Breaking News

ಬೆಳಗಾವಿಗೆ ಲಗ್ಗೆ ಇಟ್ಟ ವೋಲ್ಟಾಜ್ ಶೋರೂಂ… ಟಾಟಾ ಕಂಪನಿಯ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯ…

Spread the love

ಬೆಳಗಾವಿಗೆ ಲಗ್ಗೆ ಇಟ್ಟ ವೋಲ್ಟಾಜ್ ಶೋರೂಂ…
ಟಾಟಾ ಕಂಪನಿಯ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯ…
ಎಕ್ಸಕ್ಲೂಸಿವ್ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಬೆಳಗಾವಿಗರಿಗೆ ಇಲ್ಲಿದೆ ಒಂದು ಸಿಹಿ ಸುದ್ಧಿ. ಒಂದೇ ಸೂರಿನಡಿ ನೀಡಲು ಪ್ರಪ್ರಥಮವಾಗಿ ಟಾಟಾ ಕಂಪನಿಯ ಉತ್ಪನ್ನಗಳನ್ನು ಬೆಳಗಾವಿಗರಿಗೆ ನೀಡಲು ವೋಲ್ಟಾಜ್ ಶೋರೂಂ ಈಗ ಕುಂದಾನಗರಿಗೆ ಲಗ್ಗೆ ಇಟ್ಟಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಹೌದು, ಹಲವಾರು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಕಂಪನಿಯೂ ಈಗ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿಯೂ ಪ್ರಗತಿಯನ್ನು ಹೊಂದುತ್ತಿದೆ. ಬೆಳಗಾವಿಗರಿಗೆ ಟಾಟಾ ಕಂಪನಿಯ ವೋಲ್ಟಾಜ್ ಉತ್ಪನ್ನಗಳನ್ನು ಒದಗಿಸುವ ಉದ್ಧೇಶದಿಂದ ನಗರದ ಶಿವಬಸವನ ನಗರದಲ್ಲಿ ದುರದುಂಡೇಶ್ವರ ದಿವಟೆ ಅವರು ನೂತನ ವೋಲ್ಟಾಜ್ ಶೋರೂಂನ್ನು ಆರಂಭಿಸಿದ್ದಾರೆ. ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಜೀಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಮುಖ್ಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯ್ ನಾರಾಯಣ್, ಕುಮಾರ್ ವಿಕಾಸ್ ಇನ್ನಿತರರು ಉಪಸ್ಥಿತರಿದ್ಧರು. ಗಣ್ಯರ ಹಸ್ತದಿಂದ ನೂತನ ವೋಲ್ಟಾಜ್ ಶೋರೂಂನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಜೀಗಳು, ಬೆಳಗಾವಿಯ ಶಿವಬಸವ ನಗರದ ಇದೀಗ ವೇಗವಾಗಿ ಬೆಳೆಯುತ್ತಿದೆ. ಈಗ ಟಾಟಾ ಕಂಪನಿಯ ವೋಲ್ಟಾಜ್ ಕಂಪನಿಯ ಶೋರೂಂನ್ನು ಆರಂಭಿಸಿರುವುದು ಸಂತಸ ಸಂಗತಿ. ವೋಲ್ಟಾಜ್ ಕಂಪನಿ ಭಾರತ ದೇಶದಲ್ಲಿ ಅತ್ಯಂತ ಜನಪ್ರಿಯವಾಗಿದೆ.
ಶಿವಬಸವ ನಗರದ ಜನರಿಗೆ ಬೇಕಾದ ಗೃಹೋಪಯೋಗಿ ವಸ್ತುಗಳು ತಮ್ಮ ನಗರದಲ್ಲೇ ಸಿಗುವಂತೆ ದುರದುಂಡೇಶ್ವರ ದಿವಟೆ ಅವರು ಮಾಡಿದ್ದಾರೆ. ದಿವಟೆ ಅವರ ಈ ಶೋರೂಂ ಉತ್ತರೋತ್ತರ ಪ್ರಗತಿಯನ್ನು ಸಾಧಿಸಲಿ ಎಂದು ಹಾರೈಸಿದರು.
ವೋಲ್ಟಾಜ್ ಸಂಪೂರ್ಣ ದೇಶದಲ್ಲಿ ಒಂದು ಪ್ರಖ್ಯಾತ ಕಂಪನಿಯಾಗಿದೆ. ಫ್ರಿಜ್, ಎಸಿ, ಕಮರ್ಷಿಯಲ್ ಎಸಿ, ಡಿಶ್ ವಾಷರ್, ಮೈಕ್ರೋ ವೋವನ್ ಸೇರಿದಂತೆ ಎಲ್ಲ ಪ್ರಕಾರದ ಉತ್ಪನ್ನಗಳು ನಮ್ಮಲ್ಲಿ ದೊರೆಯುತ್ತವೆ. ಬೆಳಗಾವಿಯಲ್ಲಿ ನಮ್ಮದು ವೋಲ್ಟಾಜ್’ನ ಪ್ರಥಮ ಶಾಖೆ ಆರಂಭಗೊಂಡಿದೆ ಎಂದು ಸಂಚಾಲಕರಾದ ದುರದುಂಡೇಶ್ವರ ಮಲ್ಲಪ್ಪ ದಿವಟೆ ಮತ್ತು ಜ್ಯೋತಿ ದುರದುಂಡೇಶ್ವರ ದಿವಟೆ ಅವರು ತಿಳಿಸಿದರು.
ವೋಲ್ಟಾಜ್ ಕಂಪನಿಯ ರಾಘವೇಂದ್ರ ಅವರು ಡಿಎಂಡಿ ಸ್ಮಾರ್ಟ್ ಅಪ್ಲೈನ್ಸ್’ನಲ್ಲಿ ಟಾಟಾ ಪ್ರೋಡಕ್ಟ್’ಗಳು ಬೆಳಗಾವಿಗೆ ಒಳ್ಳೆಯ ಗುಣಮಟ್ಟದಲ್ಲಿ ಸಿಗಲಿವೆ. ಸೈಡ್ ಬೈ ಸೈಡ್ ರಿಫ್ರಜಿರೇಟರ್ ಸೇರಿದಂತೆ ಎಲ್ಲ ಪ್ರಕಾರದ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯಲಿವೆ. ಅಲ್ಲದೇ ಫೈನಾನ್ಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುವುದು ಎಂದರು.
ಇಲ್ಲಿ ವೋಲ್ಟಾಜ್’ನ ಎಕ್ಸಕ್ಲೂಜಿವ್ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ವೋಲ್ಟಾಜ್ ಇದು ಟಾಟಾ ಪ್ರೋಡಕ್ಟ್ ಆಗಿದ್ದು, ನೇರವಾಗಿ ಗ್ರಾಹಕರಿಗೆ ಟಾಟಾ ವಸ್ತುಗಳು ದೊರೆಯುತ್ತವೆ. ಹೊಸ ಹೊಸ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ ಎಂದು ಇನ್ನೋರ್ವ ಗಣ್ಯರು ತಿಳಿಸಿದರು.
ಬೆಂಗಳೂರಿನ ಶಿವಕುಮಾರ್, ಅಭಿಷೇಕ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು

Spread the love

About Laxminews 24x7

Check Also

ಶಿಕ್ಷಕರ ವೃತ್ತಿ, ಕೇವಲ ಉದ್ಯೋಗವಲ್ಲ; ಅದು ಪವಿತ್ರ ಧರ್ಮ

Spread the love ಶಿಕ್ಷಕರ ವೃತ್ತಿ, ಕೇವಲ ಉದ್ಯೋಗವಲ್ಲ; ಅದು ಪವಿತ್ರ ಧರ್ಮ, ಸಮಾಜದ ಭವಿಷ್ಯ ಕಟ್ಟುವ ಮಹಾಯಜ್ಞ. ಒಬ್ಬ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ