Breaking News

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love

ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯಿದೆ-2025ನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿದ್ದು, ಇದೇ ಆಗಸ್ಟ್​ 30ರಂದು ವಿಚಾರಣೆಗೆ ನಿಗದಿಪಡಿಸಿದೆ.

ಎ23 ರಮ್ಮಿ ಎಂಬ ಆನ್‌ಲೈನ್​ ಗೇಮಿಂಗ್​ನ್ನು ನಡೆಸುತ್ತಿರುವ ಹೆಡ್​ ಡಿಜಿಟಲ್​ ವರ್ಕ್ಸ್​ ಪ್ರೈವೇಟ್​ ಲಿಮಿಟೆಡ್​ ಅರ್ಜಿಯನ್ನು ಸಲ್ಲಿಸಿದ್ದು, ತುರ್ತು ವಿಚಾರಣೆಗಾಗಿ ಪರಿಗಣಿಸಬೇಕು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್​ ಅವರ ಪೀಠದ ಮುಂದೆ ಗುರುವಾರ ಮನವಿ ಮಾಡಿದರು. ಮನವಿಯನ್ನು ಪರಿಗಣಿಸಿದ ಪೀಠ, ಅರ್ಜಿಯ ವಿಚಾರಣೆಯನ್ನು ಆಗಸ್ಟ್​ 30ರಂದು ನಡೆಸುವುದಾಗಿ ತಿಳಿಸಿತು.

ಕೇಂದ್ರ ಸರ್ಕಾರ ಹೊಸದಾಗಿ ಜಾರಿ ಮಾಡಿರುವ ಈ ಕಾಯಿದೆ ಭಾರತದ ಗಡಿಯೊಳಗೆ ಮಾತ್ರವಲ್ಲದೇ, ಹೊರ ದೇಶಗಳಿಂದಲೂ ಭಾರತದಲ್ಲಿ ಆನ್‌ಲೈನ್​ ಗೇಮಿಂಗ್​ಗಳನ್ನು ನಿರ್ವಹಣೆ ಮಾಡುವ ಕಂಪೆನಿಗಳನ್ನು ನಿಯಂತ್ರಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಈ ಕಾಯಿದೆ, ನಿರ್ದಿಷ್ಟ ನಿಯಮಗಳು ಮತ್ತು ಮಾನದಂಡಗಳನ್ನು ಆಧರಿಸಿ, ಕೌಶಲ್ಯ ಆಧಾರಿತ ಕ್ರೀಡೆಗಳನ್ನು ವರ್ಚುವಲ್ ವೇದಿಕೆಯಲ್ಲಿ ಆಡುವ ಆಟಗಳನ್ನು ಗುರುತಿಸಿರುವುದಾಗಿದೆ.

ಈ ಕೌಶಲ್ಯ ಆಧಾರಿತ ಕ್ರೀಡೆಗಳನ್ನು ಆನ್‌ಲೈನ್​ನಲ್ಲಿ ಜೂಜು ಮಾದರಿಯ ಕ್ರೀಡೆಗಳಿಂದ ಪ್ರತ್ಯೇಕಿಸುವುದಕ್ಕಾಗಿ ಈ ಕಾಯಿದೆಯಲ್ಲಿ ಅವಕಾಶವಿದೆ. ಹಣ ಹಾಗೂ ಇನ್ನಿತರೆ ಬೆಲೆಬಾಳುವ ವಸ್ತುಗಳನ್ನು ಪಣಕ್ಕಿಡುವ ಜೂಜನ್ನು ಒಳಗೊಂಡಿರುವ ಆಟಗಳನ್ನು ಮನಿ ಗೇಮ್​ ಎಂದು ಕರೆಯಲಾಗಲಿದೆ. ಆನ್‌ಲೈನ್​ ಕ್ರೀಡೆಗಳಲ್ಲಿ ಆಗುವ ವಂಚನೆಗಳಿಂದ ಗ್ರಾಹಕರಿಗೆ ರಕ್ಷಣೆ ದೊರಕಿಸಿಕೊಡಲು ಕಾಯಿದೆಯಲ್ಲಿ ಅವಕಾಶವಿರಲಿದೆ.

ರಾಷ್ಟ್ರೀಯ ಇ-ಪ್ರಾಧಿಕಾರಕ್ಕೆ ನಿರ್ವಹಣೆಯ ಹೊಣೆ : ಕಾಯಿದೆಯು ಆನ್‌ಲೈನ್​ ಗೇಮಿಂಗ್​ಗಳ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಇ-ಪ್ರಾಧಿಕಾರ ರಚನೆಗೆ ಅವಕಾಶ ನೀಡಲಿದೆ. ಈ ಪ್ರಾಧಿಕಾರದ ಅಡಿಯಲ್ಲಿ ನಿಯಂತ್ರಣಕ್ಕೆ ಕಾರ್ಯನಿರ್ವಹಣೆಗೆ ಈ ಕಾಯಿದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಜೊತೆಗೆ, ಸ್ಪರ್ಧಾತ್ಮಕ ಕ್ರೀಡೆಗಳಿಗೆ ಉತ್ತೇಜನ ನೀಡುವುದು, ಹಣದ ವಹಿವಾಟು ಇಲ್ಲದ ಸಾಮಾನ್ಯ ಆನ್‌ಲೈನ್ ಸಾಮಾಜಿಕ ಆಟಗಳ ನೋಂದಣಿ, ಸುರಕ್ಷತೆ ಮತ್ತು ದೂರುಗಳಿದ್ದಲ್ಲಿ ಪ್ರತ್ಯೇಕ ಕಾನೂನು ರಚನೆ, ಸ್ಥಳೀಯ ಆಡಳಿತದ ಕಾನೂನಗಳೊಂದಿಗೆ ಈ ಕಾಯಿದೆಯನ್ನು ಸೇರ್ಪಡೆ ಮಾಡಿಕೊಳ್ಳಲು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡುವುದು ಈ ಪ್ರಾಧಿಕಾರದ ಮುಖ್ಯ ಕರ್ತವ್ಯವಾಗಿರಲಿದೆ. ಜೊತೆಗೆ, ಈ ಪ್ರಾಧಿಕಾರವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬಹುದಾಗಿದೆ.

ಆನ್‌ಲೈನ್​ ಗೇಮಿಂಗ್​ನ್ನು ಕಾನೂನುಬಾಹಿರವಾಗಿ ಪ್ರಚೋದನೆ ನೀಡುವುದು ಮತ್ತು ಅಂತಹ ಗೇಮಿಂಗ್​ಗಳಿಗೆ ಅವಕಾಶ ಕಲ್ಪಿಸುವವರ ವಿರುದ್ಧ ತನಿಖಾಧಿಕಾರಿಗೆ ಯಾವುದೇ ಸಂಶಯ ಬಂದಲ್ಲಿ ವಾರೆಂಟ್​ ನೀಡದೆಯೇ ಆರೋಪಿಗಳನ್ನು ಬಂಧಿಸುವುದು, ಆಸ್ತಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.


Spread the love

About Laxminews 24x7

Check Also

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ: ಯಾವುದೇ ಜಾತಿ ಬಿಟ್ಟುಹೋಗಿದ್ದರೆ ಮಾಹಿತಿ ನೀಡಲು ಸೆ.1ರವರೆಗೆ ಅವಕಾಶ

Spread the love ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕರ್ನಾಟಕ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ