Breaking News

ಬಾಗಲಕೋಟೆಗೆ ಅಂಟಿದ ಕೊಲ್ಕತ್ತಾದಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣ. ಪ್ರಕರಣದ ಎ1 ಆರೋಪಿ ಬಾಗಲಕೋಟೆ ಮೂಲದ ಪರಮಾನಂದ

Spread the love

ಬಾಗಲಕೋಟೆಗೆ ಅಂಟಿದ ಕೊಲ್ಕತ್ತಾದಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣ.
ಪ್ರಕರಣದ ಎ1 ಆರೋಪಿ ಬಾಗಲಕೋಟೆ ಮೂಲದ ಪರಮಾನಂದ
ಕೊಲ್ಕತ್ತಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಜೋಕಾ ಐಐಎಂ ಎಂ.ಬಿ.ಎ ಎರಡನೇ ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಎ1 ಆರೋಪಿ ಬಾಗಲಕೋಟೆ ಮೂಲದ ಪರಮಾನಂದ ಟೋಪಣ್ಣವರ ಎಂಬ ಯುವಕನಾಗಿದ್ದಾನೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದ ನಿವಾಸಿಯಾದ ಪರಮಾನಂದ ಟೋಪಣ್ಣವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಪರಮಾನಂದ, ಇತ್ತೀಚೆಗಷ್ಟೆ ತನ್ನ ಹಾಸ್ಟೆಲ್ ಗೆ ಯುವತಿಯನ್ನ ಕರೆಸಿ, ಪಿಜ್ಜಾ ತಿನ್ನಿಸಿ ಮತ್ತು ಪಾನೀಯ ನೀಡಿ ಅತ್ಯಾಚಾರ ಎಸಗಿದ ಎನ್ನಲಾಗಿದೆ.
ಜುಲೈ 12 ರಂದು ಪೊಲೀಸರು ಪರಮಾನಂದನನ್ನು ಬಂಧಿಸಿದ್ದು, ಪ್ರಕರಣವು ಈಗ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ.. ಯುವತಿಯ ಕುಟುಂಬಸ್ಥರು ಆರೋಪ ತಳ್ಳಿ ಹಾಕುತ್ತಿದ್ದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಪರಮಾನಂದನ ಕುಟುಂಬಸ್ಥರು ಕೂಡಾ ವಿಚಾರಣೆಗೆ ಕೊಲ್ಕತ್ತಾಗೆ ತೆರಳಿರುವುದು ತಿಳಿದುಬಂದಿದೆ.

Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಕೈದಿಯಿಂದ ‘ಉತ್ತಮರ ಸಂಗ’ ಹಾಡು ಹಾಡಿಸಿದ ಪ್ರೇಮಕವಿ ಕೆ.ಕಲ್ಯಾಣ್

Spread the loveಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿ, ಜೈಲು ಸೇರಿದ್ದ ಶಿಕ್ಷಾಬಂಧಿಯಲ್ಲಿದ್ದ ಸುಪ್ತ ಪ್ರತಿಭೆ ಗುರುತಿಸಿ ಅವರಿಂದ ಪರಪ್ಪನ ಅಗ್ರಹಾರ ಜೈಲಧಿಕಾರಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ