ಬಾಗಲಕೋಟೆ ಪುಂಡ ಪೋಕಿರಿ ಬೈಕ್ ಸವಾರರಿಗೆ ಪೋಲಿಸರಿಂದ ಶಾಕ್: 16 ಬೈಕ್ ಮಾಲೀಕರಿಗೆ ದಂಡ ಸಹಿತ ಸೈಲೆನ್ಸರ್ ನಾಶ….
ಕರ್ಕಶ ಶಬ್ದ ಉಂಟು ಮಾಡುವ ಡಿಫೆಕ್ಟಿವ್ ಸೆಲೆನ್ಸರ್ ಅಳವಡಿಸಿ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಶಬ್ದ ಮಾಲಿನ್ಯ ಮಾಡುತ್ತಿದ್ದ ಪುಂಡ ಪೋಕಿರಿ ಬೈಕ್ ಸವಾರರಿಗೆ ಪೋಲಿಸರು ಶಾಕ್ ನೀಡಿದ್ದು,

16 ಬೈಕ್ ಮಾಲೀಕರಿಗೆ ದಂಡ ಹಾಕುವುದರ ಜೊತೆಗೆ ಸೈಲೆನ್ಸರ್ ನಾಶ ಮಾಡಿರುವ ಘಟನೆ ನಡೆದಿದೆ.
ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ಬಾಗಲಕೋಟೆ ಡಿವೈಎಸ್ಪಿ ಗಜಾನನ ಸುತಾರ್ ನೇತೃತ್ವದಲ್ಲಿ ಸಂಚಾರಿ ಪೊಲೀಸರು ವಿದ್ಯಾಗಿರಿಯ ಕಾಲೇಜು ವೃತ್ತದಲ್ಲಿ ಕಳೆದ ಅನೇಕ ದಿನಗಳಿಂದ ನಗರದಲ್ಲಿ ಕರ್ಕಶ ಶಬ್ದ ಉಂಟು

ಮಾಡುವ ಡಿಫೆಕ್ಟಿವ್ ಸೆಲೆನ್ಸರ್ ಅಳವಡಿಸಿ ಸಾರ್ವಜನಿಕರಿಗೆ ಶಬ್ದ ಮಾಲಿನ್ಯ ಉಂಟು ಮಾಡುತ್ತಿದ್ದ ಪುಂಡ ಪೋಕಿರಿಗಳ 16 ಬೈಕ್ ಮಾಲೀಕರಿಗೆ ದಂಡ ಹಾಕಲಾಗಿದೆ. ಬೈಕ್ಗಳ ಸೈಲೆನ್ಸರ್ ತೆಗೆಸಿ, ರಸ್ತೆ ಮೇಲೆ ಸಾಲಾಗಿ ಇರಿಸಿ ಸೈಲೆನ್ಸರ್ ಗಳನ್ನು ಜೆಸಿಬಿ ಯಂತ್ರದ ಮೂಲಕ ನಾಶಗೊಳಿಸಲಾಗಿದೆ

ಬಾಗಲಕೋಟೆ ಡಿವೈಎಸ್ಪಿ ಗಜಾನನ ಸುತಾರ್ ಮಾತನಾಡಿ, ಇಂಡಿಯನ್ ಮೋಟರ್ ವೆಹಿಕಲ್ ಆಕ್ಟ್ ಪಾಲಿಸದ ಹಿನ್ನಲೆಯಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಖರೀದಿಸಿ ಬೈಕ್ ಗಳಿಗೆ
ಅಳವಡಿಸುವುದು ಶಬ್ದ ಮಾಲಿನ್ಯ ಮಾಡುತ್ತಿದ್ದ 16 ಬೈಕ್ಗಳ ಸೈಲೆನ್ಸರ್ ನಾಶಪಡಿಸಲಾಗಿದೆ. ಸಾರ್ವಜನಿಕರ ಶಾಂತಿಗೆ ಭಂಗ ತರುವ ಹಾರನ್, ಸೈಲೆನ್ಸರ್ ಹಾಕುವರ ವಿರುದ್ಧ ಶಿಶ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.