ದಿ. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಹಿನ್ನೆಲೆಯಲ್ಲಿ, ಇಂದು ಯಮಕನಮರಡಿ ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದೆ.
ದಿವಂಗತ ಅಪ್ಪಣಗೌಡ ಪಾಟೀಲರು ಸ್ಥಾಪಿಸಿದ, ದೇಶದ ಏಕೈಕ ವಿದ್ಯುತ್ ಸಹಕಾರಿ ಸಂಸ್ಥೆಯನ್ನು ಕಾಪಾಡಿ, ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯ. ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಚುನಾವಣೆ ತಾಲೂಕಿನ ಸಹಕಾರಿ ಸಂಸ್ಥೆಯ ಭವಿಷ್ಯ ನಿರ್ಧರಿಸುವ ಮಹತ್ವದ ಹಂತವಾಗಿದೆ.
ಸುಮಾರು 30 ವರ್ಷಗಳ ಕಾಲ ಸ್ಥಗಿತಗೊಂಡಿದ್ದರೂ, ಹೊಸ ಆಡಳಿತ ಮಂಡಳಿ ಕೇವಲ 60 ದಿನಗಳಲ್ಲಿ ಅನೇಕ ಕೆಲಸಗಳನ್ನು ಪೂರೈಸಿ ಜನರ ನಂಬಿಕೆ ಗಳಿಸಿದೆ. ನಿರಂತರ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ,
ಹಾಗೂ ರೈತರ ಜಮೀನುಗಳಿಗೆ ಪ್ರತ್ಯೇಕ ಟಿಸಿಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಹೀಗಾಗಿ ಅಪ್ಪಣಗೌಡ ಪಾಟೀಲ ಸಹಕಾರಿ ಪೆನಲ್ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಎಂದು ಮಾತನಾಡಿ ಕೋರಿದೆ.
ಈ ವೇಳೆ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.