Breaking News

ಧಾರವಾಡ ಜಿಲ್ಲೆಯ ನೂತನ ಎಸ್‌ಪಿಯಾಗಿ ಗುಂಜನ್ ಆರ್ಯ, ಅಧಿಕಾರ ಸ್ವೀಕಾರ….ನಿರ್ಗಮಿತ ಎಸ್‌ಪಿ ಗೋಪಾಲ್ ಬ್ಯಾಕೋಡ್‌ರಿಂದ ಅಧಿಕಾರ ಹಸ್ತಾಂತರ.

Spread the love

ಧಾರವಾಡ ಜಿಲ್ಲೆಯ ನೂತನ ಎಸ್‌ಪಿಯಾಗಿ ಗುಂಜನ್ ಆರ್ಯ, ಅಧಿಕಾರ ಸ್ವೀಕಾರ….ನಿರ್ಗಮಿತ ಎಸ್‌ಪಿ ಗೋಪಾಲ್ ಬ್ಯಾಕೋಡ್‌ರಿಂದ ಅಧಿಕಾರ ಹಸ್ತಾಂತರ.
2018ನೇ ಬ್ಯಾಚ್ ಐಪಿಎಸ್ ಅಧಿಕಾರಿ ಗುಂಜನ್ ಆರ್ಯ ಅವರು ಈಗ ಧಾರವಾಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದ್ದು, ನಿರ್ಗಮಿತ ಎಸ್‌ಪಿ ಗೋಪಾಲ್ ಬ್ಯಾಕೋಡ್ ಅವರು ಅಧಿಕಾರ ಹಸ್ತಾಂತರ ಮಾಡಿದರು.‌
ಗುಂಜನ್ ಆರ್ಯ ಅವರು ಮೂಲತಃ ಮಧ್ಯಪ್ರದೇಶ ರಾಜ್ಯದವರು, 2018ರ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಮೊದಲು ಅವರು ರಾಯಚೂರು ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಚಿಕ್ಕಮಂಗಳೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಧಾರವಾಡ ಎಸ್‌ಪಿ ಆಗಿ ನೇಮಕವಾಗುವ ಮೊದಲು ಅವರು ಬೆಂಗಳೂರಿನಲ್ಲಿ ರಾಜ್ಯ ಆಂತರಿಕ ಭದ್ರತಾ ವಿಭಾಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆಯಲ್ಲಿದ್ದರು.
ಬೆಂಗಳೂರಿಗೆ ವರ್ಗಾವಣೆ ಆಗಿರುವ ಡಾ.ಗೋಪಾಲ ಬ್ಯಾಕೋಡ್ ಅವರಿಗೆ ಇಂದು ಸಂಜೆ ಎಸ್.ಪಿ.ಕಚೇರಿಯಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬಿಳ್ಕೋಡುಗೆ ನೀಡಿ, ನೂತನ ಎಸ್.ಪಿ.ಗುಂಜನ್ ಆರ್ಯ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಬರಮನಿ, ಉಪ ಪೊಲೀಸ ವರಿಷ್ಠಾಧಿಕಾರಿ ವಿನೋದ ಮುಕ್ತೆದಾರ, ಸಿಇಎನ್ ಡಿವೈಎಸ್ ಪಿ ಶಿವಾಂದ ಕಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಕರ್ನಾಟಕದ ಶಾಲೆಗಳಲ್ಲಿ U ಶೇಪ್​ನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಗೆ ಒತ್ತಾಯ: ಸಚಿವ ಮಧು ಬಂಗಾರಪ್ಪಗೆ ಪತ್ರ

Spread the loveಬೆಂಗಳೂರು, ಜುಲೈ 16: ಇನ್ಮುಂದೆ ಶಾಲೆಗಳಲ್ಲಿ ಲಾಸ್ಟ್ ಬೆಂಚ್, ಫಸ್ಟ್ ಬೆಂಚ್​ ವಿದ್ಯಾರ್ಥಿಗಳು ಎಂಬ ವಿಧಾನಕ್ಕೆ ಬ್ರೇಕ್ ಬೀಳುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ