ಮುಗಿಲು ಮುಟ್ಟಿತ್ತು ವಿದ್ಯಾರ್ಥಿಗಳ ಸಡಗರ ಸಂಭ್ರಮ
ಬೆಳಗಾವಿಯ ಸಹ್ಯಾದ್ರಿ ನಗರದಲ್ಲಿರುವ ಆಶ್ರಯ ಕಾಲೋನಿಗೆ ಬಸ್ ಸೌಕರ್ಯ
ಮಹಾನಗರದ ಮಧ್ಯದಲ್ಲಿದ್ದರು ಸಾರಿಗೆ ವ್ಯವಸ್ಥೆಯಿಲ್ಲದೆ ನಿತ್ಯ ಕಿಲೋಮೀಟರ್ ವರೆಗೆ ನಡೆದುಕೊಂಡು ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ತಮ್ಮ ಕಾಲೋನಿಗೆ ಹೊಸ ಬಸವೊಂದು ಬಂದ ಖುಷಿಯಲ್ಲಿ ಅವರ ಸಡಗರ ಸಂಭ್ರಮ ಮುಗಿಲು ಮುಟ್ಟಿತ್ತು ಈ ಕುರಿತು ಒಂದು ವರದಿ
ಬೆಳಗಾವಿ ಮಹಾನಗರದ ಸಹ್ಯಾದ್ರಿ ನಗರದಲ್ಲಿರುವ ಆಶ್ರಯ ಕಾಲೋನಿಗೆ ಬಸ್ ಸೌಕರ್ಯದಿಂದ ವಂಚಿವಾಗಿದ್ದ ಮಕ್ಕಳು ನಿತ್ಯ ಕಿಲೋಮೀಟರ್ ವರೆಗೆ ಕ್ರಮಿಸಿ ಬಸ್ ಹಿಡಿಯಬೇಕಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯತ್ನದಿಂದ ಮಂಗಳವಾರ ಆಶ್ರಯ ಕಾಲೋನಿಗೆ ಸಾರಿಗೆ ಬಸ್ ನಲ್ಲಿ ಮಕ್ಕಳು ಸಂತಸದಿಂದ ಶಾಲೆಗಳಿಗೆ ತೆರಳಿದರು. ಸಾರಿಗೆ ಬಸ್ ಆಶ್ರಯ ಕಾಲೋನಿಯ ಕೆಇಬಿ ಬಳಿ ಬರುತ್ತಿದ್ದಂತೆ ಇಲ್ಲಿನ ರಹವಾಸಿಗಳು ಸಾರಿಗೆ ಬಸ್ ಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಮುಸ್ತಾಕ್ ಮುಲ್ಲಾ ಮಾತನಾಡಿ, ಆಶ್ರಯ ಕಾಲೋನಿಯ ಮಕ್ಕಳು ಸಾರಿಗೆ ಬಸ್ ಗಾಗಿ ಹರಸಾಹಸ ಪಡುತ್ತಿದ್ದರು. ಈ ವಿಷಯವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಗಮನಕ್ಕೆ ತಂದು ಶಾಲಾ ಮಕ್ಕಳಿಗೆ ಅನಕೂಲ ಮಾಡಿಕೊಡಲಾಗಿದೆ ಎಂದರು.
ಆಶ್ರಯ ಕಾಲೋನಿಯ ರಹವಾಸಿ ಆಯುಬ್ ದೇಸಾಯಿ ಮಾತನಾಡಿ, ನಮ್ಮ ಕಾಲೋನಿಯ ಶಾಲಾ ಮಕ್ಕಳು ಸೇರಿದಂತೆ ಇಲ್ಲಿನ ಜನರಿಗೆ ಸಮಸ್ಯೆಯಾಗಿತ್ತು. ಪಾಲಿಕೆ ಸದಸ್ಯ ಮುಸ್ತಾಕ ಅವರ ಗಮನಕ್ಕೆ ತಂದ ಕೂಡಲೇ ಸಾರಿಗೆ ಬಸ್ ವ್ಯವಸ್ಥೆ ಮಾಡಿಸಿದ್ದಾರೆ ಎಂದರು.
ಕಾಲೇಜು ವಿದ್ಯಾರ್ಥಿಯೋರ್ವ ಮಾತನಾಡಿ, ಹಲವಾರು ದಿನಗಳಿಂದ ಆಶ್ರಯ ಕಾಲೋನಿಗೆ ಬಸ್ ಸೌಕರ್ಯವಿಲ್ಲದೆ ಐದು ಕೀಲೊಮೀಟರ್ ನಡೆದುಕೊಂಡು ಹೋಗುವ ಪರಿಸ್ಥಿತಿಯಿತ್ತು ಮುಸ್ತಾಕ್ ಮುಲ್ಲಾ ಅವರು ಹೊಸ ಬಸ ಬಿಡುಗಡೆ ಮಾಡಿಸಿ ನಮ್ಮ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ ಎಂದರು.
ಶಾಲಾ ವಿದ್ಯಾರ್ಥಿನಿ ದೇಸಾಯಿ ಮಾತನಾಡಿ, ಚೆನ್ನಮ್ಮ ವೃತ್ತದಿಂದ ಬೋಗಾರವೇಸ್ ತನಕ ನಡೆದುಕೊಂಡು ಹೋಗುವುದು ಬಹಳ ಕಷ್ಟವಾಗುತ್ತಿತ್ತು ಈಗಾ ನಮ್ಮ ಕಾಲೋನಿಗೆ ಬಸ ಬಂದಿದ್ದರಿಂದ ನಾವು ಇಲ್ಲಿಂದ ಖುಷಿಯಿಂದ ಹತ್ತಿಕೊಂಡು ಹೋಗುಬಹುದು ಎಂದರು.
ಈ ಸಂದರ್ಭದಲ್ಲಿ ಆಶ್ರಯ ಕಾಲೋನಿಯ ನಿವಾಸಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
Laxmi News 24×7