Breaking News

ಬೆಳಗಾವಿಯ ಅಮನ್ ನಗರದಲ್ಲಿ ರೇಲ್ವೆ ಮೇಲ್ಸೇತುವೆ ನಿರ್ಮಾಣ

Spread the love

ರೇಲ್ವೆ ಸೇತುವೆ ನಿರ್ಮಾಣಕ್ಕೆ ಅಮನ್ ನಗರದ ರಹಿವಾಸಿಗಳಿಂದ ಸ್ವಾಗತ
ನ್ಯೂ ಗಾಂಧೀ ನಗರದ ಜನರಿಂದ ವಿರೋಧ….!!!
ರೇಲ್ವೆ ಸೇತುವೆ ನಿರ್ಮಾಣಕ್ಕೆ ಅಮನ್ ನಗರದ ರಹಿವಾಸಿಗಳಿಂದ ಸ್ವಾಗತ
ನ್ಯೂ ಗಾಂಧೀ ನಗರದ ಜನರಿಂದ ವಿರೋಧ….
ಶಾಸಕ ಆಸೀಫ್ ಸೇಠ್ ಅವರೊಂದಿಗೆ ಸಭೆ
ಲಿಖಿತ ಅಭಿಪ್ರಾಯ ತಿಳಿಸಬೇಕೆಂದ ಶಾಸಕರು
ಬೆಳಗಾವಿಯ ಅಮನ್ ನಗರದಲ್ಲಿ ರೇಲ್ವೆ ಮೇಲ್ಸೇತುವೆ ನಿರ್ಮಾಣ ಕಾರ್ಯವನ್ನು ಸ್ಥಳೀಯರು ಸ್ವಾಗತಿಸಿದರೇ, ನ್ಯೂ ಗಾಂಧಿ ನಗರದ ಜನರು ಮೇಲ್ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಅಮನ್ ನಗರದಲ್ಲಿ ರೇಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಉತ್ತರ ಶಾಸಕ ಆಸೀಫ್ ಸೇಠ್ ಅವರ ಉಪಸ್ಥಿತಿಯಲ್ಲಿ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಅಮನ್ ನಗರದ ಜನರು ಮೇಲ್ಸೇತುವೆ ನಿರ್ಮಾಣ ನಿರ್ಧಾರವನ್ನು ಸ್ವಾಗತಿಸಿದರೇ, ಗಾಂಧಿ ನಗರದ ಜನರು ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅಯೂಬ್ ಜಕಾತಿ ಅವರು ಮಾತನಾಡಿ, ಬೆಳಗಾವಿ ಅಮನ್ ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಶೀಘ್ರದಲ್ಲೇ ನಿರ್ಮಿಸಬೇಕು.
ಇದು ಇಲ್ಲಿನ ಜನರಿಗೆ ಆಗುತ್ತಿರುವ ತೊಂದರೆಯನ್ನು ನೀಗಿಸಲಿದೆ. ರೈಲಿನ ಸಂಖ್ಯೆ ಹೆಚ್ಚಾಗಲಿದೆ. ಭವಿಷ್ಯದಲ್ಲಿ ಅಮನ್ ನಗರದ ರೈಲ್ವೆ ಗೇಟ್ ಬಂದ್ ಮಾಡಲು ಮುಂದಾಗುವ ಮೊದಲೇ, ಶಾಸಕರು ಒಂದು ಒಳ್ಳೆಯ ಯೋಜನೆಯೊಂದಿಗೆ ಸುಂದರ ಸೇತುವೆಯನ್ನು ನಿರ್ಮಿಸಬೇಕೆಂದು ಆಗ್ರಹಿಸಿದರು.
ಐಜಾಜ್ ಹಕೀಮ್ ಅವರು ನೂತನ ಮೇಲ್ಸೇತುವೆಯನ್ನು ನಿರ್ಮಿಸಿದರೇ, ಅಮನ್ ನಗರ ಮತ್ತು ನ್ಯೂ ಗಾಂಧಿ ನಗರದ ಜನರಿಗೆ ಒಳ್ಳೆಯ ಸಂಗತಿಯಾಗಲಿದೆ. ಮುಂದಿನ ದಿನಗಳಲ್ಲಿ ರೈಲುಗಳ ಸಂಖ್ಯೆ ಹೆಚ್ಚಾದಲ್ಲಿ ಜನರಿಗೆ ಓಡಾಡಲೂ ತೊಂದರೆಯಾಗಲಿದೆ. ನಮಗೆ ತಡೆಗೋಡೆ ಬೇಡ. ಸೇತುವೆ ಅಥವಾ ಬ್ರಿಡ್ಜ್ ನಿರ್ಮಿಸಬೇಕೆಂದು ಒತ್ತಾಯಿಸಿದರು. ಇಂದು 14 ಕಮೀಟಿಗಳು ತಮ್ಮ ಬೇಡಿಕೆಯ ಮನವಿಯನ್ನು ಶಾಸಕರಿಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಸಿಎಂ ಮತ್ತು ರೇಲ್ವೇ ಸಚಿವರಿಗೂ ತಲುಪಿಸಲಾಗುವುದು ಎಂದರು.
ಇನ್ನು ನಗರಸೇವಕ ಅಝೀಮ್ ಪಟ್ವೇಗಾರ್ ಅವರು ಇದು ತಾಶೀಲ್ದಾರ ಗಲ್ಲಿಯಂತೆ ವಾಣಿಜ್ಯ ವಹಿವಾಟಿನ ಪ್ರದೇಶವಾಗಿರದೇ, ವಸತಿ ಪ್ರದೇಶವಾಗಿದೆ. ವಸತಿ ಪ್ರದೇಶದಲ್ಲಿ ಮೇಲ್ಸೇತುವೆ ಇಲ್ಲಿಯ ವರೆಗೂ ಎಲ್ಲಿಯೂ ನಿರ್ಮಿಸಿಲ್ಲ. ಸೇತುವೆ ನಿರ್ಮಾಣವಾಗದೇ ಹೋದರೆ ಒಳ್ಳೆಯದು. ನಮಗೆ ಗೋಡೆಯೂ ಬೇಡ, ಸೇತುವೆಯೂ ಬೇಡ ಎಂದರು.
ಈ ಕುರಿತು ಮನವಿಯನ್ನು ಸ್ವೀಕರಿಸಿದ ಶಾಸಕ ಆಸೀಫ್ ಸೇಠ್ ಅವರು ಇದು ಕೇಂದ್ರ ಸರ್ಕಾರದ ರೇಲ್ವೆ ಇಲಾಖೆಯ ಯೋಜನೆಯಾಗಿದೆ. ತಮ್ಮ ಅಭಿಪ್ರಾಯವನ್ನು ಲಿಖಿತವಾಗಿ ತಿಳಿಸಿದರೇ, ನಾವು ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಮಾಳ ಮಾರುತಿ ಸಿಪಿಐ ಜೆ.ಎಂ. ಕಾಲಿಮಿರ್ಚಿ, ಮಾಜಿ ನಗರಸೇವಕ ಫಯೀಮ್ ನಾಯಿಕವಾಡಿ, ಅಕ್ಬರ್ ಬಾಗವಾನ್, ನಝೀಮ್ ನಾಯಿಕವಾಡಿ, ಅಶ್ಫಾಕ್ ಶೇಖ್, ಸ್ಥಳೀಯ ಮೌಲಾನಾಗಳು, ಅಮನ್ ನಗರ ಮತ್ತು ಗಾಂಧೀ ನಗರದ ನಿವಾಸಿಗಳು ಭಾಗಿಯಾಗಿದ್ದರು.

Spread the love

About Laxminews 24x7

Check Also

ಶಿರೂರು ಗ್ರಾಮದಲ್ಲಿ ಹುಕ್ಕೇರಿ ವಿದ್ಯುತ್ ಸಂಘದ ವತಿಯಿಂದ ರೈತರಿಗೆ ಅನುಕೂಲವಾಗುವಂತೆ ಅಳವಡಿಸಲಾದ ವಿದ್ಯುತ್ ಟಿಸಿಯನ್ನು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿದರು.

Spread the loveಶಿರೂರು ಗ್ರಾಮದಲ್ಲಿ ಹುಕ್ಕೇರಿ ವಿದ್ಯುತ್ ಸಂಘದ ವತಿಯಿಂದ ರೈತರಿಗೆ ಅನುಕೂಲವಾಗುವಂತೆ ಅಳವಡಿಸಲಾದ ವಿದ್ಯುತ್ ಟಿಸಿಯನ್ನು ಲೋಕೋಪಯೋಗಿ ಸಚಿವರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ