ಜೀವ ಕೈಯಲ್ಲೇ ಹಿಡಿದುಕೊಂಡೇ ಜನಸಂಚಾರ
ಈ ಸೇತುವೆ ನಿರ್ಮಾಣವಾಗಿ ಸುಮಾರು ದಶಕಗಳು ಕಳೆದಿವೆ ಈ ಸೇತುವೆ ಅತ್ಯಂತ ಅವಶ್ಯಕವಾಗಿದ್ದು ಈ ಸೇತುವೆಯನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಿದರೆ ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಈ ಕೂಡಲೇ ತಟ್ಟಿ ಹಳ್ಳದ ಸೇತುವೆಯನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಗಡಿನಾಡು ಹಿತರಕ್ಷಣ ವೇದಿಕೆಯ ಅಧ್ಯಕ್ಷ ಬಸವರಾಜ್ ಬಂಗಿ ಆಗ್ರಹಿಸಿದ್ದಾರೆ
ಈ ಕುರಿತು ಮಾತನಾಡಿರುವ ಅವರು ಕಿತ್ತೂರು ಗ್ರಾಮದಿಂದ 12 ಕಿಲೋಮೀಟರ್ ಅಂತರದಲ್ಲಿದೆ ಆದರೆ ಗಂಧಿಗವಾಡ ತಿಗಡೊಳ್ಳಿ ಮಧ್ಯದಲ್ಲಿರುವ ತಟ್ಟಿ ಹಳ್ಳದ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು ಜನರು ಇಟಗಿ ಇಟಗಿ ಕ್ರಾಸ್ ಮೂಲಕ ಕಿತ್ತೂರನ್ನು ಸಂಪರ್ಕಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಗಂಧಿಗವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನ ಕಿತ್ತೂರಿಗೆ ತೆರಳಬೇಕೆಂದರೆ ಈ ಸೇತುವೆ ಮೇಲೆ ಹಾದು ಹೋಗುವುದು ಅನಿವಾರ್ಯ ದಿನನಿತ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು ವ್ಯಾಪಾರಸ್ಥರು ನೌಕರರು ಇಲ್ಲಿ ಹಾದು ಹೋಗಬೇಕೆಂದರೆ ಕೈಯಲ್ಲಿ ಜೀವ ಹಿಡಿದುಕೊಂಡು ಹೋಗುತ್ತಿದ್ದಾರೆ
ಇನ್ನು ಈ ಭಾಗದಲ್ಲಿ ಕಬ್ಬು ಬೆಳೆಗಾರರು ಹೆಚ್ಚಾಗಿದ್ದು ಕಬ್ಬು ತುಂಬಿದ ಲಾರಿ ಹಾಗೂ ಟ್ರ್ಯಾಕ್ಟರ್ ಗಳನ್ನು ಇದೆ ಸೇತುವೆ ಮೂಲಕ ಹಾಯ್ದು ಕಾರ್ಖಾನೆಗಳಿಗೆ ಕಬ್ಬು ಪೂರೈಸಬೇಕಾಗಿದೆ ಇದು ಅತ್ಯಂತ ಪ್ರಯಾಸದ ಕೆಲಸವಾಗಿದ್ದು ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ ಈ ಸೇತುವೆಯನ್ನು ದೊಡ್ಡದಾಗಿ ನಿರ್ಮಿಸಿದರೆ ಕಿತ್ತೂರು ಗಂಧಿಗವಾಡ ಬಸ್ ಸಂಚಾರ ಕೂಡ ಆರಂಭವಾಗುತ್ತದೆ ಹೀಗಾಗಿ ಈಗಲಾದರೂ ಸಂಬಂಧಪಟ್ಟ ಇಲಾಖೆ ಈ ಕಡೆಗೆ ಗಮನ ಹರಿಸಿ ಈ ಸೇತುವೆಯನ್ನು ದೊಡ್ಡದಾಗಿ ನಿರ್ಮಿಸಬೇಕೆಂದು ಬಸವರಾಜ್ ಬಂಗಿ ಆಗ್ರಹಿಸಿದ್ದಾರೆ.
ಇನ್ನು ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ ಎಂ ರಾಜಿಬಾಯಿ ಮಾತನಾಡಿ ಖಾನಾಪುರ ತಾಲೂಕಿನ ರಾಜಕಾರಣಿಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಜನರು ಮೂಲಭೂತ ಸೌಲಭ್ಯಗಳಿಂದ ಜನರು ವಂಚಿತರಾಗುತ್ತಿದ್ದಾರೆ ಕಾರಣ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಅಣ್ಣ ಜಾರಕಿಹೊಳಿ ಅವರು ಈ ಕಡೆಗೆ ಗಮನಹರಿಸಿ ಸೇತುವೆಯನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಿ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡಿರುತ್ತಾರೆ.