Breaking News

ಮಾಜಿ ಕಾರ್ಪೋರೇಟರ್ ಮನೆಯಲ್ಲಿ 1 ಕೋಟಿಗೂ ಅಧಿಕ ಮೌಲ್ಯದ ನಗ-ನಾಣ್ಯ ದೋಚಿದ್ದ ಮೂವರ ಬಂಧನ

Spread the love

ಬೆಂಗಳೂರು: ಮಾಜಿ ಕಾರ್ಪೋರೇಟರ್ ಮನೆಯಲ್ಲಿ ಕೋಟಿ ಮೌಲ್ಯದ ನಗ ನಾಣ್ಯ ದೋಚಿದ್ದ ಮೂವರು ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಘು, ಮಿಥುನ್ ಹಾಗೂ ಜೈದೀಪ್ ಬಂಧಿತ ಆರೋಪಿಗಳು.

ಜಯನಗರ 5ನೇ ಬ್ಲಾಕ್‌ನಲ್ಲಿರುವ ಮಾಜಿ ಕಾರ್ಪೋರೇಟರ್ ಟಿ.ಎಸ್. ವಸಂತ್ ಕುಮಾರ್ ಭವಾನಿ ಅವರ ಮನೆಯಲ್ಲಿ ಜುಲೈ 20ರಂದು ಕಳ್ಳತನ ಮಾಡಿದ್ದ ಆರೋಪಿಗಳಿಂದ ಬರೋಬ್ಬರಿ 78.50 ಲಕ್ಷ ರೂ. ಮೌಲ್ಯದ 1.85 ಕೆ.ಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೋಲೆಕ್ಸ್ ವಾಚ್ ಸಹಿತ ಕೋಟಿ ಮೌಲ್ಯದ ಆಭರಣ ಕದ್ದ ಕಳ್ಳರು: ಡಿಲೆವರಿ ಎಕ್ಸಿಕ್ಯುಟಿವ್‌ಗಳ ಸೋಗಿನಲ್ಲಿ ಬೇರೆಬೇರೆ ಏರಿಯಾಗಳ ಸುತ್ತಾಡುತ್ತಿದ್ದ ಆರೋಪಿಗಳು, ಯಾರೂ ಇರದ ಮನೆಗಳಲ್ಲಿ ಕ್ಷಣಮಾತ್ರದಲ್ಲಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಜುಲೈ 20ರಂದು ಸಂಜೆ 4:30ಕ್ಕೆ ಮಗನನ್ನು ಏರ್‌ಪೋರ್ಟ್‌ಗೆ ಬಿಟ್ಟು ಬರಲು ವಸಂತ್ ಕುಮಾರ್ ಅವರು ತೆರಳಿದ್ದರು. ಆದರೆ ರಾತ್ರಿ 8 ಗಂಟೆಗೆ ವಾಪಸ್ ಬಂದು ನೋಡಿದಾಗ ಮನೆಯ ಲಾಕ್ ಒಡೆದು 1.03 ಕೋಟಿ ಮೌಲ್ಯದ ಚಿನ್ನಾಭರಣ, ರೋಲೆಕ್ಸ್ ವಾಚ್, ನಗದು ದೋಚಿರುವುದು ಕಂಡುಬಂದಿತ್ತು.

ಸಂಜೆ ವೇಳೆ ಕೃತ್ಯ: ಸಂಜೆ 4.30ಕ್ಕೆ ಮನೆಗೆ ಲಾಕ್ ಮಾಡಿ ಎರ್ಪೋರ್ಟ್​ಗೆ ವಸಂತ್ ಕುಮಾರ್ ಅವರು ತೆರಳಿದ್ದರು. ಬಳಿಕ 8 ಗಂಟೆಗೆ ಮನೆಗೆ ಬಂದು ನೋಡುವಷ್ಟರಲ್ಲಿ ಕಳ್ಳತನವಾಗಿದೆ. ಹೊಂಚು ಹಾಕಿ ಕುಳಿತಿದ್ದ ಆರೋಪಿಗಳು, ಮೂರುವರೆ ಗಂಟೆಯೊಳಗೆ ಕೃತ್ಯ ಮುಗಿಸಿ ಎಸ್ಕೇಪ್ ಆಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಜಯನಗರ ಠಾಣೆ ಪೊಲೀಸರು, ತುರಹಳ್ಳಿ ಅರಣ್ಯ ವಲಯದಲ್ಲಿದ್ದ ಆರೋಪಿಗಳನ್ನು ಚಿನ್ನಾಭರಣಗಳ ಸಮೇತ ವಶಪಡಿಸಿಕೊಂಡಿರುವುದಾಗಿ ತಿಳಿಸಿದರು. ಆರೋಪಿಗಳು ಸ್ಕೂಟಿ ಮೇಲೆ ಬಂದು ಮನೆಯೊಳಗೆ ಹೋಗುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಜುಲೈ 24 ರಂದು ಗನ್ ತೋರಿಸಿ ಹೆದರಿಸಿ ಚಿನ್ನದಂಗಡಿ ದರೋಡೆ: ಬೆಂಗಳೂರಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇತ್ತೀಚೆಗೆ ಜುಲೈ 24 ರಂದು ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಗಡಿ ರಸ್ತೆಯ ಮಾಚೋಹಳ್ಳಿ ಗೇಟ್​ನ ರಾಮ್​ ಜ್ಯುವೆಲ್ಲರಿ ಶಾಪ್​​ನಲ್ಲಿ ರಾತ್ರಿ 8 ರಿಂದ 9 ಗಂಟೆಯೊಳಗೆ ಮೂವರು ಮುಸುಕುಧಾರಿಗಳು ಗನ್​​ ತೋರಿಸಿ ಚಿನ್ನಾಭರಣವನ್ನು ದರೋಡೆ ಮಾಡಿದ ಘಟನೆ ನಡೆದಿತ್ತು. ಆರೋಪಿಗಳು ಕೇವಲ 16 ಸೆಕೆಂಡ್​ಗಳಲ್ಲಿ ಕೃತ್ಯ ಎಸಗಿ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


Spread the love

About Laxminews 24x7

Check Also

ಶಿರೂರು ಗ್ರಾಮದಲ್ಲಿ ಹುಕ್ಕೇರಿ ವಿದ್ಯುತ್ ಸಂಘದ ವತಿಯಿಂದ ರೈತರಿಗೆ ಅನುಕೂಲವಾಗುವಂತೆ ಅಳವಡಿಸಲಾದ ವಿದ್ಯುತ್ ಟಿಸಿಯನ್ನು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿದರು.

Spread the loveಶಿರೂರು ಗ್ರಾಮದಲ್ಲಿ ಹುಕ್ಕೇರಿ ವಿದ್ಯುತ್ ಸಂಘದ ವತಿಯಿಂದ ರೈತರಿಗೆ ಅನುಕೂಲವಾಗುವಂತೆ ಅಳವಡಿಸಲಾದ ವಿದ್ಯುತ್ ಟಿಸಿಯನ್ನು ಲೋಕೋಪಯೋಗಿ ಸಚಿವರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ