ಶೇಡಬಾಳದಲ್ಲಿ ೫೦೦ ವರ್ಷದ ಪುರಾತನ ವಿಠ್ಠಲ–ರುಕ್ಮೀಣಿ ಮಂದಿರ ಜಿರ್ಣೋದ್ಧಾರ ಹಾಗೂ ಜಾಮಿಯಾ ಮಸೀದಿ ಮುಂಭಾಗದಲ್ಲಿ ಸಮುದಾಯ ಭವನ ನಿರ್ಮಿಸುವ ಕಾಮಗಾರಿಗೆ ಶಾಸಕ ರಾಜು ಕಾಗೆ ಚಾಲನೆ.
ಕಾಗವಾಡ :ಕಾಗವಾಡ ತಾಲ್ಲೂಕಿನ ಶೇಡಬಾಳ ಪಟ್ಟಣದಲ್ಲಿ ಸುಮಾರು ೫೦೦ ವರ್ಷಗಳ ಹಿಂದೆಯೇ ನಿರ್ಮಿತವಾದ ಶ್ರೀ ರುಕ್ಮೀಣಿ ಪಾಂಡುರAಗ ದೇವಸ್ಥಾನವನ್ನು ಜಿರ್ಣೋದ್ಧಾರಗೊಳಿಸಲು ಹಾಗೂ ಮುಸ್ಲಿಂ ಸಮಾಜದ ಜಾಮಿಯಾ ಮಸೀದಿ ಮುಂಭಾಗದಲ್ಲಿ ಸಮುದಾಯ ಭವನ ಕಟ್ಟಿಸಲು ತಲಾ ೨೦ ಲಕ್ಷ ರೂ. ಅನುದಾನವನ್ನು ಶಾಸಕ ರಾಜು ಕಾಗೆ ಮಂಜೂರು ಮಾಡಿ ಭೂಮಿಪೂಜೆ ನೆರವೇರಿಸಿದರು.
ಶುಕ್ರವಾರ, ಧಾರ್ಮಿಕ ದತ್ತಿ ಇಲಾಖೆಯಿಂದ ದೇವಸ್ಥಾನದ ಜಿರ್ಣೋದ್ಧಾರಕ್ಕೆ ೨೦ ಲಕ್ಷ ರೂ. ಹಾಗೂ ಮುಜರಾಯಿ ಇಲಾಖೆಯಿಂದ ಭವನ ನಿರ್ಮಾಣಕ್ಕೆ ೨೦ ಲಕ್ಷ ರೂ. ಅನುದಾನ ಮಂಜೂರುಗೊಳ್ಳಲಿದ್ದು, ಈ ಎರಡು ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು ಮತ್ತು ಶೀಘ್ರದಲ್ಲೇ ಕಾರ್ಯಾರಂಭಗೊಳಿಸಲು ಸಂಬAಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾಮಿಯಾ ಮಸೀದಿ ಸಮಿತಿಯ ಅಧ್ಯಕ್ಷ ನಜೀರ ಮುಲ್ಲಾ, ಉಪಾಧ್ಯಕ್ಷ ಗುಡುಲಾಲ ನದಾಫ್, ಕಾರ್ಯದರ್ಶಿ ಖಲೀಲ್ ಜಮಾದಾರ ಹಾಗೂ ಸದಸ್ಯರು ಪಾಲ್ಗೊಂಡು ಶಾಸಕರಿಗೆ ಸನ್ಮಾನ ಸಲ್ಲಿಸಿದರು.
ಶ್ರೀ ರುಕ್ಮೀಣಿ ಪಾಂಡುರAಗ ದೇವಸ್ಥಾನ ಸಮಿತಿಯ ಅಧ್ಯಕ್ಷೆ ಮಂಜುಳಾ ಮುಕುಂದ ಅವರು ಮಾತನಾಡಿ, “=೫೦೦ ವರ್ಷದ ಇತಿಹಾಸವಿರುವ ಈ ದೇವಸ್ಥಾನದಲ್ಲಿ ರುಕ್ಮೀಣಿ ಪಾಂಡುರAಗ ಹಾಗೂ ರಾಯಿ ಮಾತೆಯ ಮೂರ್ತಿಗಳು ಇದ್ದು, ಕಳೆದ ೪೫ ವರ್ಷಗಳಿಂದ ಪಾಳು ಬಿದ್ದಿದ್ದರಿಂದ ಮೂರ್ತಿಗಳು ಹಾಗೂ ರಚನೆ ಹಾಳಾಗಿತ್ತು. ಗ್ರಾಮಸ್ಥರ ಹಾಗೂ ಭಕ್ತರ ಒಲವಿನಿಂದ ಈಗ ದೇವಸ್ಥಾನ ಹೊಸ ರೂಪ ಪಡೆದುಕೊಳ್ಳುತ್ತಿದೆ. ಸಂಪೂರ್ಣ ಕಲ್ಲಿನ ಗರ್ಭಗುಡಿ, ತೀರ್ಥಮಂಟಪ ಹಾಗೂ ಮಹಾಮಂಟಪವನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. ಶಿಲ್ಪಿಗಳು ಈಗಾಗಲೇ ಕೆತ್ತನೆಯ ಕಾರ್ಯ ಆರಂಭಿಸಿದ್ದು, ಕಾರ್ತಿಕ ಮಾಸಾಂತ್ಯಕ್ಕೆ ಗರ್ಭಗುಡಿಯ ಸ್ಥಾಪನೆ ನಡೆಯಲಿದೆ. ದೇವಸ್ಥಾನದ ಮೂರ್ತಿಗಳು ಸಹ ಹೊಸ ಕಲ್ಲಿನಿಂದ ರೂಪುಗೊಳ್ಳುತ್ತಿವೆ. ಒಟ್ಟು ೧ ಕೋಟಿ ರೂ. ವೆಚ್ಚದಲ್ಲಿ ಈ ಸುಂದರ ದೇವಸ್ಥಾನ ನಿರ್ಮಾಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಜಿಲ್ಲಾ ಪಂಚಾಯಿತಿ ಅಧಿಕಾರಿ ಮಡಿವಾಳೆ, ಶೇಡಬಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ಪತ್ತಾರ, ಮರಾಠಾ ಸಮಾಜದ ಸದಸ್ಯರು ಹಾಗೂ ವಿಠ್ಠಲ-ರುಕ್ಮೀಣಿ ಭಕ್ತರು ಪಾಲ್ಗೊಂಡಿದ್ದರು.