ಛತ್ತೀಸಗಢದಲ್ಲಿ ಬಂಧಿಸಿದ ಕ್ರೈಸ್ತ ಸನ್ಯಾನಿಯರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಇಂದು ಬೆಳಗಾವಿಯಲ್ಲಿ ಕ್ಯಾಥೋಲಿಕ್ ಅಸೋಸಿಯೇಷನ್ ಆಫ್ ಬೆಲಗಾಮನ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಛತ್ತೀಸಗಢದಲ್ಲಿ ಕ್ರೈಸ್ತ ಸನ್ಯಾನಿಯರನ್ನು ಬಂಧಿಸಿದ ಘಟನೆಯನ್ನು ಖಂಡಿಸಿ ಇಂದು ಕ್ಯಾಥೋಲಿಕ್ ಅಸೋಸಿಯೇಷನ್ ಆಫ್ ಬೆಲಗಾಮನ ವತಿಯಿಂದ ಪ್ರತಿಭಟನೆಯನ್ನು ನಡೆಸಿದರು.
ನಗರ ಪ್ರಮುಖ ಮಾರ್ಗಗಳಲ್ಲಿ ಪ್ರತಿಭಟನಾ ಪಾದಯಾತ್ರೆಯನ್ನು ನಡೆಸಿ, ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಛತ್ತೀಸಗಢದಲ್ಲಿ ಕ್ರೈಸ್ತ ಸನ್ಯಾನಿಯರನ್ನು ಬಂಧಿಸಿದ್ದು ಖಂಡನೀಯ. ಅವರಿಬ್ಬರು ಬಡ ಜನರ ಏಳ್ಗೆಗಾಗಿ ಶ್ರಮಿಸುತ್ತಿದ್ದರು.
ಆದರೇ, ಅವರ ಮೇಲೆ ಮಾನವ ಕಳ್ಳ ಸಾಗಾಣಿಕೆಯ ಸುಳ್ಳು ಆರೋಪವನ್ನು ಮಾಡಲಾಗಿದೆ. ಕೂಡಲೇ, ಆ ಇಬ್ಬರೂ ಅಮಾಯಕರನ್ನು ಬಂಧನದಿಂದ ಬಿಡುಗಡೆಗೊಳಿಸಬೇಕು ಎಂದು ಬಿಷಪ್ ರೆವ್ಹರೆಂಡ್ ಡೆರಿಕ್ ಫರ್ನಾಂಡೀಸ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಭಾಗಿಯಾಗಿದ್ಧರು.