದಿಲಾವರ ಬಾಳೇಕುಂದ್ರಿ, ಗಜಬಾರ ಬೋರಗಾಂವಿ, ಹಸನ ನಯಾಗರ, ರಿಯಾಜ ಬಾಡಕರ, ಅಪ್ಪಾಸಾಬ ಮುಲ್ಲಾ, ಬುಡನಸಾಬ ಬಾಗವಾಲೆ, ಅಕೀಲ ಕಬ್ಬೂರ, ನವೀನ ಉಪ್ಪಾರ ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮವನ್ನು ಜೆ.ಜಿ. ಆಸ್ಪತ್ರೆಯ ಮ್ಯಾನೇಜರ ವಿಠ್ಠಲ ಕೌಜಲಗಿ ನಿರೂಪಿಸಿ, ವಂದಿಸಿದರು.
ಘಟಪ್ರಭಾ; ಈದೇ ಮೀಲಾದುನ್ನಬಿ ಅಂಗವಾಗಿ ಸ್ಥಳೀಯ ಅಹಲೇ ಸುನ್ನತ್-ವಲ್-ಜಮಾತದ ಯುಂಗ ಕಮೀಟಿ ಸದಸ್ಯರು ಜೆ.ಜಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಫಲ ವಿತರಿಸಿದರು.
ಘಟಪ್ರಭಾ; ಈದೇ ಮೀಲಾದುನ್ನಬಿ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಫಲ ವಿತರಿಸುವ ಕಾರ್ಯಕ್ರಮದಲ್ಲಿ ಡಾ|| ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಪಿ.ಐ.ಎಚ್.ಡಿ.ಮುಲ್ಲಾ, ಮುಖ್ಯಾಧಿಕಾರಿ ಎಂ.ಎಸ್.ಪಾಟೀಲ, ಡಾ.ಬಿ.ಕೆ.ಎಚ್.ಪಾಟೀಲ ಭಾಗವಹಿಸಿ ಮಾತನಾಡಿದರು.

Spread the love

About Laxminews 24x7

Check Also

ಹೈಡ್ರಾಲಿಕ್ ಎಲಿವೇಟರ್​ಗೆ ಸಿಲುಕಿ ಯುವಕ ಸಾವು

Spread the loveಬೆಂಗಳೂರು, ಸೆಪ್ಟೆಂಬರ್​ 03: ಶಾರ್ಟ್​ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ (fire) ಹೊತ್ತಿಕೊಂಡು ಮಗು ಸಾವನ್ನಪ್ಪಿರುವಂತಹ (death) ಘಟನೆ ನಗರದ ಸ್ಯಾಂಕಿ ರಸ್ತೆಯ ಸಮ್ಮಿಟ್ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ.  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ