Breaking News

ಬೀದರ್ ಜಿಲ್ಲಾದ್ಯಂತ ಭಾರಿ ಮಳೆ

Spread the love

ಬೀದರ್: ಜಿಲ್ಲಾದ್ಯಂತ ಮಳೆ ಮುಂದುವರಿದಿದೆ. ವಿವಿಧೆಡೆ ಮಳೆ ಆಗಾಗ್ಗೆ ರಭಸವಾಗಿತ್ತು ಕಳೆದ ಮೂರು ದಿನದ ಮಳೆಯಿಂದ ಗಡಿ ಜಿಲ್ಲೆ ಜನರು ತತ್ತರಿಸಿದ್ದಾರೆ. ಬೀದರ್ ನಗರ ಸೇರಿ ಬಸವಕಲ್ಯಾಣ, ಹುಮನಾಬಾದ್, ಭಾಲ್ಕಿ, ಔರಾದ್, ಕಮಲನಗರ ವಿವಿಧೆಡೆ ಮಳೆಯಾಗಿದೆ. ಔರಾದ್, ಕಮಲನಗರ ತಾಲೂಕಿನಲ್ಲಿ ಅಧಿಕ ಮಳೆಯಗಿ ಹಾನಿಯಾಗಿದೆ. ಜಿಲ್ಲೆಯಲ್ಲಿ 30 ಅಧಿಕ ಸೇತುವೆ ಮುಳಗಡೆಯಾಗಿವೆ.

ನಿರಂತರ ಮಳೆಯಿಂದ ಹಳ್ಳ – ಕೊಳ್ಳಗಳು ಭರ್ತಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಔರಾದ್ ತಾಲೂಕಿನ ಅಂಗನವಾಡಿ ಕೇಂದ್ರ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬುಧವಾರ ಬೆಳಗ್ಗೆ 8 ರಿಂದ ಗುರುವಾರ ಬೆಳಗ್ಗೆ 8 ರವರೆಗೆ 59 ಎಂಎಂ ಮಳೆಯಾಗಿದೆ. ಔರಾದ್, ಕಮಲನಗರ ತಾಲೂಕಿನಲ್ಲಿ100 ಎಂಎಂ ಮಳೆಯಾದ ವರದಿಯಾಗಿದೆ.ಜಿಲ್ಲೆಯ ಕಾರಂಜಾ ಜಲಾಶಯ ಭರ್ತಿ ಯಾಗಿದೆ. ಇತ್ತೀಚೆಗೆ ಜಿಲ್ಲೆ ಮತ್ತು ಜಲಾನಯನ ಪ್ರದೇಶದಲ್ಲಿ ಸತತ ಮಳೆಯಿಂದ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬರುತ್ತಿದೆ. 7.69 ಟಿಎಂಸಿ ಸಾಮರ್ಥ್ಯದ ಕಾರಂಜಾದಲ್ಲಿ ಪೂರ್ಣ ನೀರು ಸಂಗ್ರಹವಾಗಿದೆ. ಕಳೆದೊಂದು ವಾರದಲ್ಲೇ ಒಂದು ಟಿಎಂಸಿಗೂ ಅಧಿಕ ನೀರು ಹರಿದುಬಂದಿದೆ. ಮೇಲ್ಭಾಗದ ತೆಲಂಗಾಣದ ಕೋಹಿರ್ ವ್ಯಾಪ್ತಿಯಲ್ಲಿ ಮಳೆ ಬರುತ್ತಿದ್ದರಿಂದ ಒಳಹರಿವು ಜಾಸ್ತಿ ಇದೆ.

ಹುಲಸೂರ ತಾಲೂಕಿನಿಂದ ಹಾದು ಹೋಗುವ ಮಾಂಜ್ರಾ ನದಿಯ ನೀರಿನ ಪ್ರವಾಹ ಹೆಚ್ಚಳವಾಗಿದ್ದು, ರೈತರ ಹೊಲಗಳಿಗ್ಗೆ ನೀರು ನುಗ್ಗುತ್ತಿದ್ದು. ಹುಲಸೂರ ಕೋಂಗಳಿ ರಸ್ತೆ ಬಂದ ಆಗುವ ಸಂಭವ ಇರುವುದರಿಂದ ನದಿ ದಡದಲ್ಲಿರುವ ಗ್ರಾಮಸ್ಥರು, ರೈತರು ಹಾಗೂ ಈ ರಸ್ತೆಯಿಂದ ಹೋಗುವ ಸಾರ್ವಜನಿಕರು ಎಚ್ಚರಿಕೆ ವಹಿಸಿಬೇಕಾಗಿ ತಹಸೀಲ್ದಾರ್​ ಶಿವಾನಂದ ಮೇತ್ರೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ್​ ಇಒ ಮಾಹದೇವ ಜಮ್ಮು ,ಪಿ.ಎಸ್.ಐ ಶಿವಪ್ಪಾ ಮೇಟಿ , ಕಂದಾಯ ನಿರೀಕ್ಷಕ ಶರಣು ಪವಾಡಶೆಟ್ಟಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂದು ಕಮಲನಗರ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಚಿಕ್ಲಿ(ಯು) ಗ್ರಾಮ ಪಂಚಾಯತ್​ ವ್ಯಾಪ್ತಿಯ ಚೋಂಡಿ ಮುಖೇಡ ಗ್ರಾಮಕ್ಕೆ ಮಾನ್ಯ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮೇಡಂ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಗ್ರಾಮದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಅಪಾಯವಿರುವ ಸ್ಥಳಗಳಿಗೆ ಜನ, ಜಾನುವಾರಗಳು ಹೋಗಬಾರದು ಎಂದು ಹೇಳಿದರು.


Spread the love

About Laxminews 24x7

Check Also

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ: ಯಾವುದೇ ಜಾತಿ ಬಿಟ್ಟುಹೋಗಿದ್ದರೆ ಮಾಹಿತಿ ನೀಡಲು ಸೆ.1ರವರೆಗೆ ಅವಕಾಶ

Spread the love ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕರ್ನಾಟಕ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ